ಸೋಮವಾರ, ಜೂನ್ 21, 2021
30 °C

ಪಟ್ಟಣ ಪಂಚಾಯ್ತಿ ರದ್ದುಗೊಳಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಇಲ್ಲಿನ ಪಟ್ಟಣ ಪಂಚಾಯ್ತಿ ಚುನಾಯಿತ ಜನ ಪ್ರತಿನಿಧಿಗಳ 5ವರ್ಷ ಆಡಳಿತದ ಕಾಲಾವಧಿ ಮಾರ್ಚ್ 9ರಂದು ಕೊನೆಗೊಂಡಿದೆ. ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ನೀತಿ ಸಂಹಿತೆ ಕಾರಣದಿಂದ ಅನಿರ್ದಿಷ್ಟಾವಧಿಗೆ ಇಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲ್ಪಟ್ಟಿದ್ದು, ತಹಶೀಲ್ದಾರ್ ಆಡಳಿತ ಜಾರಿಯಾಗಿದೆ ಎಂದು ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಈ ಹಿಂದೆ ಅಧಿಸೂಚಿತ ಪ್ರದೇಶ ಸಮಿತಿ ವ್ಯವಸ್ಥೆ ಇಲ್ಲಿನ ಆಡಳಿತವನ್ನು ನಿರ್ವಹಿಸಿಕೊಂಡು ಹೋಗು ತ್ತಿತ್ತು. ಸಾರ್ವಜನಿಕರ ಹೋರಾಟದ ಫಲವಾಗಿ 2001ರಲ್ಲಿ ಲಿಂಗನಮಕ್ಕಿ, ಕಾರ್ಗಲ್, ಜೋಗ ಹಾಗೂ ಹೆನ್ನಿ ತಳಕಳಲೆ ಗ್ರಾಮಗಳನ್ನು ಗಡಿಯಾಗಿ ಸಿಕೊಂಡು ಪಟ್ಟಣ ಪಂಚಾಯ್ತಿ ರಚನೆಯಾಗಿ ಚುನಾಯಿತ ಜನ ಪ್ರತಿನಿಧಿ ವ್ಯವಸ್ಥೆ ಜಾರಿಯಾಗಿತ್ತು.ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡುತ್ತಾರೆ ಎಂಬ ವಿಶ್ವಾಸದ ಜೊತೆಗೆ ಅನೇಕ ಕನಸು ಅನ್ನು ಈ ಪ್ರದೇಶದ ಜನರು ಕಂಡಿದ್ದರು. ಆದರೆ, ಈಚೆಗೆ ಚುನಾಯಿತ ಜನ ಪ್ರತಿನಿಧಿಗಳ ಆಡಳಿತ ವೈಖರಿಗೆ ಗ್ರಾಮಸ್ಥರು ಬೇಸರ

ವ್ಯಕ್ತಪಡಿಸಿದ್ದಾರೆ.ಜನ ಪ್ರತಿನಿಧಿಗಳ ಕಿತ್ತಾಟ, ಸ್ವಾರ್ಥಲಾಲಸೆಗಳ ಕಾರಣ ಸರ್ಕಾರದಿಂದ ದೊರೆತ ಕೋಟಿಗಟ್ಟಲೇ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಲಾಗದೆ ತಾಂತ್ರಿಕ ಕಾರಣದ ನೆಪದಲ್ಲಿ ಗ್ರಾಮೀಣರನ್ನು ವಂಚಿಸಿದ್ದಾರೆ ಎಂದು ತಳಕಳಲೆ ಹೆನ್ನಿ ಗ್ರಾಮದ ಮುಖಂಡರಾದ ಎಚ್.ಬಿ. ರಾಜುಜೈನ್ ಮತ್ತು ಇತರ ಯುವ ಮುಖಂಡರು ಆರೋಪಿಸಿದ್ದಾರೆ.ಪಟ್ಟಣ ಪಂಚಾಯ್ತಿಯನ್ನು ರದ್ದು ಮಾಡಿ ಗ್ರಾಮ ಪಂಚಾಯ್ತಿಯಾಗಿ ಪರಿವರ್ತನೆ ಮಾಡಲು ಹೆನ್ನಿ, ವಡನ್ ಬೈಲು, ಗುಂಡೀಬೈಲು, ಬಿಳಗಲ್ಲೂರು, ಉಳ್ಳಾಲೆ, ಕುಳಕಾರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಪಂಚಾಯ್ತಿಯ ಆಡಳಿತದ ಮೊದಲನೇ ಕಾಲಾವಧಿಯಲ್ಲಿ 14ಸದಸ್ಯ ಬಲ ಹೊಂದಿದ್ದು, ಈಚೆಗಿನ 2ನೇ ಕಾಲಾವಧಿಯಲ್ಲಿ 13ಸದಸ್ಯರ ಬಲವನ್ನು ಹೊಂದಿತ್ತು.2011ರ ಜನಗಣತಿ ಆಧಾರದ ಮೇಲೆ ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಕೇವಲ 11ಸದಸ್ಯ ಬಲವನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಿಗದಿಗೊಳಿಸಲಾಗಿದೆ.ಲೋಕಸಭಾ ಚುನಾವಣೆಯ ನಂತರ ಇಲ್ಲಿನ ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಆಕಾಂಕ್ಷಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಈಗಾಗಲೇ ಹಲವು ಬಗೆಯಲ್ಲಿ ಮತದಾರರನ್ನು ಸೆಳೆಯಲು ಕಾರ್ಯಸೂಚಿ ಸಿದ್ಧಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.