ಶನಿವಾರ, ಜನವರಿ 25, 2020
28 °C

ನೋಂದಣಾಧಿಕಾರಿ ಕಚೇರಿ ಕ್ಲರ್ಕ್ ಲೋಕಾಯುಕ್ತ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಾಗದ ಪವರ್ ಆಫ್ ಅಟಾರ್ನಿ ಸಂಬಂಧ ಶುಕ್ರವಾರ ಇಲ್ಲಿ ವ್ಯಕ್ತಿಯೊಬ್ಬರಿಂದ ರೂ 8,000 ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ದ.ಕ. ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ಕ್ಲರ್ಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕ್ಲರ್ಕ್ ಡೆವಿಡ್ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದವರು. 20011ರ ಏಪ್ರಿಲ್ 1ರ ಆದೇಶದ ಪ್ರಕಾರ ಜಾಗದ ಪವರ್ ಆಫ್ ಅಟಾರ್ನಿಗೆ ಶುಲ್ಕ ಪಾವತಿಸಬೇಕಿದೆ. ರಾಮಚಂದ್ರ ಎಂಬವರು ಜಾಗದ ಪವರ್ ಆಫ್ ಅಟಾರ್ನಿಗೆ ಇಲಾಖೆಯನ್ನು ಸಂಪರ್ಕಿಸಿದ್ದರು. ಇದಕ್ಕೆ ಡೆವಿಡ್ ಲಂಚದ ಬೇಡಿಕೆ ಇಟ್ಟಿದ್ದ. ರಾಮಚಂದ್ರ ಅವರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರತಿಕ್ರಿಯಿಸಿ (+)