ಮುಡಿಪು: ‘ನಮ್ಮದು ಕೃಷಿ ಪ್ರಧಾನ ವಾದ ರಾಷ್ಟ್ರವಾಗಿದ್ದು, ಕೃಷಿಯ ಅವಲಂಬನೆ ನಮಗೆ ಅನಿವಾರ್ಯ ವಾಗಿದೆ. ಆದ್ದರಿಂದ ಹಲವಾರು ರೀತಿಯಲ್ಲಿ ಆಧುನಿಕತೆಯ ಅನುಕರಣೆ ಮಾಡಿಕೊಂಡರೂ ಪಾರಂಪರಿಕ ಕೃಷಿ ಪದ್ದತಿ, ಪರಂಪರೆ ಮತ್ತು ನಮ್ಮ ಸಂಸ್ಕೃತಿ ಯನ್ನು ನಾವು ಯಾವತ್ತೂ ಮರೆಯ ಬಾರದು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಅವರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳ, ಸೌಜನ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಮಿತಿಯ ವತಿಯಿಂದ ಮಂಗಳೂರು ತಾಲ್ಲೂಕಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾ ರ್ಥಿಗಳಿಗಾಗಿ ಭಾನುವಾರ ಕೊಣಾಜೆ ಸಮೀಪದ ಪರಂಡೆಯ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ಪಾರಂಪರಿಕ ಕೃಷಿ ಪ್ರಾತ್ಯಕ್ಷಿಕೆ, ವನಮಹೋತ್ಸವ, ತುಳು ನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಯ ಮುಖಾಂತರವಾಗಿ ನಾವು ವ್ಯವಹಾರಿಕವಾಗಿ, ಸಾಂಸ್ಕೃತಿಕವಾಗಿ ನಾವು ಶ್ರೀಮಂತವಾಗಿದ್ದೇವೆ. ಇಂತಹ ಈ ಕೃಷಿಯ ಮಹತ್ವವನ್ನು ಇಂದಿನ ವಿದ್ಯಾ ರ್ಥಿಗಳಲ್ಲಿ ತಿಳಿಯಪಡಿಸಿ ಅವರಲ್ಲಿ ವಿದ್ಯಾ ರ್ಜನೆಯೊಂದಿಗೆ ಕೃಷಿಯ ಆಸಕ್ತಿ ಬೆಳೆ ಸುವ ಇಂತಹ ಕಾರ್ಯಕ್ರಮಗಳಿಗೆ ನಾವು ಪ್ರೋತ್ಸಾಹಿಸಬೇಕಿದೆ. ಈ ಪ್ರದೇಶವು ಸುಂದರವಾದ ಪ್ರದೇಶವಾಗಿದ್ದು, ಮಂಗಳೂರು ವಿವಿಯೂ ಇದೆ ಎಂದರು.

ರಾಮಕೃಷ್ಣ ಪೌಢಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಉತ್ತಮ ಬೆಳವ ಣಿಗೆಗೆ ಹಾಗೂ ಉತ್ತಮ ಭವಿಷ್ಯಕ್ಕೆ ಅಡಿಪಾಯವನ್ನು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೌಲ್ಯಗಳು, ಸಂಸ್ಕಾರ, ನಾಯಕತ್ವ, ಉತ್ತಮ ಸಂಸ್ಕತಿ ಯನ್ನು ನಾವು ಇದರಿಂದ ಕಲಿತು ಕೊಳ್ಳಬಹುದು ಎಂದು ಹೇಳಿದರು.

ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯ್ಕ್ ಮಾತನಾಡಿ, ‘ನಾವು ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ವಿರುದ್ಧವಾಗಿ ಹೋಗುತ್ತಿದ್ದೇವೆ. ಇದರ ಪರಿಣಾಮವನ್ನು ಈಗ ಬೀಳುತ್ತಿರುವ ಮಳೆಯ ಮೂಲಕ ಕಂಡುಕೊಳ್ಳ ಬಹುದು. ಆದ್ದರಿಂದ ನಾವು ಪರಿಸರಕ್ಕೆ ಪೂರಕವಾಗುವ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಅದರ ಮಹತ್ವ ವನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.

ಸಮಾರಂಭದಲ್ಲಿ ಸಮಾಜಸೇವಕ ಪ್ರಸಾದ್ ರೈ ಕಲ್ಲಿಮಾರ್, ನಿವೃತ್ತ ಅಧ್ಯಾ ಪಕ ಆನಂದ ಮಾಸ್ಟರ್, ವಿಜಯಲಕ್ಷ್ಮೀ ಕಲ್ಲಿಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾರತಿ ಪಟಗಾರ್, ವಸಂತ ಕೋಡಿ ಮುಂತಾದವರು ಉಪಸ್ಥಿತರಿದ್ದರು. ತ್ಯಾಗಂ ಹರೇಕಳ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಮುತ್ತು ಶೆಟ್ಟಿ ಹಾಗೂ ಬಳಗದವರು ಪಾಡ್ದನದ ಮೂಲಕ ಸಭಿಕರ ಗಮನಸೆಳೆದರು.

ಕೆಸರು ಗದೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಕಬಡ್ಡಿ, ನೇಜಿ ನಡುವ ಪ್ರಾತ್ಯಕ್ಷಿಕೆ, ನಿಧಿ ಹುಡುಕುವುದು, ಕೈ ಚೆಂಡು ಆಟ ಮುಂತಾದ ಆಟಗಳೊಂದಿಗೆ ವನಮ ಹೋತ್ಸವ ಹಮ್ಮಿಕೊಳ್ಳಲಾಗಿತ್ತು. ತುಳು ನಾಡ ಆಹಾರೋತ್ಸವ ಕಾರ್ಯಕ್ರಮ ವನ್ನೂ ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು ವಿಶ್ವವಿದ್ಯಾಲಯವು ಒಂದು ತ್ಯಾಜ್ಯ ವಿಲೇವಾರಿ ಘಟಕವನ್ನು ಮಾಡಿದರೆ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ.
ಸತೀಶ್ ಕುಂಪಲ, ಉಪಾಧ್ಯಕ್ಷ, ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.