ಪರೀಕ್ಷೆಯನ್ನು ಎದುರಿಸುವ ಮುನ್ನ ಇಡೀ ವರ್ಷದ ಪರಿಶ್ರಮ ಒಂದೆಡೆಯಾದರೆ, ಪರೀಕ್ಷೆ ಸಮೀಪಿಸಿರುವ ಈ ದಿನಗಳ ಓದು, ಓದಿದ ವಿಷಯಗಳ ಪುನರ್ಮನನ ಅದಕ್ಕಿಂತ ಮುಖ್ಯವೆನಿಸುತ್ತವೆ. ಈ ಹಂತದಲ್ಲಿ ಅಧ್ಯಯನ ಯೋಜಿತವಾಗಿರಬೇಕು. ಓದುಗಾರಿಕೆ ವ್ಯವಸ್ಥಿತವಾಗಿರಬೇಕು. ಬರೆಯುವಿಕೆಯೂ ಬುದ್ಧಿವಂತಿಕೆಯಿಂದ ಕೂಡಿರಬೇಕು.

ವರ್ಷವಿಡೀ ಶಾಲಾ ವೇಳಾಪಟ್ಟಿಗೆ ಅನುಗುಣವಾಗಿ ವಿವಿಧ ವಿಷಯಗಳನ್ನು ಅಭ್ಯಸಿಸಿರುವ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸಿದ ಅವಧಿಯಲ್ಲಿ ತಮ್ಮದೇ ಆದ ‘ಅಧ್ಯಯನ ವೇಳಾಪಟ್ಟಿ’ ರಚಿಸಿಕೊಳ್ಳಬೇಕು. ಎಸ್ಎಸ್ಎಲ್ಸಿ, ಪಿಯು ವಾರ್ಷಿಕ ಪರೀಕ್ಷೆಗಳಷ್ಟೇ ಅಲ್ಲದೆ, ಇನ್ನಿತರ ಮಹತ್ವದ ಪರೀಕ್ಷೆಗಳಿಗೆ ಪರೀಕ್ಷಾ ಸಿದ್ಧತೆಗೆಂದೇ ಕೆಲ ದಿನಗಳ ರಜೆ ನೀಡಲಾಗಿರುತ್ತದೆ.

ಈ ರಜೆ ಕೆಲವೊಮ್ಮೆ ತಿಂಗಳದ್ದಾಗಿರಬಹುದು ಅಥವಾ ಒಂದು ವಾರಕ್ಕೂ ಸೀಮಿತವಾಗಿರಬಹುದು. ಹೀಗಿರುವಾಗ ಶಾಲಾ–ಕಾಲೇಜುಗಳ ವೇಳಾಪಟ್ಟಿಗೆ ತೊಂದರೆಯಾಗದಂತೆ ಮನೆಯಲ್ಲಿ ಸ್ವಯಂ ಅಧ್ಯಯನಕ್ಕೆಂದು ಪ್ರತ್ಯೇಕ ವೇಳಾಪಟ್ಟಿಯನ್ನು ರಚಿಸಿಕೊಳ್ಳಬೇಕು. ಶಾಲೆ–ಕಾಲೇಜುಗಳಲ್ಲಿ ಪಠ್ಯಕ್ರಮ ಪೂರ್ಣಗೊಳಿಸಿ, ‘ಪರೀಕ್ಷಾ ಪೂರ್ವಸಿದ್ಧತೆಗೆ’ ಸಂಪೂರ್ಣ ರಜೆ ಘೋಷಿಸಿದ್ದರೆ, ಇಡೀ ದಿನವನ್ನು ಸ್ವಯಂ ಅಧ್ಯಯನಕ್ಕೆ ಮೀಸಲಿಡಬಹುದು. ಆಗ ಅಗತ್ಯಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ಬದಲಾಯಿಸಿಕೊಳ್ಳುವುದು ಅಗತ್ಯ.

