ರೋಣ: ನ್ಯಾಯಮೂರ್ತಿ ಎ.ಜಿ. ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ಮಾದಿಗ ಹಾಗೂ ಚಲವಾದಿ ಸಮಾಜದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಆರ್ಥಿಕವಾಗಿ ಸದೃಢವಾಗಿರುವ ಸ್ಪರ್ಶ ಜನಾಂಗದವರು ಅಸ್ಪೃಶ್ಯ ಜನಾಂಗದ ಸೌಲಭ್ಯಗಳನ್ನು ಬಾಚಿಕೊಳ್ಳುತ್ತಿ ರುವುದರಿಂದ ಅಸ್ಪೃಶ್ಯರು ಸರ್ಕಾರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಡೆಯಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಚಿವ ಕಳಕಪ್ಪ ಬಂಡಿ ಅವರು ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅರವಿಂದ ಲಿಂಬಾವಳಿ ಹಾಗೂ ಶಿವರಾಜ ತಂಗಡಗಿ ಅವರು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ರೋಣದ ಮುಲ್ಲಾನಭಾವಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ನಂತರ ತಹಶೀಲ್ದಾರ ಕಚೇರಿಗೆ ಆಗಮಿಸಿದರು.ಮುಖಂಡ ದೇವೇಂದ್ರಪ್ಪ ಕೊಳಪ್ಪನವರ ಮಾತನಾಡಿ, ದೇಶದಲ್ಲಿ 2753 ಜಾತಿಗಳಿದ್ದು ರಾಜ್ಯದಲ್ಲಿ 333 ಜಾತಿಗಳ ಪೈಕಿ 10 ಜಾತಿಗಳು ಮಾದಿಗ ಹಾಗೂ ಚಲವಾದಿ ಜನಾಂಗಕ್ಕೆ ಸೇರಿದವರು ಎಂದು ತಿಳಿಸಿದರು.

ಸಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಾದಿಗ ಹಾಗೂ ಚಲವಾದಿ ಸಮಾಜದವರ ಸ್ಥಿತಿ ಇಂದಿಗೂ ಗಂಭೀರವಾಗಿದೆ. ದಲಿತ ಕೇರಿಗಳು ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುವ ಮುಖಂಡ ನಿಂಗಬಸಪ್ಪ ದೊಡ್ಡಮನಿ ಮಾತನಾಡಿ. ಈ ಎರಡು ಜನಾಂಗಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಅನ್ಯಾಯವನ್ನು ಸರಿಪಡಿಸಲು ಸುಮಾರು 8 ವರ್ಷಗಳ ಕಾಲ ನಿವೃತ್ತ ನ್ಯಾಯಮೂರ್ತಿಗಳು ಪ್ರತಿಯೊಂದು ಕುಟುಂಬದ ಶೈಕ್ಷಣಿಕ. ಆರ್ಥಿಕ. ಸಾಮಾಜಿಕ ಹಾಗೂ ರಾಜಕೀಯ ಬಗ್ಗೆ ಸಮೀಕ್ಷೆ ಮಾಡಿದ್ದು. ಸರಕಾರ ಈ ಕೂಡಲೆ ಎ.ಜಿ. ಸದಾಶಿವ ವರದಿಯನ್ನು ಒಪ್ಪಿಕೊಂಡು ಜಾರಿಗೆ ತರಬೆಕು ಎಂದು ಆಗ್ರಹಿಸಿದರು.

ಮುಖಂಡ ಮಂಜುನಾಥ ಹಾಳಕೇರಿ ಮಾತನಾಡಿ. ಪರಿಸಿಷ್ಟ ಜಾತಿಯಲ್ಲಿ ಇತ್ತೀಚೆಗೆ ಸೇರಿಸಲಾದ ಅಸ್ಪೃಶ್ಯರಲ್ಲದ ಲಂಬಾಣಿ, ಬಂಜಾರ, ಭೋವಿ ಜಾತಿಗಳನ್ನು ಈ ಕೂಡಲೆ ತೆಗೆದು ಹಾಕಬೇಕು. ಈ ಜಾತಿಗಳು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದು, ಪರಿಶಿಷ್ಟರ ಬಹುತೇಕ ಸೌಲಭ್ಯಗಳನ್ನು ಅವರೇ ಬಾಚಿಕೊಳ್ಳುತ್ತಿದ್ದಾರೆ. ಎಲ್ಲ ಬ್ಯಾಕ್ಲಾಗ್ ಹುದ್ದೆಗಳಲ್ಲಿ ಲಂಬಾಣಿಗಳೇ ತುಂಬಿಕೊಂಡಿದ್ದಾರೆ. ಇದರಿಂದ ಅಸ್ಪೃಷ್ಯ ಜಾತಿಯವರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ಪ್ರಕಾಶ ಹೊಸಳ್ಳಿ. ಮೌನೇಶ ಹಾದಿಮನಿ, ಸೋಮನಾಥ ಚಲವಾದಿ,ವೆಂಕಟೇಶ ದ್ವಾಸಲ್ ,ಮಲ್ಲು ಮಾದರ, ವಸಂತ ಚಲವಾದಿ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ತಹಶೀಲ್ದಾರ ಎ.ಟಿ.ನರೇಗಲ್ಲ್ ಮುಖಾಂತರ ರಾಜ್ಯಪಾಲರು ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.