ಪಠ್ಯ ಪುಸ್ತಕ ವಿತರಣೆ ಮಾಡಿ
ನಮ್ಮ ಊರು ಕೂಗೋಡು. ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ಇಲ್ಲಿನ ನಮ್ಮ ಹೈಸ್ಕೂಲಿನಲ್ಲಿ ಸಂಸ್ಕೃತದ ಮಕ್ಕಳ ಸಂಖ್ಯೆ 20. ಆದರೆ ಪ್ರಥಮ ಭಾಷೆ ಸಂಸ್ಕೃತದ ಪುಸ್ತಕಗಳು 2 ಮಾತ್ರ ಬಂದಿವೆ. ತೃತೀಯ ಭಾಷೆ ಕನ್ನಡದ ಪಠ್ಯ ಪುಸ್ತಕಗಳು ಬಂದಿಲ್ಲ. ಉಳಿದ ಎಲ್ಲಾ ಪುಸ್ತಕಗಳೂ ಬಂದಿವೆ. ಈ ಎರಡೂ ಪುಸ್ತಕಗಳು ಮಾತ್ರ ಬಂದಿಲ್ಲ.
ಶಾಲೆ ಪ್ರಾರಂಭವಾಗಿ ಒಂದು ತಿಂಗಳಾಯಿತು. ಇನ್ನೂ ಪಠ್ಯಪುಸ್ತಕಗಳು ಬಂದಿಲ್ಲ. ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಕನ್ನಡದಲ್ಲಿ ಶಿಕ್ಷಕರು ಒಂದಿಷ್ಟು ವ್ಯಾಕರಣ ಹೇಳಿಕೊಟ್ಟು ಪಠ್ಯ ಪುಸ್ತಕವನ್ನೇ ಕಾಯುತ್ತಿದ್ದಾರೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ.
ಸಂಸ್ಕೃತದಲ್ಲಿ ದಿನಾಲು ಆ ಎರಡು ಪುಸ್ತಕಗಳನ್ನು ಒಬ್ಬೊಬ್ಬರಿಗೆ ಮನೆಗೆ ಕೊಡುತ್ತಿದ್ದಾರೆ. ಅದರಲ್ಲಿ ಕೆಲವರು ಆದಷ್ಟು ಪದ್ಯ ಪಾಠಗಳನ್ನೂ, ಗದ್ಯ ಪಾಠಗಳನ್ನೂ ಬರೆದುಕೊಳ್ಳುತ್ತಾರೆ. ಈಗ ಮಾಡುತ್ತಿರುವ ಪಾಠಗಳನ್ನು ಮಾತ್ರ ಬರೆದುಕೊಳ್ಳುತ್ತಿದ್ದಾರೆ. ಮೊದಲ ಕಿರು ಪರೀಕ್ಷಾ ಸಮಯ ಹತ್ತಿರ ಬಂದರೂ ಪಠ್ಯ ಪುಸ್ತಕ ಬರಲಿಲ್ಲವೆಂದರೆ ಇದಕ್ಕೆ ಕಾರಣವೇನು?
ಈ ಸಮಸ್ಯೆಯನ್ನು ಬಗೆಹರಿಸಲಾಗುವುದಿಲ್ಲವೇ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.