ಬೆಳಗಾವಿ: `ಯುವ ಪೀಳಿಗೆಯು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು' ಎಂದು ಜಿಲ್ಲಾಧಿಕಾರಿ ಎನ್. ಜಯರಾಮ್ ಸಲಹೆ ನೀಡಿದರು. ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ, ಐ.ಎಚ್.ಆರ್.ಡಿ.ಸಿ. ಪರಿಸರ ಪ್ರಯೋಗಾಲಯ ಹಾಗೂ ಪರಿಸರ ಮಿತ್ರ ಸಂಘದ ಆಶ್ರಯದಲ್ಲಿ ವಿಟಿಯುನ `ಜ್ಞಾನ ಸಂಗಮ' ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟ ಬಳಿಕ ಅವರು ಮಾತನಾಡಿದರು.

`ಬುದ್ಧನ ಉಪವೇಶವಾದ ಆಸೆಯೇ ದುಃಖಕ್ಕೆ ಮೂಲ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು. ಗಿಡ ಬೆಳೆಸುವುದು, ಮಳೆ ನೀರು ಸಂಗ್ರಹ, ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ನಿರ್ವಹಣೆ ಮಾಡಲು ಮುಂದಾಗಬೇಕು' ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಕೆ.ಇ. ಪ್ರಕಾಶ, `ಯುವಕರು ವಿಶ್ವ ಪರಿಸರ ದಿನಾಚರಣೆ ದಿನದಂದು ಗಿಡ ನೆಟ್ಟರೆ ಸಾಲದು, ಅವುಗಳನ್ನು ಸಂರಕ್ಷಿಸಿ, ಪೋಷಿಸಿ ಬೆಳೆಸಿದರೆ ಮಾತ್ರ ಪರಿಸರ ದಿನಾಚರಣೆ ಅರ್ಥಪೂರ್ಣವಾಗುತ್ತದೆ' ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಐ.ಎಚ್. ಜಗದೀಶ, `ಈ ವರ್ಷದ ಘೋಷಣೆಯಾದ `ಯೋಚಿಸು, ಸೇವಿಸು, ಉಳಿಸು' ಎಂಬುದರ ಮಹತ್ವವನ್ನು ವಿವರಿಸಿದರು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗದ ಪ್ರಕಾರ, ಪ್ರತಿ ವರ್ಷ 1.3 ಶತಕೋಟಿ (ಬಿಲಿಯನ್) ಟನ್ಗಳಷ್ಟು ಆಹಾರ ಪದಾರ್ಥ ಹಾಳು ಮಾಡಲಾಗುತ್ತಿದೆ. ಇದು ಜಗತ್ತಿನ ಮೂರನೇ ಒಂದು ಭಾಗದಷ್ಟು ಜನರಿಗೆ ಒಂದು ವರ್ಷಕ್ಕೆ ಸಾಕಾಗುವಷ್ಟಿದೆ. ಅಲ್ಲದೇ, ಜಗತ್ತಿನ ಎಲ್ಲೆಡೆ ಪ್ರತಿದಿನ 7 ಜನರಿಗೆ ಒಬ್ಬರು ಉಪವಾಸದಿಂದ ಮಲಗುತ್ತಿದ್ದರೆ, ಐದು ವರ್ಷದ ಒಳಗಿನ ಸುಮಾರು 20,000 ಮಕ್ಕಳು ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ' ಎಂದು ವಿವರಿಸಿದರು.

ಪ್ರೊ. ಜಿ.ಕೆ. ಕಡಬಡಿ, ಸುಗಂದಾ ಕುರಿ, ಡಾ. ಜಿ.ಎಂ. ಪಾಟೀಲ, ಶಿವಾನಂದ ಡಂಬಳ, ಸತೀಶ ಕೆ.ಎಸ್. ರಾಜಶೇಖರ ಪಾಟೀಲ ಹಾಜರಿದ್ದರು. ಡಾ. ಎಚ್.ಎನ್. ನಾಗರಾಜ ಸ್ವಾಗತಿಸಿದರು. ಪ್ರೊ. ಡಿ.ಎನ್. ಮಿಸಾಳೆ ವಂದಿಸಿದರು.

`ಪರಿಸರ ರಕ್ಷಣೆಯಿಂದ ಆರೋಗ್ಯವಂತ ಸಮಾಜ'

ಗೋಕಾಕ: ಪರಿಸರ ಸಂರಕ್ಷಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವೆಂದು ಒಂದನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಎಚ್.ಎಸ್.ಮಂಜುನಾಥ ಹೇಳಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಅರಣ್ಯ ಇಲಾಖೆ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದ ಅಸಮತೋಲನದಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಹೀಗಾಗಿ ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಪ್ರಧಾನ ದಿವಾಣಿ ನ್ಯಾಯಾಧೀಶ ವಿ.ಎಸ್.ಪಾಟೀಲ ಮಾತನಾಡಿ, ಹುಟ್ಟುಹಬ್ಬವನ್ನು ಕೇಕ್ ಕತ್ತರಿಸದೇ ಸಸಿ ನೆಡುವ ಮೂಲಕ ಆಚರಿಸುವಂತೆ ಕರೆ ನೀಡಿದರು.

ಜೆಎಂಎಫ್ಸಿ ನ್ಯಾಯಾಧೀಶ ಭೋಲಾ ಪಂಡಿತ, ನ್ಯಾಯವಾದಿಗಳಾದ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ, ಹಿರಿಯ ನ್ಯಾಯವಾದಿ ಎಸ್.ಎಮ್.ಹತ್ತಿಕಟಗಿ, ರಾಮದುರ್ಗ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಹಿರೇಮಠ, ವಲಯ ಅರಣ್ಯಾಧಿಕಾರಿ ಎಮ್. ಕೆ.ಪಾತ್ರೋಟ, ತಹಸೀಲ್ದಾರ್ ಪ್ರಭಾಕರ ದೇಶಪಾಂಡೆ, ಕಂದಾಯ ಇಲಾಖೆ ಅಧಿಕಾರಿ ಉದಯ ಕಂಬಾರ, ತಾ.ಪಂ. ಇಓ ವಿ.ಆರ್. ಸಂಕ್ರಿ, ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ, ಸಿಪಿಐ ಬಿ.ಎಸ್.ಲೋಕಾಪೂರ, ಅಪರಾಧ ವಿಭಾಗ ಪಿಎಸ್ಐ ಶಿವಾನಂದ ಅರೆನಾಡ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆನಂದ ಉಪಸ್ಥಿತರಿದ್ದರು.
ಕಾಲೇಜಿನ ಉಪ-ಪ್ರಾಚಾರ್ಯ ಆರ್.ಎಸ್. ಮಲಿಗೆಪ್ಪಗೋಳ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.