ಶುಕ್ರವಾರ, ಮೇ 27, 2022
22 °C

ಪಾಕ್: ಚೆಕ್ ಪೋಸ್ಟ್ ಮೇಲೆ ಉಗ್ರರ ದಾಳಿ, 20 ಉಗ್ರರು, 4 ಸೈನಿಕರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನ ವಾಯವ್ಯ ಭಾಗದ ಬುಡಕಟ್ಟು ಪ್ರಾಂತ್ಯದ ಸಲಾಲಾ ಪ್ರದೇಶದಲ್ಲಿರುವ ಸೇನೆಯ ಚೆಕ್ ಪೋಸ್ಟ್ ಮೇಲೆ ಉಗ್ರರು ದಾಳಿಮಾಡಿದ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಸುಮಾರು 20 ಉಗ್ರರು ಹಾಗೂ ನಾಲ್ವರು ಸೈನಿಕರು ಹತ್ಯೆಯಾಗಿರುವ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ.ಬುಡಕಟ್ಟು ಪ್ರಾಂತ್ಯದ ಪಾಕಿಸ್ತಾನ - ಅಫ್ಘಾನಿಸ್ತಾನ  ಗಡಿಭಾಗದಲ್ಲಿರುವ ಸೇನೆಯ ಚೆಕ್ ಪೋಸ್ಟ್ ಮೇಲೆ ಮಂಗಳವಾರ ರಾತ್ರಿ ಉಗ್ರರು ಏಕಾಏಕಿ ದಾಳಿ ಮಾಡಿ ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾರೆ. ಆದರೆ ಉಗ್ರರ ಸಂಖ್ಯೆ ತಿಳಿದು ಬಂದಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಉಗ್ರರ ದಾಳಿ ವೇಳೆ ಪ್ರತಿಯಾಗಿ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸೈನಿಕರು ಸೇರಿದಂತೆ 20 ಉಗ್ರರು ಹತರಾಗಿದ್ದಾರೆ ಎಂದು `ಡಾನ್~ ಪತ್ರಿಕೆ ವರದಿ ಮಾಡಿದೆ.ಇವರೆಗೆ ಯಾವುದೇ ಉಗ್ರರ ಸಂಘಟನೆ ಈ ದಾಳಿ ಹೊಣೆ ಹೊತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.