ಶುಕ್ರವಾರ, ಮಾರ್ಚ್ 5, 2021
17 °C
ಮರುನಾಮಕರಣಕ್ಕೆ ತೀರ್ಮಾನ

'ಪಶ್ಚಿಮ' ಕೈಬಿಡಲು ತೀರ್ಮಾನ; ಪಶ್ಚಿಮ ಬಂಗಾಳ ಇನ್ನು ಮುಂದೆ 'ಬಂಗಾ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

'ಪಶ್ಚಿಮ' ಕೈಬಿಡಲು ತೀರ್ಮಾನ; ಪಶ್ಚಿಮ ಬಂಗಾಳ ಇನ್ನು ಮುಂದೆ 'ಬಂಗಾ'

ಕೊಲ್ಕತ್ತಾ: ಗುರ್‍‍ಗಾಂವ್ ಮತ್ತು ಬೆಂಗಲೂರ್ ಹೆಸರನ್ನು ಬೆಂಗಳೂರು ಮತ್ತು ಗುರ್‍ಗ್ರಾಮ್ ಎಂದು ಬದಲಾಯಿಸಿದ ನಂತರ ಇದೀಗ ಪಶ್ಚಿಮ ಬಂಗಾಳ ಪಶ್ಚಿಮವನ್ನು ಕೈ ಬಿಟ್ಟು ಇಂಗ್ಲಿಷಿನಲ್ಲಿ ಬೆಂಗಾಳ್, ಬಂಗಾಳಿ ಭಾಷೆಯಲ್ಲಿ ಬಂಗಾ ಅಥವಾ ಬಾಂಗ್ಲಾ ಎಂದು ಹೆಸರು ಬದಲಿಸಲು ಸರಕಾರ ನಿರ್ಧರಿಸಿದೆ.

ಈ  ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ, ಪ್ರಸ್ತುತ ರಾಜ್ಯದಲ್ಲಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಹೆಸರನ್ನು ಇಂಗ್ಲಿಷ್‍ನಲ್ಲಿ ಬೆಂಗಾಳ್ ಮತ್ತು ಬಂಗಾಳಿಯಲ್ಲಿ ಬಂಗಾ ಅಥವಾ ಬಾಂಗ್ಲಾ ಎಂದು ಮರುನಾಮಕರಣ ಮಾಡಲಾಗುವುದು ಎಂದಿದ್ದಾರೆ.ಸದ್ಯ ಪಶ್ಚಿಮ ಬಂಗಾಳವನ್ನು ಬಂಗಾಳಿಯಲ್ಲಿ ಪಶ್ಚಿಮ್ ಬಂಗಾ ಅಥವಾ ಪಶ್ಚಿಮ್ ಬಾಂಗ್ಲಾ ಎಂದು ಕರೆಯಲಾಗುತ್ತಿದೆ.ಆಗಸ್ಟ್ 26 ರಂದು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಹೆಸರು ಬದಲಿಸುವ ಪ್ರಸ್ತಾಪವನ್ನು ಮುಂದಿರಿಸಿ ಚರ್ಚೆ ನಡೆಸಲಾಗುವುದು ಎಂದು ಚಟರ್ಜಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.