ಶುಕ್ರವಾರ, ಮೇ 14, 2021
25 °C

ಪರಿಸರ ದಿನ; ಮರಗಳ ಹನನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ವಿಶ್ವ ಪರಿಸರ ದಿನದಂದೇ ತಾಲ್ಲೂಕಿನ ದೇವಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಬೃಹತ್ ಮರಗಳನ್ನು ಹನನ ಮಾಡಿ ಧರೆಗೆ ಉರುಳಿಸಲಾಗಿದೆ 

 

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈ ಶಾಲೆ ವತಿಯಿಂದ ದೇವಲಾಪುರದ ಬೀದಿಗಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಜಾಥಾ ನಡೆಸಲಾಗಿತ್ತು. ಬುಧವಾರ ಸಂಜೆ ಮತ್ತು ಗುರುವಾರ ಶಾಲೆಯ ಆವರಭಣದಲ್ಲಿ ನಾಲ್ಕು ಬೃಹತ್ ವೃಕ್ಷಗಳನ್ನು ಗುತ್ತಿಗೆದಾರರು ಕಡಿದು ಧರೆಗುರುಳಿಸಿದ್ದು ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.ಮರಗಳನ್ನು ಏಕೆ ಕಡಿಯುತ್ತಿದ್ದೀರಿ ಎಂದು ಗ್ರಾಮಸ್ಥರು ಗುತ್ತಿಗೆದಾರರನ್ನು ಪ್ರಶ್ನಿಸಿದಾಗ, ಶಾಲೆಯ ಮುಖ್ಯ ಶಿಕ್ಷಕಿ ಮೆಹಜಬೀನ್ ಅಖ್ತರ್ ಅನುಮತಿಯ ಮೇರೆಗೆ ಮರಗಳನ್ನು ಕಡಿಯುತ್ತಿರುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಈ ಆವರಣದಲ್ಲಿರುವ 11 ಮರಗಳನ್ನು ಹರಾಜಿನಲ್ಲಿ ರೂ. 11 ಸಾವಿರಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.ಮುಖ್ಯ ಶಿಕ್ಷಕಿ, ಎಸ್‌ಡಿಎಂಸಿ ಘಟಕ ಮರಗಳನ್ನು ಕಡಿಸಲು ಅನುಮತಿ ನೀಡಿರುವುದು ಅನುಮಾನಗಳಿಗೆ ಎಡೆಮಾಡಿದೆ. ಶಾಲೆ ಆವರಣದಲ್ಲಿನ ಮರಗಳನ್ನು ಕಡಿಯಲು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಹರಾಜು ನಡೆಸಲು ಯಾವುದೇ ಪ್ರಕಟಣೆಯನ್ನೂ ನೀಡಿಲ್ಲ. ಪ್ರಕಟಣೆ ಹೊರಡಿಸಿದ್ದರೆ ಅಂದೇ ಈ ಪ್ರಕ್ರಿಯೆಯನ್ನು ನಿಲ್ಲಿಸುತ್ತಿದ್ದೆವು. ಶಾಲೆ ಆವರಣದ ಮರಗಳನ್ನು ಕತ್ತರಿಸಲು ಅನುಮತಿ ನೀಡಿರುವ ಮುಖ್ಯ ಶಿಕ್ಷಕಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗ್ರಾಮ ಪಂಚಾಯಿತಿ ಸದಸ್ಯ ಡಿ.ಕೆ.ಸುರೇಶ್, ಕೃಷ್ಣಮೂರ್ತಿ, ಲೋಕೇಶ್, ಡಿ.ಎಂ.ಜಗದೀಶ್ ಅವರು ಮರಗಳನ್ನು ಕತ್ತರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಮರಗಳು ನೆರಳು ಉತ್ತಮ ಗಾಳಿ ೀಡುತ್ತಿದ್ದವು. ಮಕ್ಕಳ ಮಧ್ಯಾಹ್ನದ ಊಟ ಮರದ ನೆರಳಿನಲ್ಲಿಯೇ ಆಗುತ್ತಿತ್ತು ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.