ಶುಕ್ರವಾರ, ಮಾರ್ಚ್ 5, 2021
17 °C

ಪಠಾಣ್‌ಕೋಟ್‌ ಕಾರು ನಾಪತ್ತೆ: ದೆಹಲಿಯಲ್ಲಿ ಅಲರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಠಾಣ್‌ಕೋಟ್‌ ಕಾರು ನಾಪತ್ತೆ: ದೆಹಲಿಯಲ್ಲಿ ಅಲರ್ಟ್‌

ನವದೆಹಲಿ (ಪಿಟಿಐ): ಪಠಾಣ್‌ಕೋಟ್‌ನಿಂದ ಬಾಡಿಗೆಗೆ ಪಡೆಯಲಾಗಿದ್ದ ಆಲ್ಟೊ ಕಾರು ನಾಪತ್ತೆಯಾಗಿದೆ. ಕಾರಿನ ಚಾಲಕ ಶವವಾಗಿ ಪತ್ತೆಯಾಗಿದ್ದು ಉಗ್ರರು ದುಷ್ಕೃತ್ಯ ಎಸಗಲು ಈ ಕಾರನ್ನು ಕದ್ದೊಯ್ದಿರುವ ಶಂಕೆಯಿಂದ ದೆಹಲಿಯಲ್ಲಿ ಶುಕ್ರವಾರ ಅಲರ್ಟ್‌ ಘೋಷಿಸಲಾಗಿದೆ.

ಮೂರು ಮಂದಿ ಅಪರಿಚಿತರು ಪಠಾಣ್‌ಕೋಟ್‌ನಿಂದ ಬಿಳಿಯ ಬಣ್ಣದ ಆಲ್ಟೊ ಕಾರ್‌ (HP 01D 2440) ಬಾಡಿಗೆಗೆ ಪಡೆದಿದ್ದರು. ಕಾರು ಚಾಲಕ ವಿಜಯ್‌ ಕುಮಾರ್‌ ಹಿಮಾಚಲಪ್ರದೇಶದ ಕಾಂಗ್ರಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ವಿಜಯ್‌ ಕುಮಾರ್‌ ಶವ ಬುಧವಾರ (ಜ.20) ಪತ್ತೆಯಾಗಿದೆ. ಉಗ್ರರು ಕೃತ್ಯ ಎಸಗುವ ಉದ್ದೇಶದಿಂದ ಚಾಲಕನನ್ನು ಕೊಲೆ ಮಾಡಿ ಕಾರನ್ನು ಕದ್ದೊಯ್ದಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಾಪತ್ತೆಯಾಗಿರುವ ಕಾರಿಗಾಗಿ ಹುಡುಕಾಟ ನಡೆದಿದೆ. ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು’ ಎಂದು ದೆಹಲಿ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ನಂತರದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲು ದೆಹಲಿ ಪೊಲೀಸ್‌ ಕಮಿಷನರ್‌ ಬಿ.ಎಸ್‌. ಬಸ್ಸಿ ನಿರಾಕರಿಸಿದ್ದಾರೆ. ಭದ್ರತಾ ಕಾರಣಗಳಿಂದ ಈಗ ಯಾವುದೇ ಮಾಹಿತಿ ನೀಡುವುದು ಉಚಿತವಲ್ಲ ಎಂದು ಬಸ್ಸಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.