ಆ ಚದುರಂಗ ಪಟದ ಮುಂದೆ ಕುಳಿತರೆ ಥೇಟ್ ಪೌರಾಣಿಕ ಕಾಲದ ಯುದ್ಧಭೂಮಿಯಲ್ಲಿರುವ ಅನುಭವ. ಅಂಬಾರಿಯಲ್ಲಿ ಆಸೀನನಾಗಿದ್ದ ರಾಜನಿದ್ದ, ಆತನ ಪಕ್ಕದ ಆನೆಯ ಮೇಲೆ ಮಂತ್ರಿ ಕೂಡ ಸನ್ನದ್ಧನಾಗಿದ್ದ. ಸಾಲಂಕೃತ ಕುದುರೆ, ಒಂಟೆ, ಆನೆಗಳಿದ್ದವು. ಇವರೆಲ್ಲರ ಮುಂದಿನ ಸಾಲಿನಲ್ಲಿ ಕತ್ತಿ, ಗುರಾಣಿ ಹಿಡಿದ ಪದಾತಿದಳವೂ ಅಲ್ಲಿತ್ತು. ಕಪ್ಪು-ಬಿಳುಪಿನ ಕಾಯಿನ್ಗಳಿರುವ ಚೆಸ್ ಬೋರ್ಡ್ ನೋಡಿದವರ ಪಾಲಿಗೆ ಕೌತುಕದ ವಸ್ತುವಾಗಿತ್ತು.

ಮೈಸೂರಿನ ನಜರಬಾದಿನಲ್ಲಿರುವ ರಾಮಸನ್ಸ್ ಕಲಾ ಪ್ರತಿಷ್ಠಾನದವರು ಆಯೋಜಿಸಿದ್ದ `ಕ್ರೀಡಾ ಕೌಶಲ್ಯ' ಮನೆಯ ಪಡಸಾಲೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಕುಳಿತು ಆಡುವ ದೇಸಿ ಆಟಗಳ ಸಾಮಗ್ರಿಗಳ ವಸ್ತುಪ್ರದರ್ಶನದಲ್ಲಿ ಇಂತಹ ಹತ್ತು ಹಲವು ಅಚ್ಚರಿಯ ಸಂಗತಿಗಳಿದ್ದವು. `ಜಾಣ-ಜಾಣೆಯರ ಆಟ'ಗಳೆಂದೇ ಜನಪ್ರಿಯವಾಗಿರುವ ಅಳಗುಳಿ ಮನೆ, ಚೌಕಾಬಾರ, ಆನೆಕಟ್ಟು, ಹುಲಿಕಟ್ಟು, ಪಗಡೆ, ಹಾವು-ಏಣಿ ಆಟ, ಆಡುಹುಲಿ, ಸಿಂಘಂ, ನವಶಂಕರಿ, ಅಷ್ಟಪಾದ, ವಾಗ್-ಬಕರಿ, ಶರವ್ಯೆಹ, ಪಂಚಿ ವಿಮಾನಂ, ಪ್ರೇತ್ವ, ನವಕೇರಿಕೆಟ್, 16 ಸಿಪಾಯಿಗಳ ಆಟ ಸೇರಿದಂತೆ ಹಲವಾರು ಕಲಾತ್ಮಕ ಕ್ರೀಡಾ ಸಾಮಗ್ರಿಗಳು ಇಲ್ಲಿದ್ದವು.

