ನಮ್ಮ ದೇಹ ಮತ್ತು ಮನಸ್ಸು ಜತೆಯಾಗಿ ಹೇಗೆ ಕೆಲಸ ಮಾಡುತ್ತವೆ ಎಂಬುದು ಇತ್ತೀಚೆಗೆ ನನಗೆ ಅರ್ಥವಾಯಿತು. ಅತಿಯಾಗಿ ವ್ಯಾಯಾಮ ಮಾಡಿದ್ದರಿಂದಾಗಿ ನನ್ನ ಇಡೀ ದೇಹ ನೋಯುತ್ತಿತ್ತು. ಆ ನೋವು ಕಡಿಮೆ ಮಾಡಿಕೊಳ್ಳಲು ನಾನು ಅಂಗಾತವಾಗಿ ಮಲಗಿ ಕೈಕಾಲು ಚಾಚಿದೆ. ಅದರಿಂದ ಯಾವುದೇ ಪರಿಹಾರ ದೊರಕಲಿಲ್ಲ. ಕಣ್ಣುಗಳನ್ನು ಮುಚ್ಚಿಕೊಂಡೆ. ನನಗೆ ಪರಿಚಿತವಾಗಿದ್ದ ಶ್ಲೋಕಗಳು ಅಯಾಚಿತವಾಗಿ ನೆನಪಾದವು. ನಾನು ಮೌನವಾಗಿ ಮನದಲ್ಲೇ ಅವುಗಳನ್ನು ಹೇಳಿಕೊಳ್ಳತೊಡಗಿದೆ. ನಿಧಾನವಾಗಿ ನನ್ನ ತಲೆ ಭಾರ ಕಡಿಮೆಯಾಗತೊಡಗಿತು. ಶ್ಲೋಕ ಪಠಣ ಮುಂದುವರಿಸುತ್ತಿದ್ದಂತೆ ನನ್ನ ದೇಹದ ನೋವು ಸಹ ಕಡಿಮೆಯಾಗಿತ್ತು. ಅಂತಿಮವಾಗಿ ನಾನು ಎದ್ದು ನಿಂತಾಗ ದೇಹದ ನೋವು ಸಂಪೂರ್ಣವಾಗಿ ಮಾಯವಾಗಿತ್ತು.

ಯಾವುದೇ ನೋವು, ಅಸ್ವಸ್ಥತೆ ದೇಹ ಮತ್ತು ಮನಸ್ಸಿನ ಅಸಮತೋಲನದಿಂದ ಉದ್ಭವಿಸುತ್ತದೆ. ಅಸಮತೋಲನ ಸ್ಥಿತಿಯಲ್ಲಿರುವ ದೇಹ ದುರ್ಬಲಗೊಳ್ಳುತ್ತದೆ. ಅಲ್ಲದೆ ಅದಕ್ಕೆ ನೋವಾದಂತೆ ಅನಿಸುತ್ತದೆ. ಮನಸ್ಸು ಸಮತೋಲ ಸ್ಥಿತಿಯಲ್ಲಿ ಇಲ್ಲದಾಗ ಈ ನೋವನ್ನು ದೊಡ್ಡದಾಗಿ ಕಲ್ಪಿಸಿಕೊಳ್ಳುತ್ತದೆ. ದೇಹ ಮತ್ತಷ್ಟು ದುರ್ಬಲವಾದಂತೆ ಭಾಸವಾಗುತ್ತದೆ. ಶ್ಲೋಕ ಪಠಿಸುತ್ತಾ ಹೋದಂತೆ ಮನಸ್ಸು ಸಮತೋಲ ಸ್ಥಿತಿಗೆ ಮರಳುತ್ತದೆ ಮತ್ತು ಶಾಂತವಾಗುತ್ತದೆ. ನೋವು, ದೌರ್ಬಲ್ಯ ಮತ್ತು ಅಸ್ವಸ್ಥತೆಯಿಂದ ಮನಸ್ಸು ದೂರವಿದ್ದಾಗ ದೈಹಿಕ ನೋವು ಸಹ ಗಣನೀಯವಾಗಿ ಕಡಿಮೆಯಾಗುತ್ತದೆ.

