ಮಂಗಳವಾರ, ಜೂನ್ 15, 2021
27 °C

ನ್ಯಾಯಾಧೀಶರ ನಿಂದನೆ ಆರೋಪ: ಶಾಸಕ ಸುರೇಶ್‌ಗೌಡ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ನ್ಯಾಯಾಧೀಶರೊಬ್ಬರ ಕಾರನ್ನು ಹಿಂದಿಕ್ಕಿ ಅಡ್ಡಲಾಗಿ ನಿಲ್ಲಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕೆಎಸ್‌ಟಿಎಟಿ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ್ ಅವರು ಕುಟುಂಬ ಸಮೇತರಾಗಿ ತುಮಕೂರು ಕಡೆಯಿಂದ ಬೆಂಗಳೂರಿಗೆ ಭಾನುವಾರ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಸಂಜೆ 6.15 ಸುಮಾರಿನಲ್ಲಿ ನವಯುಗ ಟೋಲ್ ಬಳಿ ಟೋಲ್ ಸುಂಕ ಕಟ್ಟಲು ನಿಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ರಭಸವಾಗಿ ಬಂದ ಶಾಸಕ ಸುರೇಶ್‌ಗೌಡ ಅವರ ಕಾರು ನ್ಯಾಯಾಧೀಶ ವಿದ್ಯಾಧರ್ ಅವರ ಕಾರನ್ನು ಹಿಂದಿಕ್ಕಿ ಅಡ್ಡಲಾಗಿ ನಿಲ್ಲಿಸಿತು.ಕಾರನ್ನು ಹಿಂದಿಕ್ಕಿದ ಕ್ರಮವನ್ನು ನ್ಯಾಯಾಧೀಶರು ಪ್ರಶ್ನಿಸಲು ಮುಂದಾದಾಗ ಸುರೇಶ್‌ಗೌಡ ಮತ್ತು ಅವರ ಸಂಗಡಿಗರು ಕಾರಿನಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಹಲ್ಲೆ ನಡೆಸಲು ಮುಂದಾದರು ಎಂದು ನ್ಯಾಯಾಧೀಶ ವಿದ್ಯಾಧರ್ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ರಂಗಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.`ಚಾಲಕರು ಮಾಡಿದ ತಪ್ಪಿಗೆ ತಮ್ಮನ್ನು ದೂರಲಾಗಿದೆ. ನಾನು ಬೈದಿಲ್ಲ, ನಿಂದಿಸಿಲ್ಲ~ ಎಂದು ಶಾಸಕ ಸುರೇಶ್‌ಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.