ಅಪ್ಪನಿಂದ ಆರಂಭ
ಕ್ರೀಡಾ ಕೌಶಲ್ಯ ವಾಣಿಜ್ಯ ದೃಷ್ಟಿಯಿಂದ ಆರಂಭವಾದ ಪ್ರದರ್ಶನವಲ್ಲ. ರಾಮಸನ್ಸ್ ಸಂಸ್ಥೆಯ ಕಾರ್ಯದರ್ಶಿ ಆರ್.ಜಿ. ಸಿಂಗ್ ಅವರು ತಮ್ಮ ಮನೆಯ ಮಕ್ಕಳಿಗೆ ದೇಸಿ ಆಟಗಳನ್ನು ಕಲಿಸುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಸಲಕರಣೆ ತರಲು ಹೋದಾಗ ಅವು ಸಿಗದೇ ಅಚ್ಚರಿಗೊಂಡರು. ಕೌಟುಂಬಿಕ ಸಾಮರಸ್ಯ ಹೆಚ್ಚಿಸುವ, ಮಕ್ಕಳಿಗೆ ಮೌಲ್ಯಗಳ ಸಂಸ್ಕಾರ ಹಾಕುವ ಆಟಗಳು ಮಾಯವಾಗುತ್ತಿರುವುದನ್ನು ಮನಗಂಡ ಅವರು 2007ರಲ್ಲಿ ಈ ಪ್ರದರ್ಶನ ಆರಂಭಿಸಿದರು. ಅವರೊಂದಿಗೆ ವೃತ್ತಿಯಿಂದ ವೈದ್ಯರಾಗಿರುವ ಡಾ. ದಿಲೀಪಕುಮಾರ್, ವಿನ್ಯಾಸಕಾರ ರಘು ಧರ್ಮೇಂದ್ರ ಕೈಜೋಡಿಸಿದರು.

`ನಾವೆಲ್ಲ ಚಿಕ್ಕವರಿದ್ದಾಗ ಈ ಆಟಗಳು ತೀರಾ ಸಾಮಾನ್ಯವಾಗಿದ್ದವು. ಎಲ್ಲ ಕುಟುಂಬಗಳಲ್ಲಿಯೂ ಹಾಸುಹೊಕ್ಕಾಗಿದ್ದವು. ರಜೆ, ಹಬ್ಬ ಹರಿದಿನಗಳಿಗೆ ವಿಶೇಷ ಕಳೆ ಕಟ್ಟುತ್ತಿದ್ದವು. ಮಾರುಕಟ್ಟೆಯ ಬಹುತೇಕ ಅಂಗಡಿ, ಮುಂಗಟ್ಟುಗಳಲ್ಲಿ ಈ ಆಟಗಳ ಸಲಕರಣೆಗಳು ಸುಲಭವಾಗಿ ಸಿಗುತ್ತಿದ್ದವು. ಆದರೆ, ಹತ್ತು ವರ್ಷಗಳ ಹಿಂದೆ ಒಮ್ಮೆ ನಮ್ಮ ಮನೆಯಲ್ಲಿರುವ ಮಕ್ಕಳಿಗೆ ಈ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ಮಾರುಕಟ್ಟೆಗೆ ಹೋದರೆ ಆಟಿಕೆಗಳು ಸಿಗುವುದೇ ದುಸ್ತರವಾಯಿತು. ನಮಗೆ ಪರಿಚಯವಿದ್ದ ಕಲಾವಿದರ ಮೂಲಕ ಸಲಕರಣೆಗಳನ್ನು ಮಾಡಿಸಿ ನಮ್ಮ ಮನೆಯ ಮಕ್ಕಳಿಗೆ ಕೊಟ್ಟೆವು. ಅದನ್ನು ನೋಡಿದ ಅಕ್ಕಪಕ್ಕದ ಮನೆಯವರೂ ನಮ್ಮಿಂದ ಆಟಿಕೆಗಳನ್ನು ತರಿಸಕೊಳ್ಳತೊಡಗಿದರು' ಎಂದು ರಘು ಧರ್ಮೇಂದ್ರ ನೆನಪಿಸಿಕೊಳ್ಳುತ್ತಾರೆ.

