ಶನಿವಾರ, ಮೇ 28, 2022
25 °C

ಪಾಕಿಸ್ತಾನ ನೂತನ ಪ್ರಧಾನಿಗೆ ಮನಮೋಹನ್ ಶುಭ ಹಾರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ರಜಾ ಪರ್ವೇಜ್ ಅಶ್ರಫ್ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ಶುಭಾಶಯ ತಿಳಿಸಿದ್ದಾರೆ.ಅಶ್ರಫ್ ಅವರ ಅಧಿಕಾರ ಅವಧಿಯಲ್ಲಿ ಎರಡೂ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ವೃದ್ಧಿಸುವ ವಿಶ್ವಾಸವನ್ನು ಸಿಂಗ್ ವ್ಯಕ್ತಪಡಿಸಿದ್ದಾರೆ.`ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಅಶ್ರಫ್ ಅವರಿಗೆ ಯಶಸ್ಸು ಸಿಗಲಿ~ ಎಂದು ಹಾರೈಸಿರುವ ಸಿಂಗ್, `ಶಾಂತಿ, ಸಹಬಾಳ್ವೆ ಮತ್ತು ಪಾಕ್ ಜನತೆಗೆ ಒಳ್ಳೆಯದಾಗಲಿ~ ಎಂದು ಹೇಳಿದ್ದಾರೆ.ಶುಕ್ರವಾರ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ ಅಶ್ರಫ್, `ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವುದು ವಿದೇಶಾಂಗ ನೀತಿಯ ಆದ್ಯತೆಯ ವಿಷಯಗಳಲ್ಲಿ ಪ್ರಮುಖವಾದುದು~ ಎಂದಿದ್ದಾರೆ.`ಕಾಶ್ಮೀರ ವಿವಾದ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲು ಈಗಾಗಲೇ ನಡೆಯುತ್ತಿರುವ ಭಾರತ ಮತ್ತು ಪಾಕ್ ನಡುವಿನ ಮಾತುಕತೆ ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸಲು ಶ್ರಮಿಸಲಾಗುವುದು~ ಎಂದು ಅವರು ನುಡಿದಿದ್ದಾರೆ.ಆಡಳಿತಾರೂಢ ಪಿಪಿಪಿ ನಾಯಕರಾದ ಅಶ್ರಫ್ ಅವರಿಗೆ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪ್ರಮಾಣ ವಚನ ಬೋಧಿಸಿದರು.ಪ್ರಧಾನಿ ಪಟ್ಟಕ್ಕೆ ಮಖ್ದೂಮ್ ಶಹಾಬುದ್ದೀನ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.

ಆದರೆ, ಅವರ ವಿರುದ್ಧ ಕೋರ್ಟ್ ಬಂಧನದ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಭುಟ್ಟೊ ಕುಟುಂಬಕ್ಕೆ ಆಪ್ತರಾಗಿರುವ 61 ವರ್ಷದ ಅಶ್ರಫ್ ಅವರನ್ನು ಆಯ್ಕೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.