ವೇಳಾಪಟ್ಟಿ ಸಿದ್ಧಪಡಿಸುವುದು ಹೇಗೆ?
ವಿದ್ಯಾರ್ಥಿಗಳು ಪರೀಕ್ಷಾ ಪೂರ್ವಸಿದ್ಧತೆಗೆ ಸಂಬಂಧಿಸಿ ತಮ್ಮ ಅನುಕೂಲ, ಅಗತ್ಯಕ್ಕೆ ತಕ್ಕಂತೆ ಸ್ವಯಂ ಅಧ್ಯಯನ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬಹುದು. ಗಣಕಯಂತ್ರ ಬಳಸಿಕೊಂಡು ಎಂ.ಎಸ್ ಎಕ್ಸೆಲ್ ಮಾದರಿಯಲ್ಲಿ ಅಥವಾ ಅದೇ ಮಾದರಿಯ ಸ್ವ ವಿನ್ಯಾಸಗೊಳಿಸಿದ ಕೈಬರಹದ ವೇಳಾಪಟ್ಟಿಯನ್ನು ರಚಿಸಿಕೊಳ್ಳಬಹುದು. ಈಚೆಗೆ ಸ್ವಯಂ ಅಧ್ಯಯನ ವೇಳಾಪಟ್ಟಿ ರಚಿಸಿಕೊಳ್ಳಲೆಂದೇ ಕೆಲ ಮೊಬೈಲ್ ಆ್ಯಪ್ಗಳನ್ನು ಕೂಡ ಲಭ್ಯವಿದ್ದು, ಅವುಗಳನ್ನು ಕೂಡ ಬಳಸಬಹುದಾಗಿದೆ.

ಸಿದ್ಧಗೊಂಡ ವೇಳಾಪಟ್ಟಿಯಲ್ಲಿ ಆಯಾ ವಿಷಯವನ್ನು ಪ್ರತ್ಯೇಕ ಬಣ್ಣಗಳಿಂದ ಗುರುತಿಸುವುದು ಒಳ್ಳೆಯದು. ಈ ರೀತಿ ಸಿದ್ಧಗೊಂಡ ವೇಳಾಪಟ್ಟಿಯನ್ನು ಅಧ್ಯಯನ ಕೊಠಡಿಯಲ್ಲಿ ಕಣ್ಣಿಗೆ ಕಾಣುವಂತೆ ನೇತು ಹಾಕಬೇಕು. ವೇಳಾಪಟ್ಟಿಯಲ್ಲಿರುವ ಮಾಹಿತಿ ಸ್ಪಷ್ಟವಾಗಿ ಗೋಚರಿಸುವಂತಿರಬೇಕು.

ದಿನಗಣನೆಯೂ ಮುಖ್ಯ: ಮುಖ್ಯ ಪರೀಕ್ಷೆಗಳ ಆರಂಭದ ದಿನಾಂಕವನ್ನು ಸಾಕಷ್ಟು ಮುಂಚಿತವಾಗಿಯೇ ಘೋಷಿಸಲಾಗಿರುತ್ತದೆ. ಹೀಗಿರುವಾಗ ಸ್ವಯಂ ಅಧ್ಯಯನ ವೇಳಾಪಟ್ಟಿಯೊಂದಿಗೆ ಪರೀಕ್ಷೆಗೆ ಬಾಕಿ ಉಳಿದಿರುವ ‘ದಿನಗಣನೆಯ ಚಾರ್ಟ್’ ಕೂಡ ಸಿದ್ಧಪಡಿಸಿಕೊಳ್ಳಬೇಕು. ಉದಾಹರಣೆಗೆ ಪರೀಕ್ಷೆಗೆ 30 ದಿನ ಬಾಕಿ ಇದ್ದರೆ, 30, 29, 28, 27.... 01 ಹೀಗೆ ಬಾಕಿ ಉಳಿದಿರುವ ದಿನಗಳನ್ನು ಇಳಿಕೆ ಕ್ರಮದಲ್ಲಿ ಚಾರ್ಟ್ನಲ್ಲಿ ಬರೆದಿಡಬೇಕು. ದಿನ ಕಳೆದಂತೆ ಆಯಾ ದಿನವನ್ನು ಕೆಂಪು ಬಣ್ಣದಿಂದ ಹೊಡೆದುಹಾಕಬೇಕು. ಇದು ಪರೀಕ್ಷಾ ದಿನ ಸಮೀಪಿಸುತ್ತಿರುವ ಕುರಿತು ಎಚ್ಚರಿಸಿ, ಮನಸ್ಸನ್ನು ಜಾಗೃತಗೊಳಿಸುತ್ತದೆ. ಪೂರ್ವಸಿದ್ಧತೆಯನ್ನು ಮತ್ತಷ್ಟು ತೀವ್ರವಾಗಿಸಲು ಪ್ರೇರಣೆ ನೀಡುತ್ತದೆ. ಸ್ವಯಂ ಅಧ್ಯಯನ ವೇಳಾಪಟ್ಟಿಯ ಪಕ್ಕದಲ್ಲಿಯೇ ‘ದಿನಗಣನೆಯ ಚಾರ್ಟ್’ ಲಗತ್ತಿಸಬೇಕು.