ಬಹುತೇಕ ನಾವೆಲ್ಲರೂ ನಮಗೆ ಅಗತ್ಯ ಇರುವುದಕ್ಕಿಂತ ಹೆಚ್ಚಿನ ತೊಂದರೆ ಅನುಭವಿಸುತ್ತೇವೆ. ಏಕೆಂದರೆ ಎಲ್ಲವನ್ನೂ ನಾವು ಪೂರ್ವಗ್ರಹ ಪೀಡಿತರಾಗಿ ಗ್ರಹಿಸುತ್ತೇವೆ. ನಮ್ಮ ದೇಹ, ಅಂದರೆ ಶಕ್ತಿ ನಿರಂತರವಾಗಿ ಹರಿಯುವ ಜಾಗ. ಈ ಶಕ್ತಿ ಸದಾ ಬದಲಾಗುತ್ತದೆ. ಹಾಗಾಗಿ ದೈಹಿಕ ನೋವು ನಮ್ಮನ್ನು ಅಷ್ಟೊಂದು ಬಾಧಿಸಬಾರದು. ಕೆಲವೇ ಕ್ಷಣಗಳಲ್ಲಿ ನಮ್ಮ ದೇಹವನ್ನು ನೋವಿನಿಂದ ಮುಕ್ತವಾಗಿಸುವುದು ಸಾಧ್ಯ ಎಂಬ ಅರಿವು ಸಹ ನಮಗಿದೆ. ಈ ಕಾರಣದಿಂದ ಯಾವುದೇ ಕ್ಷಣವೂ ನೋವಿನ ಕೈ ಮೇಲಾಗಲು ಬಿಡಬಾರದು. ಯಾವುದೇ ನೋವು ನಮ್ಮನ್ನು ಹಿಂಡಿ ಹಿಪ್ಪೆ ಮಾಡಬಾರದು. ನಮ್ಮ ದೇಹದಲ್ಲಿ ಶಕ್ತಿಯ ಹರಿವು ಸದಾ ಬದಲಾಗುತ್ತಾ ಇರುವುದರಿಂದ ಮನಸ್ಸಿನ ಹೊಳಪನ್ನು ಅದಕ್ಕೆ ನೀಡಬೇಕು.

ಯೋಚನೆ ಮಾಡಿ, ವ್ಯಾಯಾಮ ಮಾಡಿದ್ದರಿಂದ ಬಂದ ಮೈಕೈ ನೋವು ಸಿಹಿಯಾಗಿರುತ್ತದೆ. ಏನನ್ನೋ ಸಾಧಿಸಿದ ಸಂತೃಪ್ತಿ ನಮ್ಮಳಗೆ ಇರುತ್ತದೆ. 48 ಗಂಟೆಯೊಳಗೆ ಈ ನೋವು ಮಾಯವಾಗುತ್ತದೆ ಎಂಬ ತಿಳಿವು ನಮ್ಮಲ್ಲಿ ಇರುತ್ತದೆ. ಆದರೆ, ವಿನಾಕಾರಣ ಮೈಯಲ್ಲಿ ಕಾಣಿಸಿಕೊಂಡ ನೋವು ಸಿಹಿಯಾಗಿರುವುದಿಲ್ಲ. ನಿಮ್ಮಳಗೆ ಸಾಧನೆಯ ಸಾರ್ಥಕ್ಯ ಭಾವವೂ ಇರುವುದಿಲ್ಲ. ನೋವು ಹೋಗುತ್ತದೆಯೇ ಇಲ್ಲವೇ ಎಂಬುದು ಸಹ ನಿಮಗೆ ತಿಳಿದಿರುವುದಿಲ್ಲ. ನೀವು ಭಯ ಪಡುವುದರಿಂದಲೇ ನೋವು ದೊಡ್ಡದಾಗಿ ಕಾಣುತ್ತದೆ.

ದೇಹದ ಶಕ್ತಿಯ ಹರಿವು ಸದಾ ಬದಲಾಗುತ್ತಲೇ ಇರುವುದರಿಂದ, ಅದನ್ನು ಗುಣಪಡಿಸಬಹುದು ಎಂಬ ತಿಳಿವಳಿಕೆಯೂ ಇರುವುದರಿಂದ ನಿಮಗೆ ನೋವಿನ ಅನುಭವವೇ ಆಗದು. ಭಯ ಹೊಡೆದೋಡಿಸಿ, ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು ಜ್ಞಾನ ಪ್ರಭಾವಶಾಲಿ. ಈ ಕತ್ತಲು ತಾತ್ಕಾಲಿಕ. ನಾಳೆ ಸೂರ್ಯ ಹೊಸದಾಗಿ ಉದಯಿಸುತ್ತದೆ ಎಂಬ ಅರಿವು ಇರುವವರೆಗೆ ಯಾವುದೇ ಭಯ ನಮ್ಮನ್ನು ಕಾಡದು.

ನೋವು ಅಥವಾ ಅಸ್ವಸ್ಥತೆ ನಿವಾರಣೆಗೆ ಈ ನಾಲ್ಕು ಸುಲಭ ಉಪಾಯಗಳನ್ನು ಅನುಸರಿಸಬಹುದು.

ಎಲ್ಲೋ ನೋವು ಕಾಣಿಸಿಕೊಂಡ ತಕ್ಷಣ ಗಾಬರಿ ಆಗಬೇಡಿ. ನಿಮ್ಮ ಭಾವನೆಗಳು ನಿಯಂತ್ರಣದಲ್ಲಿ ಇದ್ದಾಗ ಅಸ್ವಸ್ಥತೆಯನ್ನು ಎದುರಿಸುವ ದೇಹದ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ನೋವಿಗೆ ಉದ್ವಿಗ್ನತೆಯ ಮಸಾಲೆ ಹಾಕದೇ ಇದ್ದಾಗ ರೋಗವನ್ನು ಹೊಡೆದೋಡಿಸುವ ಶಕ್ತಿ ಹೆಚ್ಚಿರುತ್ತದೆ.

