ಸೋಮವಾರ, ಮೇ 23, 2022
21 °C

ನೈಟ್ ರೈಡರ್ಸ್ ಆಸೆ ಜೀವಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೈಟ್ ರೈಡರ್ಸ್ ಆಸೆ ಜೀವಂತ

ಬೆಂಗಳೂರು: `ಆರಂಭದಲ್ಲಿ ಹರಿಯುವ ರನ್‌ಗಳ ಬಗ್ಗೆ ಚಿಂತೆ ಬೇಡ. ಆದರೆ 6ರಿಂದ 15 ಓವರ್‌ಗಳ ನಡುವೆ ನಿಮ್ಮ ಸಾಮರ್ಥ್ಯ ತೋರಿಸಬೇಕು~ -ಇದು ಬೌಲಿಂಗ್ ಕೋಚ್ ವಾಸೀಮ್ ಅಕ್ರಮ್ ತಮ್ಮ ಬೌಲರ್‌ಗಳಿಗೆ ಹೇಳಿದ ಕಿವಿಮಾತು.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಕ್ರಮ್ ಅವರ ಮಾತನ್ನು ಉಳಿಸಿಕೊಂಡಿದ್ದು ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳು. ಪ್ರಭಾವಿ ಬೌಲಿಂಗ್ ದಾಳಿಯ ಪ್ರಯತ್ನದ ಅಡಿಪಾಯದ ಮೇಲೆ ಜಯದ ಕಳಶವಿಟ್ಟಿದ್ದು ಜಾಕ್ ಕಾಲಿಸ್ ಹಾಗೂ ಗೌತಮ್ ಗಂಭೀರ್ ಬ್ಯಾಟಿಂಗ್.ಪರಿಣಾಮ ದಕ್ಷಿಣ ಆಫ್ರಿಕಾದ ವಾರಿಯರ್ಸ್ ಎದುರಿನ `ಬಿ~ ಗುಂಪಿನ ಈ ಪಂದ್ಯದಲ್ಲಿ ಸುಲಭವಾಗಿಯೇ ಗೆದ್ದ ನೈಟ್ ರೈಡರ್ಸ್ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.ಆರಂಭದಲ್ಲಿ ಅಬ್ಬರಿಸಿದ್ದ   ವಾರಿಯರ್ಸ್ ತಂಡವನ್ನು ಕೇವಲ 155 ರನ್‌ಗಳಿಗೆ ನಿಯಂತ್ರಿಸುವಲ್ಲಿ ರೈಡಸ್ ಬೌಲರ್‌ಗಳು ಯಶಸ್ವಿಯಾದರು. ಆ ಮೊತ್ತ ಗಂಭೀರ್ ಪಡೆಗೆ ದೊಡ್ಡ ಸವಾಲೇನೂ ಆಗಲಿಲ್ಲ. ಮಳೆ ಕೂಡ ಅವರ ಗೆಲುವಿನ ಹಾದಿಯನ್ನು ಸುಗಮಗೊಳಿಸಲು ಕೊಂಚ ನೆರವಾಯಿತು.ಎದುರಾಳಿಗೆ ಸಾಧಾರಣ ಗುರಿ ನೀಡಿದ್ದ ವಾರಿಯರ್ಸ್ ಫೀಲ್ಡಿಂಗ್‌ನಲ್ಲೂ ಎಡವಿತು. ಅದು ಈ ತಂಡದ ಸೋಲಿಗೆ ಆಹ್ವಾನ ನೀಡಿತು. ಬೌಷರ್ ಒಮ್ಮೆ ಸೊಸೊಬೆ ಬೌಲಿಂಗ್‌ನಲ್ಲಿ ಕ್ಯಾಚ್ ಕೈಬಿಟ್ಟಾಗ ಕಾಲಿಸ್ 15 ರನ್ ಗಳಿಸಿದ್ದರು. ಬೋಥಾ ಎಸೆತದಲ್ಲಿ ಸ್ಮಟ್ಸ್ ಕ್ಯಾಚ್ ಬಿಟ್ಟಾಗ ಗಂಭೀರ್ 21 ರನ್ ಕಲೆಹಾಕಿದ್ದರು. ಅದು ಕಾಲಿಸ್ (ಅಜೇಯ 31; 19 ಎಸೆತ, 3 ಬೌಂ. 1 ಸಿ) ಹಾಗೂ ಗಂಭೀರ್ (ಅಜೇಯ 33; 23 ಎಸೆತ, 3 ಬೌ, 1 ಸಿ) ನೆರವಿಗೆ ಬಂತು.ಆರಂಭದಲ್ಲಿ ವಾರಿಯರ್ಸ್‌ನ ಜೆ.ಟಿ.ಸ್ಮಟ್ಸ್ (46; 43 ಎಸೆತ, 6 ಬೌಂಡರಿ) ಹಾಗೂ ಕಾಲಿನ್ ಇಂಗ್ರಾಮ್ (61; 47 ಎಸೆತ, 3 ಬೌ, 3 ಸಿ.) ಜೊತೆಯಾಟದ ವೈಖರಿ ನೋಡಿದಾಗ ರೈಡರ್ಸ್ ಹೋರಾಟ ುಗಿದು ಹೋಯಿತೇನೊ ಎನ್ನುವ ಭಾವನೆ ಮೂಡಿತ್ತು. ಕಾರಣ ಇವರಿಬ್ಬರು ಕೇವಲ 61 ಎಸೆತಗಳಲ್ಲಿ 80 ರನ್ ಕಲೆಹಾಕಿದರು.ಮಳೆ ಕಾರಣ ಪಂದ್ಯ ರದ್ದು:
ಸಾಮರ್ಸೆಟ್ ಹಾಗೂ ಸೌತ್ ಆಸ್ಟ್ರೇಲಿಯಾದ ರೆಡ್‌ಬ್ಯಾಕ್ಸ್ ತಂಡಗಳ ನಡುವೆ ಶನಿವಾರ ನಡೆಯಬೇಕಿದ್ದ ಇನ್ನೊಂದು ಪಂದ್ಯ ಮಳೆಗೆ ಆಹುತಿಯಾಯಿತು.