ವಿಷಯ ಪ್ರಾಧಾನ್ಯತೆಯಲ್ಲಿ ಎಚ್ಚರವಿರಲಿ
ಪರೀಕ್ಷೆಯಲ್ಲಿ ಎದುರಿಸಬೇಕಾದ ವಿಷಯಗಳೆಲ್ಲ ಒಂದೇ ರೀತಿ ಇರುವುದಿಲ್ಲ. ಆಯಾ ವಿಷಯಗಳ ಪಠ್ಯಕ್ರಮ, ಕಠಿಣತೆಯ ಮಟ್ಟ, ಅಧ್ಯಯನ ಕ್ರಮ, ಓದುವಿಕೆಯ ಅಗತ್ಯ, ಬರೆಯುವಿಕೆಯ ಅಗತ್ಯ, ರೂಢಿಸಿಕೊಳ್ಳುವಿಕೆ ಎಲ್ಲವೂ ವಿಭಿನ್ನವಾಗಿರುತ್ತದೆ. ಹೀಗಾಗಿ, ಆಯಾ ವಿಷಯದ ಕಠಿಣತೆಯ ಮಟ್ಟ ಆಧರಿಸಿ ಅಧ್ಯಯನದ ಆದ್ಯತೆಯನ್ನು ನಿರ್ಧರಿಸಬೇಕು. ವಿಷಯ ಕಠಿಣತೆಯೂ ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಭಿನ್ನವಾಗಿರುತ್ತದೆ. ಉದಾಹರಣೆಗೆ, ಕೆಲ ವಿದ್ಯಾರ್ಥಿಗಳಿಗೆ ಗಣಿತ ಕಠಿಣ ವಿಷಯವೆನಿಸಿದರೆ, ಕೆಲವರಿಗೆ ಭಾಷಾ ವಿಷಯಗಳೇ ಕಠಿಣವೆನಿಸಬಹುದು. ಮತ್ತೆ ಹಲವರಿಗೆ ಸಮಾಜ ವಿಜ್ಞಾನ ವಿಷಯಗಳೂ ಕಠಿಣವೆನಿಸಬಹುದು.

ಹೀಗಾಗಿ, ಯಾವ ವಿಷಯಕ್ಕೆ ಎಷ್ಟು ಅಧ್ಯಯನ ಅವಧಿ ನಿಗದಿ ಮಾಡಬೇಕು ಎಂಬುದನ್ನು ಶಿಕ್ಷಕರು, ಪೋಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ನಿರ್ಧರಿಸಬೇಕು. ಕಠಿಣ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಆದರೆ, ಸುಲಭದ ವಿಷಯಗಳನ್ನೂ ಕಡೆಗಣಿಸಬಾರದು. ಎಲ್ಲ ವಿಷಯಗಳನ್ನೂ ಅಧ್ಯಯನಕ್ಕೆ ಪರಿಗಣಿಸಬೇಕು. ಇದರಿಂದ ಆಯಾ ವಿಷಯಗಳಿಗೆ ನೀಡಿರುವ ಆದ್ಯತೆಯ ಸ್ಪಷ್ಟ ಪರಿಕಲ್ಪನೆ ದೊರೆಯುತ್ತದೆ.

