ಸೋಮವಾರ, ಮಾರ್ಚ್ 8, 2021
22 °C
ಜಿಲ್ಲೆಯ ಕಡೆಗಣನೆಗೆ ಆಕ್ರೋಶ, ಸರ್ಕಾರಕ್ಕೆ ಚಾಟಿ ಬೀಸಿದ ಸಮ್ಮೇಳನಾಧ್ಯಕ್ಷರು

ನೊಂದವರಿಗಷ್ಟೇ ಗೊತ್ತು ಬೆಂದವರ ನೋವು

ಶರತ್‌ ಹೆಗ್ಡೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೊಂದವರಿಗಷ್ಟೇ ಗೊತ್ತು ಬೆಂದವರ ನೋವು

ಶ್ರೀರಾಮನಗರ, (ಗಂಗಾವತಿ), ಜಿ.ಎಸ್‌. ಶಿರುದ್ರಪ್ಪ  ವೇದಿಕೆ: ನೊಂದವರಿಗಷ್ಟೇ ಗೊತ್ತು ಬೆಂದವರ ನೋವು. ಅಕಾಡೆಮಿ ಗಳಲ್ಲಿ ಜಿಲ್ಲೆಗೆ ಮಾನ್ಯತೆ ಸಿಗದಿದ್ದರೆ ವಿಧಾನಸೌಧದ ಮುಂದೆ ಆಮರಣಾಂತ ಉಪವಾಸ ನಡೆಸುವುದಾಗಿ ಎಸ್‌.ವಿ.ಪಾಟೀಲ್‌ ಗುಂಡೂರು ಎಚ್ಚರಿಸಿದರು.ಇಲ್ಲಿ ಸೋಮವಾರ ಆರಂಭವಾದ ಜಿಲ್ಲಾಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ  ಸ್ಥಾನದಿಂದ ಮಾತ ನಾಡಿದ ಅವರು, ರಾಜ್ಯದಲ್ಲಿರುವ 13 ಅಕಾಡೆಮಿಗಳಲ್ಲಿ ಅಧ್ಯಕ್ಷರ ನೇಮಕಾತಿಗೆ ಅರ್ಹರಾದವರು ಜಿಲ್ಲೆಯಲ್ಲಿದ್ದಾರೆ. ನಾವು ಯಾವ ಪರೀಕ್ಷೆ ಎದುರಿಸಲೂ ಸಿದ್ಧ. ಇಲ್ಲೊಂದು ಅಕಾಡೆಮಿ ನಿರ್ಮಾಣ ಆಗಬೇಕು. ಅದು ಆಗುವವರೆಗೆ ಜಿಲ್ಲೆಯ ಹಿರಿಯ ಸಾಹಿತಿ, ಮುಖಂಡರನ್ನು ಸರದಿ ಉಪವಾಸ ಕುಳ್ಳಿರಿಸಿ ತಾವು ಆಮರಣಾಂತ ಉಪವಾಸ ನಡೆಸುವುದಾಗಿ ಹೇಳಿದರು.ಯಾರು ಬೇಕಾದರೂ ರಾಜಕಾರಣಿ ಆಗಬಹುದು. ಆದರೆ, ಎಷ್ಟು ಮಂದಿ ರಾಜಕಾರಣಿಗಳಲ್ಲಿ ಕಲೆ, ಸಾಹಿತ್ಯ, ನಾಟಕ, ಸಂಸ್ಕೃತಿಯ ಪರಿಣತಿ ಇದೆ? ನಮ್ಮ ದುರಂತ ಇದು. ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಬಳಿಕ ಎಲ್ಲವೂ ಸಿಕ್ಕಿತು ಎಂದು ಭಾವಿಸಬೇಕಿಲ್ಲ. ಸದಾ ತೂಕಡಿಕೆಯಲ್ಲಿರುವ ನಮ್ಮ ಅನ್ನ ಕಸಿಯುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ನುಡಿದರು.ಜಿಲ್ಲೆಯ ಜೀವನಾಡಿ ತುಂಗಭದ್ರೆಯ ನೀರಾವರಿ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಅಣೆಕಟ್ಟೆಯಲ್ಲಿ ತುಂಬಿದ 30 ಟಿಎಂಸಿ ಹೂಳು ತೆಗೆಯಬೇಕು. ಆಂಧ್ರಪ್ರದೇಶಕ್ಕೆ ಮೇ ತಿಂಗಳಲ್ಲಿ ಬಿಡಬೇಕಾದ ನೀರನ್ನು ಈಗಲೇ ಬಿಟ್ಟಿರುವುದು ಸಲ್ಲದು. ಕಾಲುವೆಗಳ ಕಳಪೆ ಕಾಮಗಾ ರಿಯಿಂದಾಗಿ  ಕೊನೇ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂದು ವಿಷಾದಿಸಿದರು.