ದೇಹ ಶಕ್ತಿಶಾಲಿಯಾದಾಗ ನೋವು ತಾನಾಗೇ ಮಾಯವಾಗುತ್ತದೆ. ಈ ಹಂತದಲ್ಲಿ ದೇಹಕ್ಕೆ ನೆರವಾಗಲು ನೀವು ಮನದೊಳಗೆ ಶ್ಲೋಕ ಪಠಿಸುವುದು, ಧ್ಯಾನ ಮಾಡುವುದು ಒಳಿತು. ಇದು ಸಾಧ್ಯವೇ ಎಂಬ ಪೂರ್ವಗ್ರಹ ಇಟ್ಟುಕೊಂಡು ಶ್ಲೋಕ ಪಠಿಸಬೇಡಿ. ಮುಕ್ತ ಮನಸ್ಸಿನಿಂದ, ಒಳ್ಳೆಯ ಭಾವನೆಯಿಂದ ಧ್ಯಾನ ಮಾಡಿ, ಶ್ಲೋಕ ಹೇಳಿಕೊಳ್ಳಿ.

ಮನಸ್ಸು ಕಾಯಿಲೆಗೆ ಅಂಜದೇ ದೃಢವಾಗಿದ್ದಾಗ ನೋವು ಸಹ ಸ್ನೇಹಿತನಾಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಶುದ್ಧವಾಗುವ ಅವಧಿ ಇದು. ಮನಸ್ಸಿನಲ್ಲಿ ಹೆಪ್ಪುಗಟ್ಟಿರುವ ಸಂಕುಚಿತ ಭಾವನೆಗಳನ್ನು ಈಗ ಹೊರಹಾಕಬೇಕು. ಆಗ ಒಳ ಮನಸ್ಸು ಸ್ವಚ್ಛವಾಗುತ್ತದೆ. ನೀವು ಸಂಪೂರ್ಣವಾಗಿ ಗುಣಮುಖರಾದಾಗ ಈ ಸಂಕುಚಿತ ಭಾವನೆ ಮತ್ತೆ ತಲೆ ಎತ್ತಲು ಬಿಡಬೇಡಿ. ನಾವು ಅಸ್ವಸ್ಥರಾದಾಗ ವಿನಮ್ರತೆ ನಮ್ಮಲ್ಲಿ ಮೂಡುತ್ತದೆ. ಆದರೆ, ಗುಣಮುಖರಾದ ನಂತರ ಅಹಂಕಾರ ಮತ್ತೆ ತಲೆ ಎತ್ತುತ್ತದೆ. ಹಾಗಾಗಲು ಬಿಡಬೇಡಿ.

ನಂತರದ್ದು ನಾಲ್ಕನೇ ಹಂತ. ದೇಹದ ಪ್ರತಿ ಜೀವಕೋಶವೂ ಪರಿಶುದ್ಧವಾಗುತ್ತದೆ, ಆರೋಗ್ಯಯುತವಾಗುತ್ತದೆ ಮತ್ತು ತೆರೆದುಕೊಳ್ಳುತ್ತದೆ. ಈ ಮುಕ್ತತೆಯ ಅನುಭವ ನಿಮಗಾಗುತ್ತದೆ. ನೋವಿಲ್ಲದ ಈ ಆರೋಗ್ಯವಂತ ಸ್ಥಿತಿಯನ್ನು ಕಾಪಾಡಿಕೊಳ್ಳಿ. ಮೇಲೆ ಹೇಳಿದ ಧ್ಯಾನ ಇತ್ಯಾದಿ ಕ್ರಮಗಳ ಮೂಲಕ ಮಾನಸಿಕ ಸ್ಥಿತಿಯನ್ನು ಕಾಯ್ದುಕೊಳ್ಳಿ. ನಿಮ್ಮಲ್ಲಿ ಕೃತಜ್ಞತಾ ಭಾವವೊಂದು ಮೂಡುವುದನ್ನು ಗಮನಿಸಿ. ಈ ಕೃತಜ್ಞತಾ ಭಾವದಲ್ಲೇ ಯಾವಾಗಲೂ ಇರಿ. ಆರೋಗ್ಯದಿಂದ ಹೊಳೆಯುತ್ತಿರಿ. ನಿಮ್ಮ ದೇಹವನ್ನು ಪ್ರವೇಶಿಸಿದ ವಿಷವನ್ನು ನೀವು ಅರಿವು, ಅಭ್ಯಾಸ ಮತ್ತು ಮಾನಸಿಕ ಪರಿವರ್ತನೆಯ ಮೂಲಕ ಸಿಹಿ ಜೇನಾಗಿ ಬದಲಾಯಿಸಿದ್ದೀರಿ. ಇದರ ಅರಿವು ಸದಾ ಇರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.