ವಾಷಿಂಗ್ಟನ್, (ಐಎಎನ್ಎಸ್): ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಆಫ್ಘಾನಿಸ್ತಾನದಲ್ಲಿನ ಶಾಂತಿ ಪ್ರಕ್ರಿಯೆಗೆ ಅಡ್ಡಿ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ. ಅಲ್ಲದೆ, ನೆರೆಯ ರಾಷ್ಟ್ರ ಭಾರತದ ಜತೆ ಶಾಂತಿ ಮತ್ತು ಸಹನೆಯಿಂದ ವರ್ತಿಸಬೇಕು ಎಂದೂ ಸಲಹೆ ನೀಡಿದ್ದಾರೆ.

ಆಫ್ಘಾನಿಸ್ತಾನ ಸಂಪೂರ್ಣ ಸ್ವತಂತ್ರವಾಗಿ ಅಧಿಕಾರ ನಡೆಸುವುದರಿಂದ ಭಾರತದ ಜತೆ ಸೇರಿ ತನಗೆ ಅಪಾಯ ಒಡ್ಡಬಹುದು ಎಂಬ ಆತಂಕದಿಂದ ಪಾಕಿಸ್ತಾನ ಎರಡೂ ನೆರೆಯ ರಾಷ್ಟ್ರಗಳ ಜತೆ ವೈರತ್ವ ಸಾಧಿಸುತ್ತಿದೆ ಎಂದು ಅವರು ಶ್ವೇತಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿಶ್ಲೇಷಿಸಿದರು.

ಭಾರತದ ಜತೆ ಶಾಂತಿ ಮತ್ತು ಸೌಹಾರ್ದಯುತ ಸಂಬಂಧ ಹೊಂದಿದರೆ ಎಲ್ಲರ ಹಿತ ಕಾಪಾಡುವುದರ ಜತೆಗೆ ಪಾಕಿಸ್ತಾನ ಸಹ ಅಭಿವೃದ್ಧಿ ಸಾಧಿಸಬಹುದು ಎಂದು ಹೇಳಿದರು.

2014ರ ಅಂತ್ಯದ ವೇಳೆಗೆ ಅಮೆರಿಕವು ಆಫ್ಘಾನಿಸ್ತಾನದಿಂದ ತನ್ನ ಪಡೆಯನ್ನು ವಾಪಸ್ ಕರೆಸಿಕೊಂಡ ನಂತರ ಭಾರತ ಆ ದೇಶದ ಮೇಲೆ ಪ್ರಭಾವ ಹೊಂದುತ್ತದೆ ಎಂಬ ಕಾರಣಕ್ಕೆ ಪಾಕಿಸ್ತಾನವು ತಾಲಿಬಾನ್ ಉಗ್ರರ ಮೂಲಕ ಹಿಂಸಾಕೃತ್ಯ ನಡೆಸುತ್ತಿದೆ.

ನ್ಯಾಟೊ ಪಡೆಗಳು ಆಫ್ಘಾನಿಸ್ತಾನದಿಂದ ವಾಪಸಾದ ನಂತರ ಉಗ್ರಗಾಮಿಗಳ ಮೂಲಕ (ತಾಲಿಬಾನ್ ಮತ್ತು ಹಖಾನಿ ಸಂಘಟನೆಗಳು) ಮತ್ತೊಮ್ಮೆ ಆಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಬೇಕು ಎಂಬುದು ಆ ದೇಶದ ಹುನ್ನಾರ ಎಂದು ಒಬಾಮ ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.