ಪ್ರಯತ್ನ ಸುಲಭದ್ದಾಗಿರಲಿಲ್ಲ. ರಾಮಸನ್ಸ್ ತಂಡ ಈ ಆಟಿಕೆಗಳನ್ನು ಮಾಡಲು ಬೇರೆ ರಾಜ್ಯಗಳನ್ನು ಸುತ್ತಿದರು. ಊರೂರು ಅಡ್ಡಾಡಿ ಕುಶಲಕರ್ಮಿಗಳನ್ನು ಭೇಟಿಯಾದರು. ತಮಿಳುನಾಡಿನ ಏಟಿಕೊಪ್ಪ, ಶ್ರೀಕಾಳಹಸ್ತಿ, ಉತ್ತರ ಭಾರತದ ಬನಾರಸ್, ಬೆಂಗಳೂರು ಸಮೀಪದ ಚನ್ನಪಟ್ಟಣ ಸೇರಿದಂತೆ ಸುಮಾರು 35 ಕಡೆಗಳಿಂದ ಈ ಸಲಕರಣೆಗಳನ್ನು ಮಾಡಿಸಿಕೊಂಡು ಬಂದರು. ಆರಂಭದಲ್ಲಿ ವರ್ಷಕ್ಕೊಮ್ಮೆ ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು. ಆದರೆ ಅತ್ಯುತ್ತಮವಾದ ಕಲಾಕೃತಿಗಳಂತಿರುವ ಆಟಿಕೆಗಳನ್ನು ತಯಾರಿಸಲು ಹೆಚ್ಚು ಸಮಯ ಬೇಕು. ಆದ್ದರಿಂದ ಎರಡು ವರ್ಷಕ್ಕೊಮ್ಮೆ ಪ್ರದರ್ಶನ ಮಾಡುತ್ತಿದ್ದಾರೆ.

ಹಿಂದಿರುವ ಧೀಶಕ್ತಿ
`ಈ ಆಟಗಳಿಗಾಗಿ ತಯಾರಿಸಲಾಗುವ ಸಲಕರಣೆಗಳ ಹಿಂದೆ ಒಂದು ದೊಡ್ಡ ಕಲಾಬಳಗವೇ ಇದೆ. ಈ ಆಟಗಳನ್ನು ಜೀವಂತವಾಗಿಡುವುದರಿಂದ ಆ ಕಲೆ ಮತ್ತು ಅದರ ಕುಶಲಕರ್ಮಿಗಳೂ ಉಳಿಯುತ್ತಾರೆ. ಒಂದು ವೇಳೆ ದೇಸಿ ಆಟಗಳು ವಿನಾಶವಾದರೆ, ಅದಕ್ಕೆ ಪೂರಕವಾದ ಕಲಾಪ್ರಕಾರಗಳು, ಕಲಾವಿದರೂ ಮರೆಯಾಗುತ್ತಾರೆ. ಆದರೆ ಈ ಕಲಾವಿದರಿಗೆ ಈ ಆಟಗಳನ್ನು ಆಡುವ ಬಗೆ, ನಿಯಮಗಳ ಅರಿವು ಇಲ್ಲ. ನಾವು ಮಾಡಿಕೊಟ್ಟ ವಿನ್ಯಾಸದ ಪ್ರಕಾರ ತಯಾರಿಸಿ ಕೊಡುತ್ತಾರೆ. ನಮ್ಮ ಪ್ರದರ್ಶನದಲ್ಲಿ ಚೌಕಾಬಾರ, ಚೆಸ್, ಚನ್ನೆಮಣೆ ಆಟಗಳಿಗೆ ಹೆಚ್ಚಿನ ಬೇಡಿಕೆ ಇತ್ತು' ಎಂದು ಡಾ. ದಿಲೀಪ್ಕುಮಾರ್ ಹೇಳುತ್ತಾರೆ.

