ಶನಿವಾರ, ಜನವರಿ 25, 2020
29 °C

ನೈಸರ್ಗಿಕ ರಬ್ಬರ್ ಆಮದು ಸುಂಕ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶೀಯ ರಬ್ಬರ್‌ ಬೆಲೆ ತೀವ್ರವಾಗಿ ಕುಸಿಯುತ್ತಿರುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ನೈಸರ್ಗಿಕ ರಬ್ಬರ್‌ನ ಆಮದು ಸುಂಕ ವನ್ನು ಕೆ.ಜಿ.ಗೆ ₨30ರಷ್ಟು (ಶೇ 20 ರಷ್ಟು) ಹೆಚ್ಚಿಸಿದೆ. ಆ ಮೂಲಕ ಕರ್ನಾ ಟಕದ ಕರಾವಳಿ ಜಿಲ್ಲೆ, ಕೇರಳ ಸೇರಿದಂತೆ ದೇಶದ ವಿವಿಧೆಡೆಯ 12 ಲಕ್ಷ ರಬ್ಬರ್‌ ಬೆಳೆಗಾರರ ಹಿತಕಾಯಲು ಮುಂದಾಗಿದೆ.ನೈಸರ್ಗಿಕ ರಬ್ಬರ್‌ ಆಮದು ಹೆಚ್ಚುತ್ತಾ ಹೋಗಿದ್ದರಿಂದ ಮಾರುಕಟ್ಟೆಯಲ್ಲಿ ದೇಶೀಯ ರಬ್ಬರ್‌ ಬೆಲೆ ಕಳವಳ ಕಾರಿ ಪ್ರಮಾಣದಲ್ಲಿ ಕುಸಿಯುತ್ತಲೇ ಇತ್ತು. ಬೆಲೆ ಕುಸಿತ ತಡೆಗೆ ಸುಂಕ ಏರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಪ್ರತಿಕ್ರಿಯಿಸಿ (+)