ಸ್ಕೋರು ವಿವರ

ವಾರಿಯರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 155


ಜೆ.ಟಿ.ಸ್ಮಟ್ಸ್ ಸಿ ಇಕ್ಬಾಲ್ ಅಬ್ದುಲ್ಲಾ ಬಿ ಎಲ್.ಬಾಲಾಜಿ  46

ಆ್ಯಷ್ವೆಲ್ ಪ್ರಿನ್ಸ್ ಬಿ ಜಾಕ್ ಕಾಲಿಸ್  04

ಕಾಲಿನ್ ಇಂಗ್ರಾಮ್ ಸಿ ಇಕ್ಬಾಲ್ ಅಬ್ದುಲ್ಲಾ ಬಿ ಬ್ರೆಟ್ ಲೀ  61

ಮಾರ್ಕ್ ಬೌಷರ್ ಔಟಾಗದೆ  38

ಕ್ರೇಗ್ ತೈಸನ್ ಸಿ ಜಾಕ್ ಕಾಲಿಸ್ ಬಿ ಎಲ್.ಬಾಲಾಜಿ  00

ಕೆಲಿ ಸ್ಮಟ್ಸ್ ಔಟಾಗದೆ  00

ಇತರೆ (ಬೈ-1, ಲೆಗ್‌ಬೈ-3, ನೋಬಾಲ್-1, ವೈಡ್-1)  06

ವಿಕೆಟ್ ಪತನ: 1-15 (ಪ್ರಿನ್ಸ್; 1.6); 2-95 (ಮಟ್ಸ್; 12.1); 3-141 (ಇಂಗ್ರಾಮ್; 18.5); 4-152 (ತೈಸನ್; 19.4).

ಬೌಲಿಂಗ್: ಬ್ರೆಟ್ ಲೀ 4-0-25-1, ಜಾಕ್ ಕಾಲಿಸ್ 4-0-33-1 (ವೈಡ್-1), ಯೂಸುಫ್ ಪಠಾಣ್ 3-0-23-0, ಇಕ್ಬಾಲ್ ಅಬ್ದುಲ್ಲಾ 2-0-12-0, ಶಕಿಬ್ ಅಲ್ ಹಸನ್ 3-0-23-0, ಎಲ್.ಬಾಲಾಜಿ 4-0-35-2 (ನೋಬಾಲ್-1)ಕೋಲ್ಕತ್ತ ನೈಟ್ ರೈಡರ್ಸ್ 9 ಓವರ್‌ಗಳಲ್ಲಿ 1ವಿಕೆಟ್ ನಷ್ಟಕ್ಕೆ 83

ಮನ್ವಿಂದರ್ ಬಿಸ್ಲಾ ಸಿ ಮಾರ್ಕ್ ಬೌಷರ್ ಬಿ ವೇಯ್ನ ಪಾರ್ನೆಲ್  19

ಜಾಕ್ ಕಾಲಿಸ್ ಔಟಾಗದೆ  31

ಗೌತಮ್ ಗಂಭೀರ್ ಔಟಾಗದೆ  33

ವಿಕೆಟ್ ಪತನ: 1-35 (ಬಿಸ್ಲಾ; 3.3).

ಬೌಲಿಂಗ್: ಲೊನ್ವಾಬೊ ಸೊಸೊಬೆ 2-0-20-0, ರಸ್ಟಿ ಥೆರಾನ್ 2-0-14-0, ವೇಯ್ನ ಪಾರ್ನೆಲ್ 2-0-24-1, ನಿಕಿ ಬೋಯೆ 2-0-20-0, ಜೋಹಾನ್ ಬೋಥಾ 1-0-5-0ಫಲಿತಾಂಶ: ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ನೈಟ್ ರೈಡರ್ಸ್‌ಗೆ 22 ರನ್‌ಗಳ ಗೆಲುವು. ಪಂದ್ಯ ಶ್ರೇಷ್ಠ: ಕಾಲಿನ್ ಇಂಗ್ರಾಮ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.