ಇಸ್ಲಾಮಾಬಾದ್ (ಪಿಟಿಐ/ಐಎಎನ್ಎಸ್); ಪೇಶಾವರ್ ಸಮೀಪದ ಪಟ್ಟಣವೊಂದರಲ್ಲಿ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ 36 ಮಂದಿ ಸಾವನ್ನಪ್ಪಿದ್ದು, 51 ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ತಾಲಿಬಾನ್ ವಿರೋಧಿ ಗುಂಪಾದ ~ಅದೆಝೈ~ ಅಥವಾ ~ಶಾಂತಿ ಸಮಿತಿ~ ಗುಂಪಿನ ನಾಯಕ ಹಕೀಮ್ ಖಾನ್ ಅವರ ಹೆಂಡತಿಯ ಅಂತ್ಯಸಂಸ್ಕಾರದ ವೇಳೆಯಲ್ಲಿ ಸೇರಿದ್ದ ಜನರ ಮೇಲೆ ಈ ದಾಳಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಸುಮಾರು 200 ಮಂದಿ ಸೇರಿದ್ದ ಜನರ ನಡುವೆ ಇದ್ದ ಆತ್ಮಹತ್ಯಾ ದಾಳಿಕೋರ ತನ್ನನು ತಾನು ಸ್ಫೋಟಿಸಿಕೊಂಡ. ಇದರಿಂದ 36 ಮಂದಿಯ ದೇಹಗಳು ಛಿದ್ರ ಛಿದ್ರಗೊಂಡವು.

ತಾರೀಖ್-ಇ-ತಾಲಿಬಾನ್ ಸ್ಫೋಟದ ಹೊಣೆ ಹೊತ್ತುಕೊಂಡಿದ್ದು, ಮುಂದೆ ಇನ್ನಷ್ಟು ದಾಳಿಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.