ಸೋಮವಾರ, ಜೂನ್ 14, 2021
21 °C

ನೌಕರರ ಗೌರವಧನ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: 2013ರ ಡಿಸೆಂಬರ್ ತಿಂಗಳಿನಿಂದಲೇ ಬಿಸಿಯೂಟ ನೌಕರರ ಗೌರವಧನ ₨ 5,00ನ್ನು ಹೆಚ್ಚುವರಿ­ಯಾಗಿ  ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.



ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಂಘಟನೆ ನಿರಂತರ ಹೋರಾಟದ ಬಳಿಕ ನವೆಂಬರ್ ತಿಂಗಳಿನಲ್ಲಿ ಸರ್ಕಾರವು ಭರವಸೆ ನೀಡಿತ್ತು. 2013ರ ಡಿಸೆಂಬರ್ ತಿಂಗಳಿನಿಂದ ಗೌರವಧನ ₨ 5,00 ಹೆಚ್ಚಿಸುವುದಾಗಿ ತಿಳಿಸಲಾಗಿತ್ತು. ಆದರೆ, ಪತ್ರದಲ್ಲಿ  2014 ಏಪ್ರಿಲ್‌ನಿಂದ ಜಾರಿಗೊಳಿಸಲಾಗುವುದು ಎಂದು ಆದೇಶಿಸಲಾಗಿದೆ ಎಂದು ಹೇಳಿದರು.



ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ನೀಡಿದರೆ, ಅದನ್ನು ರಾಜ್ಯ ಸರ್ಕಾರವು ಕೊಡುವ ಸಂಭಾವನೆಯಲ್ಲಿ ಕಡಿತಗೊಳಿಸಬಾರದು ಹಾಗೂ 2013ರ ಡಿಸೆಂಬರ್ ತಿಂಗಳಿನಿಂದಲೇ ಹೆಚ್ಚುವರಿ ಗೌರವಧನ ₨ 5,00 ನೀಡಬೇಕು ಎಂದು ಸಿಐಟಿಯು ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷೆ ಎಚ್‌.ಪದ್ಮಾ, ಉಪಾಧ್ಯಕ್ಷ ಜೆ.ಎಂ ಚನ್ನಬಸಯ್ಯ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.ಪದಾಧಿಕಾರಿಗಳಾದ ರೇಣುಕಮ್ಮ, ಮರಿಯಮ್ಮ, ನಾಗಮ್ಮ, ಕಲ್ಯಾಣಿ, ಶ್ರೀಲೇಖ, ಹನುಮಂತಿ, ಶೋಭಾ, ಶರಣಮ್ಮ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.