ಇವರೆಲ್ಲರ ಪ್ರಯತ್ನದ ಫಲವಾಗಿ ಈ ಬಾರಿಯ `ಕ್ರೀಡಾ ಕೌಶಲ್ಯ' ಯಶಸ್ವಿಯಾಗಿ ನಡೆಯಿತು. ಆಧುನಿಕತೆಯ ಭರಾಟೆಯಲ್ಲಿ ಮರೆತು ಹೋಗಿರುವ ಸುಮಾರು 35 ಆಟಗಳು ಇಲ್ಲಿ ಗಮನ ಸೆಳೆದವು. ಅವುಗಳ ಬಗ್ಗೆ ಮಾರ್ಗದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನೂ ನೀಡಲಾಯಿತು. ಈ ಆಟಗಳ ಹೆಸರನ್ನೇ ಕೇಳದಿದ್ದ ಹಲವು ಮಕ್ಕಳು `ಡಿಜಿಟಲ್ ಲೋಕ'ವನ್ನು ಸ್ವಲ್ಪ ಹೊತ್ತು ಮರೆತಿದ್ದರು. ಚಿಪ್ಸ್, ಕುರ್ಕುರೆ ಪೊಟ್ಟಣ, ಟೀವಿ ರಿಮೋಟ್ ಹಿಡಿಯುವ ಪುಟ್ಟ ಕೈಗಳು ಕವಡೆ ಕಾಯಿಗಳನ್ನು ಕುಲುಕುಲು ಮಾಡಿ ನೆಲಕ್ಕೆ ಹಾಕಿದರು. ಚೌಕಾಬಾರ, ಪಗಡೆ, ಹಾವು-ಏಣಿ ಆಟದ ಗುಂಗಿನಲ್ಲಿ ತೇಲಿದರು.

ಮುಮ್ಮಡಿ ಮ್ಯಾಜಿಕ್!

ಚೆಸ್ ಆಟದ ಪ್ರಕಾರಗಳಲ್ಲಿ ಒಂದಾದ ನೈಟ್ಸ್ ಮ್ಯಾಜಿಕ್ ಸ್ಕ್ವೇರ್ (ಏಕಾಶ್ವ ಚದುರಂಗ) ಅತ್ಯಂತ ಕ್ಲಿಷ್ಟ ಆಟ. ಆದರೆ 19ನೇ ಶತಮಾನದಲ್ಲಿ ಇಡೀ ವಿಶ್ವದಲ್ಲಿಯೇ ಈ ಆಟವನ್ನು ಯಶಸ್ವಿಯಾಗಿ ಪೂರೈಸಿದ ಮೂವರಲ್ಲಿ ಮೈಸೂರು ಸಂಸ್ಥಾನದ ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೂಡ ಒಬ್ಬರು.
ಬುದ್ಧಿಮತ್ತೆಗೆ ಸವಾಲೊಡ್ಡುವ ಆಟ ಇದು. ಚೆಸ್ ಬೋರ್ಡ್ನಲ್ಲಿ 64 ಮನೆಗಳು ಇರುತ್ತವೆ. ಅದರಲ್ಲಿ ಒಂದೇ ಕುದುರೆಯನ್ನು ಇಡಲಾಗುತ್ತದೆ. ಈ ಕುದುರೆಯನ್ನು ಇಂಗ್ಲಿಷ್ ವರ್ಣಮಾಲೆಯ `ಎಲ್' ಅಕ್ಷರದ ಮಾದರಿಯಲ್ಲಿ ಚಾಲನೆ ಮಾಡಬೇಕು. ಅಡ್ಡ ಮತ್ತು ಉದ್ದವಾಗಿ ಯಾವುದೇ ರೀತಿಯಲ್ಲಿ ಚಲಾವಣೆ ಮಾಡಿದರೂ ನಾಲ್ಕು ಖಾನೆಗಳ ಎಲ್ ಆಕಾರದಲ್ಲಿ ಮಾಡಬೇಕು.

ಆದರೆ 64 ಚೌಕಗಳನ್ನೂ ಕುದುರೆ ಮುಟ್ಟಿ ಬರಬೇಕು ಎನ್ನುವುದು ಈ ಆಟದ ನಿಯಮ. ಆ ಸಂದರ್ಭದಲ್ಲಿ ಕೇವಲ ಇಬ್ಬರು ಈ ಸಾಧನೆ ಮಾಡಿದ್ದರಂತೆ. ಅವರ ನಂತರ ಈ ಸಾಧನೆ ಮಾಡಿದವರು ಮುಮ್ಮಡಿಯವರು. ತಮ್ಮ ರಾಣಿಯರೊಂದಿಗೆ ಪಟದ ಆಟಗಳನ್ನು ಮನರಂಜನೆಗಾಗಿ ಆಡುತ್ತಿದ್ದ ಅವರು, ಆ ಆಟಗಳು ಜನಸಾಮಾನ್ಯರ ಮನೆಯಂಗಳಕ್ಕೂ ತಲುಪುವಂತೆ ಮಾಡಿದರು.

