ಗುರುವಾರ , ಮೇ 13, 2021
24 °C
ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಟೂರ್ನಿ

ನೈಜೀರಿಯಾ- ಉರುಗ್ವೆ ಇಂದು ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯೊ ಡಿ ಜನೈರೊ (ರಾಯಿಟರ್ಸ್‌): ಮೊದಲ ಪಂದ್ಯದಲ್ಲಿ ದೊರೆತ ಭರ್ಜರಿ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ನೈಜೀರಿಯಾ ತಂಡ ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಉರುಗ್ವೆ ತಂಡದ ಸವಾಲನ್ನು ಎದುರಿಸಲಿದೆ.ಆಫ್ರಿಕನ್ ಚಾಂಪಿಯನ್ ಎನಿಸಿರುವ ನೈಜೀರಿಯಾ `ಬಿ' ಗುಂಪಿನ ಮೊದಲ ಪಂದ್ಯದಲ್ಲಿ ತಾಹಿತಿ ವಿರುದ್ಧ 6-1 ಗೋಲುಗಳ ಸುಲಭ ಗೆಲುವು ಪಡೆದಿತ್ತು. ಆದರೆ ಉರುಗ್ವೆ ವಿರುದ್ಧ ತಂಡಕ್ಕೆ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ.ಉರುಗ್ವೆ ಮೊದಲ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ಕೈಯಲ್ಲಿ 1-2 ರಲ್ಲಿ ಸೋಲು ಅನುಭವಿಸಿತ್ತು. ಆದ್ದರಿಂದ ಮುಂದಿನ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಳ್ಳಲು ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.ದಿನದ ಮತ್ತೊಂದು ಪಂದ್ಯದಲ್ಲಿ ಸ್ಪೇನ್ ಹಾಗೂ ತಾಹಿತಿ ತಂಡಗಳು ಎದುರಾಗಲಿವೆ. ಈ ಪಂದ್ಯದಲ್ಲಿ ಸ್ಪೇನ್ ಗೆಲ್ಲುವುದು ಖಚಿತ. ತಾಹಿತಿ ಎಷ್ಟರಮಟ್ಟಿಗೆ ಪ್ರತಿರೋಧ ಒಡ್ಡುತ್ತದೆ ಎಂಬುದನ್ನು ನೋಡಬೇಕು.ಬುಧವಾರ ತಡರಾತ್ರಿ ನಡೆಯುವ `ಎ' ಗುಂಪಿನ ಪಂದ್ಯಗಳಲ್ಲಿ ಬ್ರೆಜಿಲ್- ಮೆಕ್ಸಿಕೊ ಮತ್ತು ಇಟಲಿ- ಜಪಾನ್ ತಂಡಗಳು ಎದುರಾಗಲಿವೆ. ಇಟಲಿ ಮತ್ತು ಬ್ರೆಜಿಲ್ ತಮ್ಮ ಮೊದಲ ಪಂದ್ಯಗಳಲ್ಲಿ ಗೆಲುವು ಪಡೆದಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.