ಶುಕ್ರವಾರ, ಮೇ 20, 2022
26 °C

ಪಾಕ್ ನಲ್ಲಿ ದ್ರೋಣ ದಾಳಿ: 30 ಉಗ್ರರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಪೇಶಾವರ (ಪಿಟಿಐ):  ಅರಾಜಕತೆ ಇರುವ ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ತಾಲಿಬಾನ್ ಉಗ್ರರು  ನಡೆಸುತ್ತಿದ್ದ ಸಭೆಯೊಂದರ ಮೇಲೆ ಅಮೇರಿಕದ ದ್ರೋಣ ವಿಮಾನ ದಾಳಿ ನಡೆಸಿದಾಗ 30  ಮಂದಿ ತಾಲಿಬಾನ್ ಉಗ್ರರು ಹತರಾಗಿದ್ದಾರೆ.

ಉತ್ತರ ವಜೀರಿಸ್ತಾನದ ಮಿರಾನಶಹಾದ ಪಶ್ಚಿಮ ದಿಕ್ಕಿನಲ್ಲಿ 25 ಕಿ.ಮೀ. ದೂರದಲ್ಲಿರುವ ದತ್ತಾಖೇಲ್ ನ ಆವರಣದಲ್ಲಿ  ತಾಲಿಬಾನ್ ಉಗ್ರರು ಸಭೆ ನಡೆಸುತ್ತಿದ್ದರು.  ಅವರಿಗೆ ತಿಳಿಯದಂತೆ ಸಭೆ ನಡೆಯುತ್ತಿದ್ದುದನ್ನು ಬೇಹುಗಾರ ವಿಮಾನಗಳಿಂದ ಪತ್ತೆ ಮಾಡಿ ಈ ದಾಳಿ ನಡೆಸಲಾಯಿತು. 

 ಇದುವರೆಗಿನ ಉಗ್ರರ ಮೇಲೆ ನಡೆಸಿದ ದಾಳಿಗಳಲ್ಲಿ ಇದು ದೊಡ್ಡದಾದ ದಾಳಿ ಎನ್ನಲಾಗಿದೆ.  ಇದು ಈ ವರ್ಷದ 23ನೇ ದ್ರೋಣ ದಾಳಿ ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.