ನಿತ್ಯ ಚಟುವಟಿಕೆಗಳತ್ತಲೂ ಗಮನವಿರಲಿ: ಅಧ್ಯಯನ ವೇಳಾಪಟ್ಟಿ ಸಿದ್ಧಪಡಿಸುವಾಗ ನಿತ್ಯ ಚಟುವಟಿಕೆಗಳಿಗೆ ವ್ಯಯಿಸಬೇಕಾದ ವೇಳೆ ಮರೆಯದೇ ಗುರುತಿಸಿಕೊಳ್ಳಬೇಕು. ಆರೋಗ್ಯ ರಕ್ಷಣೆಗೂ ಇದು ಅತ್ಯಗತ್ಯ. ಬೆಳಗಿನ ಓದಿಗೆ ಮುಂಚೆ ಅಥವಾ ನಂತರ ಶೌಚಕ್ಕೆ ವೇಳೆ ನಿಗದಿಪಡಿಸಿಕೊಳ್ಳಿ. ನಂತರ ಸ್ನಾನ, ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಾಹಾರ, ರಾತ್ರಿ ಊಟ, ಅಧ್ಯಯನದ ನಡುವೆ ಅಲ್ಪ ವಿರಾಮ, ಅಲ್ಪಾವಧಿ ನಿದ್ರೆ, ದೀರ್ಘಾವಧಿ ನಿದ್ರೆ, ಆಸಕ್ತಿಗೆ ಅನುಗುಣವಾಗಿ ಸಂಗೀತ ಕೇಳುವುದು ಅಥವಾ ಅಲ್ಪಾವಧಿಯ ಒಳಾಂಗಣ ಆಟಗಳನ್ನು ಆಡುವುದಕ್ಕೂ ಸಮಯ ನೀಡಿ. ಆದರೆ, ಅಧ್ಯಯನಕ್ಕೆ ಮೊದಲ ಆದ್ಯತೆ ನೀಡಲು ಮರೆಯದಿರಿ.

ಅಧ್ಯಯನದ ಅವಧಿ ಏನು– ಎತ್ತ?
‘ಬೇಗ ಮಲಗಿ ಬೇಗ ಏಳು’ ಎಂಬುದು ಹಿರಿಯರ ಅನುಭವದ ಮಾತು. ಈ ಮಾತು ಪರೀಕ್ಷಾ ಪೂರ್ವಸಿದ್ಧತೆಗೂ ಅನ್ವಯಿಸುತ್ತದೆ. ಯಶ ಸಾಧಿಸಿದ ವಿದ್ಯಾರ್ಥಿಗಳ ಅನುಭವದಂತೆ ಹಾಗೂ ವೈಜ್ಞಾನಿಕವಾಗಿಯೂ ತಡ ರಾತ್ರಿ ಅಥವಾ ಇಡೀ ರಾತ್ರಿಯ ಅಧ್ಯಯನ ಸೂಕ್ತವಲ್ಲ. ಬೆಳಗಿನ 4ರಿಂದ ರಾತ್ರಿ 10ರವರೆಗಿನ ಅವಧಿ ಅಧ್ಯಯನಕ್ಕೆ ಸೂಕ್ತ. ಈ ಅವಧಿಯನ್ನು ಬೆಳಗಿನ 5ರಿಂದ ರಾತ್ರಿ 11ಕ್ಕೂ ಬದಲಾಯಿಸಿಕೊಳ್ಳಬಹುದು.

ಬೆಳಗಿನ 4ರಿಂದ 7ರವರೆಗಿನ ವೇಳೆ ಅಧ್ಯಯನದ ದೃಷ್ಟಿಯಿಂದ ‘ಬಂಗಾರದ ಅವಧಿ’. ಈ ಹಂತದಲ್ಲಿ ನಿದ್ರೆಯಿಂದ ಎಚ್ಚೆತ್ತ ಮನಸ್ಸು ಅಧ್ಯಯನಕ್ಕೆ ಸಿದ್ಧವಾಗಿರುತ್ತದೆ. ಬೆಳಗಿನ ಶಾಂತ ವಾತಾವರಣದಲ್ಲಿ ಓದಿದ್ದನ್ನು ಗ್ರಹಿಸಿಕೊಳ್ಳುವ ಮೆದುಳಿನ ಸಾಮರ್ಥ್ಯವೂ ಹೆಚ್ಚಿರುತ್ತದೆ. ಹೀಗಾಗಿ, ಕಠಿಣ ವಿಷಯಗಳ ಅಧ್ಯಯನಕ್ಕೆ ಈ ಅವಧಿ ಹೇಳಿ ಮಾಡಿಸಿದಂತಿದೆ. ತಜ್ಞರ ಅಭಿಪ್ರಾಯದಂತೆ ಈ ಅವಧಿಯಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂಗೋಳಶಾಸ್ತ್ರ ಹಾಗೂ ಇಂಗ್ಲಿಷ್ಗಳಂತಹ ಕಠಿಣ ವಿಷಯಗಳನ್ನು ಅಭ್ಯಸಿಸಿದರೆ ಒಳಿತು. ಹಾಗೆಂದ ಮಾತ್ರಕ್ಕೆ ಎಲ್ಲ ಕಠಿಣ ವಿಷಯಗಳನ್ನೂ ಪ್ರತಿ ದಿನ ಓದಬೇಕು ಎಂದಲ್ಲ. ಈ ಅವಧಿಯಲ್ಲಿ ಒಂದು ಅಥವಾ ಎರಡು ವಿಷಯಗಳನ್ನು ಪರಾಮರ್ಶಿಸಿದರೆ ಸಾಕು. ಮಾರನೆಯ ದಿನ ಮತ್ತೊಂದು ಕಠಿಣ ವಿಷಯವನ್ನು ಅಭ್ಯಸಿಸಬಹುದು.

