ಶುಕ್ರವಾರ, ಮೇ 14, 2021
29 °C

ಪಾ.ಪು ಕಥಾ ಪುರಸ್ಕಾರಕ್ಕೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯು 2011ನೇ ಸಾಲಿನ `ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ~ಕ್ಕೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.ಹಸ್ತಪ್ರತಿಯು ಕಥೆಗಾರರ ಮೊದಲ ಕಥಾ ಸಂಕಲನವಾಗಿರಬೇಕು.ಕಥೆಗಾರರು ಐದಕ್ಕಿಂತ ಹೆಚ್ಚಿನ ಕಥೆಗಳುಳ್ಳ ಹಸ್ತಪ್ರತಿಯ ಮೂರು ಪ್ರತಿಗಳನ್ನು ಡಿ.ಟಿ.ಪಿ ಮಾಡಿಸಿ, ಬೈಂಡ್ ಹಾಕಿಸಿ ಇದೇ 31ರೊಳಗೆ ಸಲ್ಲಿಸಬೇಕು. ಕಥೆಗಾರರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂದು ಪ್ರಕಟಣೆ ತಿಳಿಸಿದೆ.ಹಸ್ತಪ್ರತಿಗಳನ್ನು ಕಳುಹಿಸಬೇಕಾದ ವಿಳಾಸ: ವಿಜಯಕಾಂತ ಪಾಟೀಲ, ಪ್ರಧಾನ ಸಂಚಾಲಕರು, ಕನ್ನಡ ಯುವಜನ ಕ್ರಿಯಾ ಸಮಿತಿ, ಚಿಕ್ಕಾಂಶಿ, ಹೊಸೂರು, ಹಾನಗಲ್ಲ ತಾಲ್ಲೂಕು - 581104. ಹೆಚ್ಚಿನ ಮಾಹಿತಿಗೆ 9731717430 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.