ನೈಗರ್‌ಗೆ ಪಲಾಯನ: ಗಡಾಫಿ ನಿರಾಕರಣೆ

ಶುಕ್ರವಾರ, ಮೇ 24, 2019
22 °C

ನೈಗರ್‌ಗೆ ಪಲಾಯನ: ಗಡಾಫಿ ನಿರಾಕರಣೆ

Published:
Updated:

ಲಂಡನ್ (ಐಎಎನ್‌ಎಸ್): ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ದಕ್ಷಿಣದ ನೈಗರ್ ದೇಶಕ್ಕೆ ಪಲಾಯನ ಮಾಡಿರುವ ಬಿಬಿಸಿ ವರದಿಯನ್ನು ಅಲ್ಲಗಳೆದಿದ್ದು, ಇದು ಸುಳ್ಳು ಎಂದು ಹೇಳಿದ್ದಾರೆ.

ಸಿರಿಯಾದ ಟಿವಿಗೆ ದೂರವಾಣಿ ಮೂಲಕ ಸಂಪರ್ಕಿಸಿರುವ ಗಡಾಫಿ, ತನ್ನ ಸೇನೆ ನ್ಯಾಟೊ ಸೈನ್ಯವನ್ನು ಹಿಂದಿಕ್ಕಿ, ಬಂಡುಕೋರರನ್ನು ದಮನ ಮಾಡುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.ಅಂತರರಾಷ್ಟ್ರೀಯ ಅಪರಾಧ ಕೋರ್ಟ್ ಗಡಾಫಿ ಬಂಧನಕ್ಕೆ ಪ್ರಯತ್ನಿಸುತ್ತಿದೆ. ಲಿಬಿಯಾದ ಬಂಡುಕೋರರು ಗಡಾಫಿಗೆ ಆಶ್ರಯ ನೀಡದಂತೆ ನೈಗರ್ ದೇಶವನ್ನು ಕೋರಿದ್ದಾರೆ.ಗಡಾಫಿ ಪತ್ನಿ ಹಾಗೂ ಮೂವರು ಮಕ್ಕಳಿಗೆ ಅಲ್ಜೀರಿಯ ಮಾನವೀಯ ಆಧಾರದ ಮೇಲೆ ಆಶ್ರಯ ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry