ಮಂಗಳವಾರ, ಜೂನ್ 15, 2021
25 °C

ಪಾಳುಬಿದ್ದ ಗ್ರಾಮೀಣ ಸಂತೆ: ರೈತರು ಕಂಗಾಲು

ಪ್ರಜಾವಾಣಿ ವಾರ್ತೆ / ಬಸವರಾಜ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

ರೋಣ: ರೈತರ ಉತ್ಫನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಗ್ರಾಹಕರಿಗೆ  ಕಾಯಿಪಲ್ಲೆ, ದವಸ ಧಾನ್ಯಗಳು ಸಿಗುವ ವ್ಯವಸ್ಥೆಯಾಗಿ ರೂಪಗೊಂಡ ಗ್ರಾಮೀಣ ಸಂತೆ ಈಗ ಪಾಳುಬಿದ್ದಿದೆ.ಲಕ್ಷಾಂತರ ವೆಚ್ಚದಲ್ಲಿ ರೋಣ ತಾಲ್ಲೂಕಿನಲ್ಲಿ ನಿರ್ಮಿಸಲಾಗಿರುವ ಗ್ರಾಮೀಣ ಸಂತೆಯತ್ತ ವ್ಯಾಪಾರಿಗಳು, ರೈತರು ಹಾಗೂ ಗ್ರಾಹಕರು ಸುಳಿಯದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ.  ಎಲ್ಲಿವೆ ಸಂತೆಗಳು 

ತಾಲ್ಲೂಕಿನ ಮುಶಿಗೇರಿ, ಬೆಳವಣಕಿ, ಯಾವಗಲ್ಲ ಮತ್ತು ಅಬ್ಬಿಗೇರಿ ಗ್ರಾಮಗಳಲ್ಲಿ ತಲಾ 12ರಿಂದ 15ಲಕ್ಷ ಖರ್ಚು ಮಾಡಿ ಕಟ್ಟಿದ ಗ್ರಾಮೀಣ ಸಂತೆ ಮಾರುಕಟ್ಟೆ ಪ್ರಯೋಜನಕ್ಕೆ ