ನವದೆಹಲಿ (ಪಿಟಿಐ): ಆಹಾರ ಹಣದುಬ್ಬರದ ಏರಿಕೆಯಿಂದ ಪಡಿತರ ಸಾಮಗ್ರಿಗಳೂ ದುಬಾರಿಯಾಗುವ ಸಾಧ್ಯತೆಗಳಿದ್ದು, ‘ಪಡಿತರ ಬೆಲೆ ಏರಿಕೆ’ಗೆ ಸಂಬಂಧಿಸಿದಂತೆ ನಡೆಯಬೇಕಿದ್ದ ಮಾತುಕತೆಯನ್ನು ಸರ್ಕಾರ ಸದ್ಯಕ್ಕೆ ಮುಂದೂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹಣದುಬ್ಬರ ದರ ಡಿಸೆಂಬರ್ನಲ್ಲಿ ಶೇಕಡ 14.44ನ್ನು ತಲುಪಿರುವ ಹಿನ್ನೆಲೆಯಲ್ಲಿ, ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕುಟುಂಬಗಳಿಗೆ ವಿತರಿಸುವ ಪಡಿತರ ಅಕ್ಕಿ ಮತ್ತು ಗೋಧಿ ಧಾನ್ಯಗಳ ಬೆಲೆಯನ್ನು ಹೆಚ್ಚಿಸಲು ಸರ್ಕಾರ ಮಾತುಕತೆಗೆ ಮುಂದಾಗಿತ್ತು.

ಸುಮಾರು 11.5 ಕೋಟಿ ‘ಎಪಿಎಲ್’ ಕುಟುಂಬಗಳು ಈ ಉದ್ದೇಶಿತ ಬೆಲೆ ಏರಿಕೆ ವ್ಯಾಪ್ತಿಗೆ ಬರಲಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೊಳಗೊಂಡ ವಾಣಿಜ್ಯ ವ್ಯವಹಾರಗಳ ಸಂಸದೀಯ ಸಮಿತಿ (ಸಿಸಿಇಎ) ಈ ಕುರಿತು ಚರ್ಚೆ ನಡೆಸಿ, ಪರಿಷ್ಕೃತ ಬೆಲೆ ಪ್ರಕಟಿಸಬೇಕಿತ್ತು. ಆದರೆ, ಈಗಾಗಲೇ ಅಗತ್ಯ ಪದಾರ್ಥಗಳಾದ ಈರುಳ್ಳಿ, ಹಾಲು, ಮೊಟ್ಟೆ, ತರಕಾರಿ, ಹಣ್ಣುಗಳ ಬೆಲೆಗಳು ಗಗನಕ್ಕೇರಿರುವುದರಿಂದ ಪಡಿತರ ಬೆಲೆ ಏರಿಕೆಯನ್ನು ಸದ್ಯಕ್ಕೆ ಮುಂದೂಡಲಾಯಿತು ಎಂದು ಮೂಲಗಳು ಹೇಳಿವೆ.

ಸದ್ಯ ‘ಎಪಿಎಲ್’ ಕುಟುಂಬಗಳಿಗೆ ಪಡಿತರ ಅಂಗಡಿಗಳ ಮೂಲಕ ವಿತರಿಸುವ ಅಕ್ಕಿಗೆ ್ಙ 8.30, ಗೋಧಿಗೆ ್ಙ 6.10 ದರವನ್ನು ಪ್ರತಿ ಕಿಲೋಗೆ ವಿಧಿಸಲಾಗುತ್ತಿದೆ. ಪ್ರತಿ ಕುಟುಂಬವೂ ತಿಂಗಳಿಗೆ 15 ರಿಂದ 35 ಕೆಜಿ ಒಳಗಿನ ಧಾನ್ಯಗಳನ್ನು ಪಡೆಯುತ್ತಿವೆ. ಈಗಿರುವ ಪಡಿತರ ಅಕ್ಕಿ ದರವನ್ನು ್ಙ 8.30 ರಿಂದ ್ಙ 20ಕ್ಕೆ ಹಾಗೂ ಗೋಧಿ ದರವನ್ನು ್ಙ 6.10ರಿಂದ ್ಙ 15.44 ಏರಿಸುವ ಯೋಜನೆ ಸರ್ಕಾರದ ಮುಂದಿದೆ. 2002ರಿಂದ ಪಡಿತರ ದರಕ್ಕೆ ಪರಿಷ್ಕರಣೆ ತಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.