ಬೆಳಗಿನ ಓದಿನ ನಂತರ ಸ್ನಾನ ಮಾಡಿ, ಉಪಾಹಾರ ಸೇವಿಸಿ ಬೆಳಿಗ್ಗೆ 9ರಿಂದ ಅಧ್ಯಯನವನ್ನು ಮುಂದುವರಿಸಬಹುದು. ಈ ಅವಧಿಯಲ್ಲಿ ಇತಿಹಾಸ, ಪೌರನೀತಿ, ಅರ್ಥಶಾಸ್ತ್ರ, ಕನ್ನಡ, ಹಿಂದಿಯಂತಹ ಸರಳವೆನಿಸುವ ವಿಷಯಗಳನ್ನು ಓದಿಕೊಳ್ಳಬಹುದು. ಮಧ್ಯಾಹ್ನ 1ರವರೆಗೆ ಈ ಅವಧಿಯನ್ನು ಮುಂದುವರಿಸಬಹುದು. ಮಧ್ಯಾಹ್ನದ ಊಟದ ನಂತರ ಅರ್ಧ ಗಂಟೆಯ ಅಲ್ಪಾವಧಿಯ ನಿದ್ರೆ ಒಳಿತು.

ಆದರೆ, ನಿದ್ರೆ ದೀರ್ಘಾವಧಿಯಾಗದಂತೆ ಎಚ್ಚರವಹಿಸಬೇಕು. ನಿದ್ರೆಯ ನಂತರದ ಒಂದು ಗಂಟೆ ಅವಧಿಯನ್ನು ಸಂಗೀತ ಕೇಳಲು, ಟಿ.ವಿ ನೊಡಲು, ಚೆಸ್, ಕೇರಂನಂತಹ ಒಳಾಂಗಣ ಕ್ರೀಡೆಗಳನ್ನು ಆಡಲು ಮೀಸಲಿಡಿ. ಮಧ್ಯಾಹ್ನ 3 ಗಂಟೆಯಿಂದ ಅಧ್ಯಯನವನ್ನು ಪುನರಾರಂಭಿಸಿ. ಈ ಅವಧಿಯನ್ನು ಹಳೆಯ ಪ್ರಶ್ನೆಪತ್ರಿಕೆಗಳ ಪರಾಮರ್ಶೆಗೆ, ಮುಖ್ಯಾಂಶಗಳ ಪುನರ್ಮನನಕ್ಕೆ, ಉಜ್ಜಳಣೆಗೆ ಬಳಸಿಕೊಳ್ಳಿ. ಸಂಜೆ 6ರವರೆಗೆ ಈ ಕ್ರಮ ಮುಂದುವರಿಯಲಿ.

