ಸೋಮವಾರ, ಜೂನ್ 14, 2021
21 °C

ಪಠ್ಯಪುಸ್ತಕ ಹಿಂಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮಕ್ಕಳ ಬೌದ್ಧಿಕ ಆರೋಗ್ಯ ವನ್ನು ಹದಗೆಡೆಸಿ ಅವರ ಮನಸ್ಸಿನಲ್ಲಿ ಕೋಮು ಭಾವನೆ, ಮೇಲು- ಕೀಳರಿಮೆ ಗಳನ್ನು ಹುಟ್ಟುಹಾಕುವ ನೂತನ ಪಠ್ಯಪುಸ್ತಕ ಜಾರಿಗೆ ತರುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಸ್ಟೂಟೆಂಡ್ ಇಸ್ಲಾಮಿಕ್ ಆರ್ಗನೈ ಸೇಷನ್ ಆಫ್ ಇಂಡಿಯಾ ನಗರದ ಘಟಕದ ಅಧ್ಯಕ್ಷ ನಫೀಜ್ ಬೇಗ್ ಆಗ್ರಹಿಸಿದರು.ಶಿಕ್ಷಣದ ಕೇಸರೀಕರಣದ ವಿರುದ್ಧ ನಗರದ ಹೊಸ ಬಸ್ ನಿಲ್ದಾಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿ ಟನಾ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಜಾರಿಗೆ ತರಲು ಹೊರಟಿರುವ 5 ಮತ್ತು 8ನೇ ತರಗತಿ ಪಠ್ಯಪುಸ್ತಕಗಳು ಕೇಸರೀಕರಣಗೊಂಡಿವೆ. ಮತೀಯತೆ ಮತ್ತು ಕೋಮುವಾದ   ಅಳವಡಿಸ ಲಾಗಿದೆ ಎಂದು ಆರೋಪಿಸಿದರು.ಈ ಪಠ್ಯಪುಸ್ತಕವು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಸಲಹೆ ಮಾಡಿರುವ ಸಾಮಾಜಿಕ ನ್ಯಾಯ, ತುಳಿತಕ್ಕೊಳಗಾ ದವರ ಇತಿಹಾಸವನ್ನು ಒಳಗೊಂಡಿಲ್ಲ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ ನೀಡಿದ ನಿರ್ದೇಶನದಂತೆ ವಿವಿಧ ಸಂಸ್ಕೃತಿಗಳ ಸಮ್ಮಿಲನದಿಂದ ಕನ್ನಡ ಭಾಷೆ ಮತ್ತ ಕರ್ನಾಟಕ ರೂಪುಗೊಂಡ ಇತಿಹಾಸ ವನ್ನಾಗಲೀ ಒಳಗೊಂಡಿಲ್ಲ. ಅದಕ್ಕೆ ವಿರುದ್ಧವಾದ ದೃಷ್ಟಿಕೋನವನ್ನು ಬಿಂಬಿಸುವ ಪಠ್ಯ ಮತ್ತು ಇತಿಹಾಸ ನಿರೂಪಣೆ ಹೊಂದಿದೆ ಎಂದು ಆರೋಪಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.