`ಮುಮ್ಮಡಿಯವರು ಪಟದ ಆಟಗಳ (ಬೋರ್ಡ್ಗೇಮ್ಸ) ಅಭಿವೃದ್ಧಿಗೆ ನೀಡಿದ ಕೊಡುಗೆ ಬಹಳ ದೊಡ್ಡದು. ಅವರು ರಚಿಸಿರುವ `ಶ್ರೀ ತತ್ವನಿಧಿ' ಗ್ರಂಥಮಾಲೆಯಲ್ಲಿ ಒಂಬತ್ತನೆಯದಾದ `ಕೌತುಕ ನಿಧಿ'ಯಲ್ಲಿ ಪಟಗಳ ಆಟದ ಬಗ್ಗೆ ಅದ್ಭುತ ವಿವರಗಳು ಇವೆ. ಕನ್ನಡ, ಮರಾಠಿ, ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲಿ ಅವರು ಈ ಗ್ರಂಥ ರಚಿಸಿದ್ದಾರೆ. ಆಯಾ ಆಟಗಳಿಗೆ ಹೊಂದಿಕೆಯಾಗುವಂತಹ ವರ್ಣಚಿತ್ರಗಳನ್ನು ನುರಿತ ಕಲಾವಿದರಿಂದ ವಿಶೇಷವಾಗಿ ಮಾಡಿಸಿದ್ದಾರೆ. ಏಕಾಶ್ವ ಚದುರಂಗದಲ್ಲಿ ಅವರ ಸಾಧನೆ ಮತ್ತು ಪಟದ ಆಟಗಳಿಗೆ ಅವರು ನೀಡಿರುವ ಕೊಡುಗೆಯನ್ನು ಪ್ರತಿವರ್ಷ ಒಂದೊಂದು ದೇಶದಲ್ಲಿ ಆಯೋಜಿಸಲಾಗುವ ಅಂತರರಾಷ್ಟ್ರೀಯ ಬೋರ್ಡ್ ಗೇಮ್ಸ ವಿದ್ವತ್ ಗೋಷ್ಠಿಯಲ್ಲಿಯೂ ಮುಕ್ತ ಕಂಠದಿಂದ ಶ್ಲಾಘಿಸಲಾಗಿದೆ' ಎಂದು ರಘು ಧರ್ಮೇಂದ್ರ ಹೇಳುತ್ತಾರೆ.

ಮುಮ್ಮಡಿಯವರ ನೆಲದಲ್ಲಿ ಒಂದು ಬಾರಿಯಾದರೂ ಅಂತರರಾಷ್ಟ್ರೀಯ ಬೋರ್ಡ್ ಗೇಮ್ಸ ವಿದ್ವತ್ ಗೋಷ್ಠಿ ನಡೆಸುವ ಗುರಿ ರಾಮಸನ್ಸ್ ಬಳಗದ್ದಾಗಿದೆ. ಸಲಕರಣೆಗಳು ಬೇಕೆಂದರೆ ಚಾಮರಾಜೇಂದ್ರ ಮೃಗಾಲಯ ಸಮೀಪದ ನಮ್ಮ ಆರ್ಟ್ ಗ್ಯಾಲರಿಯಲ್ಲಿ ಸಿಗುತ್ತವೆ. ಶಾಲೆಗಳು, ಸಂಘಗಳಿಗೆ ಹೋಗಿ ಮಾರ್ಗದರ್ಶನ ನೀಡಲು ಈ ತಂಡ ಸಿದ್ಧವಿದೆ. ಮಾಹಿತಿಗೆ: ರಘು ಧರ್ಮೇಂದ್ರ 9880111625.
-ಗಿರೀಶ ದೊಡ್ಡಮನಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.