ನ್ಯಾಯದ ಕೂಗು ಸರ್ಕಾರಕ್ಕೆ ಸುಲಭವಾಗಿ ಮುಟ್ಟುವು ದಿಲ್ಲ. ಬೆಳಗಾವಿ ವಿಧಾನಸೌಧದ ಮುಂದೆ ರೈತ ಆತ್ಮಹತ್ಯೆ ಮಾಡಿಕೊಂಡ ಬಳಿಕವಷ್ಟೇ ಸರ್ಕಾರ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿತು. ಮುಖ್ಯಮಂತ್ರಿ ಕರ್ನಾಟಕವೆಂಬ ಕುಟುಂಬದ ಹಿರಿಯರು. ತಂದೆಯಾದವರು ಎಲ್ಲ ಮಕ್ಕಳನ್ನು ಒಂದೇ ಎಂದು ಪರಿಗಣಿಸಬೇಕು. ಆದರೆ, ಇದುವರೆಗೆ ಜಿಲ್ಲೆಯನ್ನು ಎಲ್ಲ ದೃಷ್ಟಿಯಿಂದಲೂ ಕಡೆಗಣಿಸಲಾಗಿದೆ. ನಿರಂತರ ಸರ್ಕಾರದ ಅವಕೃಪೆಗೆ ಒಳಗಾದ ಜಿಲ್ಲೆಯನ್ನು ಮುಖ್ಯಮಂತ್ರಿ ಅಪ್ಪಿಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.ಗಂಗಾವತಿಯ ಮರಳಿ ಸಕ್ಕರೆ ಕಾರ್ಖಾನೆ 2005ರಲ್ಲಿ ದಿವಾಳಿಯಾಗಿ ಮುಚ್ಚಿದಾಗ  ಕೇವಲ ಏಳು ಕೋಟಿ ರೂಪಾಯಿ ಸಾಲ ಮರುಪಾವತಿಸಲು ಕಂಪೆನಿ ಹಾಗೂ ಅದರ ನಿವೇಶನವನ್ನು ಆಂಧ್ರಮೂಲದ ರಾಮಯ್ಯರೆಡ್ಡಿ ಒಡೆತನದ ರಾಮಬುಲ್‌ಟೆಕ್‌ ಕಂಪೆನಿಗೆ ಸರ್ಕಾರ ಮಾರಾಟ ಮಾಡಿತು. ಕಾರ್ಖಾನೆ ಪುನರಾರಂಭವಾಗುವ ಭರವಸೆ ಉಳಿದಿಲ್ಲ.ಆದ್ದರಿಂದ ಕಾರ್ಖಾನೆ ಮಾರಾಟದಿಂದ ಪಡೆದ ರೂ 48 ಕೋಟಿ ಹಣವನ್ನು ಅವರಿಗೆ ಮರಳಿಸಿ ಕಾರ್ಖಾನೆ ಪುನರಾರಂಭಿಸಿದರೆ ಈ ಭಾಗಕ್ಕೆ ಅನ್ನ ಕಲ್ಪಿಸಿದಂತಾಗುತ್ತದೆ. ಸುಮಾರು 2 ಲಕ್ಷ ಟನ್‌ ಕಬ್ಬು ಹೊರರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಬಹುದು. ರಾಜ್ಯದಲ್ಲಿ  9 ಸಕ್ಕರೆ ಕಾರ್ಖಾನೆ ತೆರೆಯಬೇಕಾದ ಅಗತ್ಯತೆಯನ್ನು ಮರಳಿ ಸಕ್ಕರೆ ಕಾರ್ಖಾನೆಯೊಂದೇ ಪೂರೈಸಬಲ್ಲದು ಎಂದು ಅಭಿಪ್ರಾಯಪಟ್ಟರು.ಕನ್ನಡ ತೆಲುಗು ಬಾಂಧವ್ಯದ ಬಗ್ಗೆ ಮಾತನಾಡಿದ ಅವರು, ತೆಲುಗು ಭಾಷೆಯನ್ನಾಡುವ ಅಸಂಖ್ಯಾತ ಮಂದಿ ಇಲ್ಲಿ ನೆಲೆಸಿ ಕನ್ನಡದ ಧ್ವನಿಗೆ ಧ್ವನಿಯಾಗಿ ಸ್ಪಂದಿಸಿರುವುದು ಇಲ್ಲಿನವರ ಹೃದಯ ವೈಶಾಲ್ಯತೆ, ಕನ್ನಡ ಪ್ರೇಮಕ್ಕೆ ಸಾಕ್ಷಿ. ಬಯಲಾಟಕ್ಕೆ ಖ್ಯಾತಿಹೊಂದಿದ ಈ ನೆಲದಲ್ಲಿ ಕಂದಪದ್ಯ, ಶ್ರೀಸಪದ್ಯದ ತಾರಕವನ್ನು ಮೊಳಗಿಸಿ ನಮ್ಮ ರಂಗಭೂಮಿಗೆ ಬೆರೆಸಿದ ಕೀರ್ತಿ ತೆಲುಗು ಭಾಷೆ ಹಾಗೂ ಅಲ್ಲಿನ ರಗ ಕಲಾವಿದರಿಗೆ ಸಲ್ಲುತ್ತದೆ. ತೆಲುಗು ಕವಿ ಪಾಲ್ಕುರಿಕೆ ಸೋಮನಾಥ ಬಸವಪುರಾಣ ಬರೆಯುವ ಮೂಲಕ ಬಸವಣ್ಣನನ್ನು ತೆಲುಗಿಗೆ ಪರಿಚಯಿಸಿದ ಎಂದರು.ತಮ್ಮ ಲಿಖಿತ ಭಾಷಣದ ಬದಲು ಹಲವು ಹೊಸ ವಿಚಾರಗಳನ್ನು ಎತ್ತಿಕೊಂಡು ಕಟು ಶಬ್ದಗಳಲ್ಲಿ ಹೊರಹಾಕಿದರು. ಕರ್ನಾಟಕದಲ್ಲಿ ಅನ್ನ ಅಕ್ಷರ ಅರಿವಿನ ದಾಸೋಹ ನೀಡುವ ಮಠಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದು ಬೇಡ. ಬೇಕಿದ್ದರೆ ನಿತ್ಯಾನಂದನ ಮಠ ಸ್ವಾಧೀನಪಡಿಸಿಕೊಳ್ಳಲಿ ಎಂದು ಚುಚ್ಚಿದರು.

