ಸೋಮವಾರ, ಮೇ 25, 2020
27 °C

ಪಕ್ಷಾಂತರಿಗೆ ಬಹಿಷ್ಕಾರ ಹಾಕಿ: ಎಂಪಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ಪಕ್ಷಾಂತರ ಮಾಡುವವರಿಗೆ ಜನರು ಗ್ರಾಮಗಳಿಂದ ಬಹಿಷ್ಕಾರ ಹಾಕುವ ಮೂಲಕ ಬುದ್ಧಿ ಕಲಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬಹು ದೊಡ್ಡ ಬಹುಮತವನ್ನು ಕೊಡುವ ಮೂಲಕ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಗೆದ್ದ ಸದಸ್ಯರು ಹಣ ಕಾರಿಗೆ ಬಲಿಯಾಗದೆ ಜನ ಸೇವೆ ಮಾಡುವ ಮೂಲಕ ಋಣ ತೀರಿಸಬೇಕು ಎಂದರು. ಅತ್ಯಂತ ಹಿಂದುಳಿದ ಜಿಲ್ಲೆ ಮತ್ತು ತಾಲ್ಲೂಕು ನಮ್ಮದಾಗಿರುವುದರಿಂದ ಗೆದ್ದ ಸದಸ್ಯರು ಅಭಿವೃದ್ಧಿಗಾಗಿ ಶ್ರಮಿಸಬೇಕೆಂದರು.ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಸ್ಥಾಪಿಸಲು ಹಣವನ್ನು ಚೆಲ್ಲಿ ಕುದುರೆ ವ್ಯಾಪಾರ ಮಾಡಿ ಪ್ರಯತ್ನ ನಡೆಸುತ್ತಾರೆ ಪಕ್ಷಾಂತರಗೊಳಿಸುವ ಪ್ರಯತ್ನಕ್ಕೆ ಜನರು ಪಾಠ ಕಲಿಸಬೇಕಾಗಿದೆ ಎಂದರು. ಹರಪನಹಳ್ಳಿ ತಾಲ್ಲೂಕಿನಲ್ಲಿಯೂ 6ಜಿ.ಪಂ. ಮತ್ತು ಸಂಪೂರ್ಣ ತಾ.ಪಂ. ಬಹುಮತವನ್ನು ಜನರು ಕೊಡುವ ಮೂಲಕ ಆಡಳಿತ ಪಕ್ಷಕ್ಕೆ ಪಾಠ ಕಲಿಸಿದ್ದಾರೆ ಎಂದ ಪ್ರಕಾಶ್ ಕಂದಾಯ ಸಚಿವರು 300 ಕೋಟಿ ರೂಪಾಯಿಗಳ ವಿವಿದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡಲು ಹೋದರೆ ಜನರು ಕೇಳುವುದಿಲ್ಲ ಜನರು ಪದೆ ಪದೆ ಮೋಸ ಹೋಗುವುದಿಲ್ಲ ಎಂದರು.ರಾಜಕಾರಣಿ ಜನರಿಗೆ ಹೆದರಬಾರದು ಬಳ್ಳಾರಿಯ ಕೆಲ ಮುಖಂಡರು ಖಾಸಗಿ ಸೈನ್ಯವನ್ನು ಇಟ್ಟುಕೊಂಡು ಅಧಿಕಾರಿ ನಡೆಸಲು ಹೊರಟರೆ ಅದು ಬಹಳ ದಿನ ನಡೆಯುವುದಿಲ್ಲ ಎಂಬುದಕ್ಕೆ ಇಂದಿನ ಚುನಾವಣೆ ಫಲಿತಾಂಶವೆ ಕನ್ನಡಿಯಾಗಿದೆ ಎಂದರು. ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸ ಬೇಕು ಸೋತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಬೇಸರ ಮಾಡಿಕೊಳ್ಳುವ ಅವಶ್ಯವಲ್ಲ ಎಂದರು.ತಾ.ಪಂ., ಜಿ.ಪಂ.ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿ ಸಿದ  ಎಲ್ಲಾ  ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಗುರುವಿನ ಕೊಟ್ರಯ್ಯ, ಎಂ.ಪರಮೇಶ್ವರಪ್ಪ, ಅರವಳ್ಳಿ ವೀರಣ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.