ಸಂಜೆ 6ಕ್ಕೆ ಅಲ್ಪೋಪಹಾರ ಸೇವಿಸಿ, 6.30ಕ್ಕೆ ಸಂಜೆಯ ಅಧ್ಯಯನ ಆರಂಭಿಸಿ. ಸಹಪಾಠಿಗಳೊಂದಿಗೆ ‘ಗುಂಪು ಅಧ್ಯಯನ’ಕ್ಕೆ ಈ ಅವಧಿ ಉತ್ತಮವಾದುದು. ಈ ಅವಧಿಯಲ್ಲಿ ಓದುವಿಕೆಯೊಂದಿಗೆ ಬರೆಯುವುದನ್ನೂ ರೂಢಿಸಿಕೊಳ್ಳಿ. ಗಣಿತದ ಲೆಕ್ಕಗಳನ್ನು ಬಿಡಿಸಿ, ಪ್ರತಿ ವಿಷಯಗಳಿಗೆ ಸಂಬಂಧಿಸಿದ ಮುಖ್ಯಾಂಶಗಳನ್ನು ಕಿರು ಟಿಪ್ಪಣಿಯ ರೂಪದಲ್ಲಿ ಬರೆದಿಟ್ಟುಕೊಳ್ಳಿ. ಅಧ್ಯಯನಕ್ಕೆ ಸಂಬಂಧಿಸಿ ನಿಮ್ಮದೇ ಆದ ಸಂಕ್ಷೇಪಾಕ್ಷರಗಳನ್ನು, ಜಾರುಚಿತ್ರವನ್ನು, ಮಿಂಚುಪಟ್ಟಿಗಳನ್ನು ರೂಪಿಸಿಕೊಳ್ಳಿ. ಅವೆಲ್ಲವುಗಳನ್ನೂ ನಿಮ್ಮ ಅಧ್ಯಯನ ಕೊಠಡಿಯಲ್ಲಿ ಲಗತ್ತಿಸಿ. ಈ ಅವಧಿ 9.30ರವರೆಗೆ ಮುಂದುವರಿಯಲಿ.

9.30ರಿಂದ 9.45ರವರೆಗೆ ಇಡೀ ದಿನದ ಅಧ್ಯಯನದ ಪುನರಾವಲೋಕನ ಮಾಡಿಕೊಳ್ಳಿ. ನಿಗದಿಪಡಿಸಿದಷ್ಟು ಅಧ್ಯಯನದ ಗುರಿ ತಲುಪಿದ್ದನ್ನು ಖಚಿತಪಡಿಸಿಕೊಳ್ಳಿ. ಮಾರನೆಯ ದಿನದ ಅಧ್ಯಯನಕ್ಕೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಿ. ನಂತರ ರಾತ್ರಿ ಊಟ ಮಾಡುತ್ತ ಪೋಷಕರೊಡನೆ ಆ ದಿನದ ಅಧ್ಯಯನದ ಕುರಿತು ಚರ್ಚಿಸಿ. ಅಗತ್ಯ ಮಾರ್ಗದರ್ಶನವನ್ನು ಪಡೆಯಿರಿ. ರಾತ್ರಿ 10 ಗಂಟೆಗೆ ದೀರ್ಘಾವಧಿ ನಿದ್ರೆಗೆ ಜಾರಿ ಮಾರನೆ ದಿನ ಬೆಳಗಿನ 4 ಗಂಟೆಯಿಂದ ಅಧ್ಯಯನ ಅಭಿಯಾನವನ್ನು ಮುಂದುವರಿಸಿ, ಆಲ್ ದ ಬೆಸ್ಟ್...

ನಿರಂತರ ಗಮನ ಹರಿಸಲು ಪ್ರೇರಣೆ
ಸ್ವಯಂ ಅಧ್ಯಯನ ವೇಳಾಪಟ್ಟಿ ಅಧ್ಯಯನದ ಕುರಿತು ಸ್ಪಷ್ಟ ಮತ್ತು ನಿರ್ದಿಷ್ಟ ಗುರಿ–ಉದ್ದೇಶಗಳನ್ನು ರೂಪಿಸಿಕೊಳ್ಳಲು ಹಾಗೂ ಆ ಗುರಿಗಳನ್ನು ಈಡೇರಿಸಿಕೊಳ್ಳಲು ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಪರೀಕ್ಷಾ ಅವಧಿಯಲ್ಲಿ ಲಭ್ಯವಿರುವ ಸಮಯವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಗುರಿಯತ್ತ ನಿರಂತರ ಗಮನ ಹರಿಸಲು ಇದು ಪ್ರೇರಣೆ ನೀಡುತ್ತದೆ.
-ಗಜಾನನ ಮನ್ನಿಕೇರಿ, ಡಿಡಿಪಿಐ, ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.