ಪುಸ್ತಕ ಪರಿಷೆಗೆ ಸಾಹಿತ್ಯಾಸಕ್ತರ ದಂಡು

ಶ್ರೀರಾಮನಗರ (ಗಂಗಾವತಿ): ಸಾಹಿತ್ಯ ಸಮ್ಮೇಳನದ ವಸ್ತು ಪ್ರದರ್ಶನಲ್ಲಿ ಪುಸ್ತಕ ಮಳಿಗೆಗಳು ಅಧಿಕ ಸಂಖ್ಯೆಯಲ್ಲಿವೆ.

ಆಧ್ಯಾತ್ಮಿಕ, ಮಾಹಿತಿ, ಜ್ಞಾನ, ಮಿದುಳು ಚುರುಕು ಗೊಳಿಸುವ, ಉದ್ಯೋಗ ಮಾಹಿತಿ ಕಣಜದ ಮಾಸಪತ್ರಿಕೆ ಸೇರಿದಂತೆ ಥರಾವರಿ ಪುಸ್ತಕಗಳಿವೆ. ಖರೀದಿಯ ಭರಾಟೆಯೂ ಜೋರಾಗಿರುವುದನ್ನು ವ್ಯಾಪಾರಿ ಎಚ್.ಎಂ. ವೀರಭದ್ರಯ್ಯಸ್ವಾಮಿ ಒಪ್ಪಿಕೊಳ್ಳುತ್ತಾರೆ.ಪುಸ್ತಕಗಳ ಅಂಗಡಿ ಜತೆಗೆ ಜಿಲ್ಲಾ, ತಾಲ್ಲೂಕು ಪಂಚಾಯಿತಿಯಿಂದ ನರೇಗಾ ಯೋಜನೆ ಹಾಗೂ ವೈಯಕ್ತಿಕ ಶೌಚಾಲಯದ ಮಾಹಿತಿ ಮಳಿಗೆ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಮಾಹಿತಿ, ಕೈಮಗ್ಗ ಉಡುಪು, ಸಿದ್ಧ ಆಹಾರದ ವಿಧಗಳು, ಕಟ್ಟಿಗೆ ಒಲೆ, ಆಯುರ್ವೇದ, ನೋವು ನಿವಾರಕ ಔಷಧ, ಚಿತ್ರಕಲಾ ಪ್ರದರ್ಶನ, ದೇಶ, ವಿದೆೇಶದ ನಾಣ್ಯ, ನೋಟು ಗಳ ಪ್ರದರ್ಶನ, ಲೇಖನ ಸಾಮಗ್ರಿ ಮಳಿಗೆಗಳು ಗಮನ ಸೆಳೆದವು. ಮಾರಾಟ ಮಳಿಗೆಗಳ ಮುಂದೆ ಸಮಾರಂಭ ವೀಕ್ಷಣೆ ಬಿಟ್ಟು ಆಸಕ್ತರು ಸೇರಿದ್ದು ಗಮನಾರ್ಹವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.