ಪಂಪ್‌ಸೆಟ್ ಸಕ್ರಮಕ್ಕೆ ಸೆ.30 ಅಂತಿಮ ದಿನ

ಮಂಗಳವಾರ, ಮೇ 21, 2019
24 °C

ಪಂಪ್‌ಸೆಟ್ ಸಕ್ರಮಕ್ಕೆ ಸೆ.30 ಅಂತಿಮ ದಿನ

Published:
Updated:

ಮದ್ದೂರು: ರೈತರ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ಈ ತಿಂಗಳ 30 ಅಂತಿಮ ದಿನಾಂಕವಾಗಿದೆ. ಈ ದಿನಾಂಕದೊಳಗೆ ಅಕ್ರಮ ಪಂಪ್‌ಸೆಟ್ ಹೊಂದಿರುವ ಎಲ್ಲಾ ರೈತರು ಸಕ್ರಮಗೊಳಿಸಿ ಕೊಳ್ಳಲು ಮುಂದಾಗಬೇಕು ಎಂದು ಸೆಸ್ಕ್ ಸಹಾ ಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು.ಶನಿವಾರ ಸಂಜೆ ಸೆಸ್ಕ್ ಕಚೇರಿ ಯಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಅ.1ರ ನಂತರ ಅಕ್ರಮ ಪಂಪ್‌ಸೆಟ್ ಹೊಂದಿರುವವರ ಮೇಲೆ ವಿದ್ಯುತ್ ಕಳ್ಳತನದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿ ಸಲಾಗುವುದು ಎಂದು  ಎಚ್ಚರಿಕೆ ನೀಡಿದರು.ತಾಲ್ಲೂಕಿನಾದ್ಯಂತ ವಿದ್ಯುತ್ ಬಾಕಿ ವಸೂಲಾತಿ ಆಂದೋಲನ ಆರಂಭಿಸಿದ್ದು, ಬಾಕಿ ಉಳಿಸಿಕೊಂಡಿ ರುವ ಗ್ರಾಹಕರು ಕೂಡಲೇ ಬಿಲ್ ಪಾವತಿಗೆ ಮುಂದಾಗಬೇಕು. ಕೆಲವು ಗ್ರಾಮಗಳಲ್ಲಿ ಬಿಲ್ ಪಾವತಿಗೆ ಮುಂದಾದ ಗ್ರಾಹಕರನ್ನು ಕೆಲವರು ತಡೆದು ಗಲಾಟೆ ಮಾಡಿದ್ದಾರೆ. ಅಂತವರ ಮೇಲೆ ಇನ್ನು ಮುಂದೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.ಬೆಸಗರಹಳ್ಳಿ, ಪಣ್ಣೇದೊಡ್ಡಿ, ಮಹರ‌್ನವಮಿದೊಡ್ಡಿ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಯೋಜನೆ ಜಾರಿಯಿದೆ. ಆದರೆ ಹಲವು ಗ್ರಾಹಕರು ಇಂದಿಗೂ ವಿದ್ಯುತ್ ಬಿಲ್ ಪಾವತಿಸಿಲ್ಲ. ಕೂಡಲೇ ಎಲ್ಲಾ ಗ್ರಾಹಕರು ವಿದ್ಯುತ್ ಬಿಲ್ ಪಾವತಿಗೆ ಮುಂದಾಗಬೇಕು. ಇಲ್ಲದಿದ್ದರೆ ನಿರಂತರ ವಿದ್ಯುತ್ ಯೋಜನೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ ಅವರು, ಗಂಗಾ ಕಲ್ಯಾಣ ಯೋಜನೆ ಕಾಮಗಾರಿ ಸೇರಿದಂತೆ ಹಳೇ ಕಬ್ಬಿಣದ ಕಂಬಗಳ ತೆರವು ಕಾರ್ಯ ಆರಂಭಗೊಂಡಿದೆ ಎಂದರು.ಕುಡಿಯುವ ನೀರಿಗೆ ಪ್ರತ್ಯೇಕ ಟ್ರಾನ್ಸ್‌ಫಾರ‌್ಮರ್ ಅಳವಡಿಸಲಾಗು ತ್ತಿದ್ದು, ಲೈನ್‌ಮೆನ್‌ಗಳ ಕೊರತೆ ಯನ್ನು ನಿವಾರಿಸಲಾಗಿದೆ. ಗ್ರಾಹಕರು ಯಾವುದೇ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಯ ಸೇವೆ ಪಡೆಯಬಹುದಾಗಿದ್ದು, ಸೇವೆ ಸಮರ್ಪಕವಾ ಗಿರದಿದ್ದರೆ ದೂರು ನೀಡಬಹುದಾಗಿದೆ ಎಂದು ತಿಳಿಸಿದರು. ಹಿರಿಯ ಸಹಾಯಕ ಜೋಸೆಫ್ ಸೇರಿದಂತೆ ಹಲವರು ಸಭೆಯಲ್ಲಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry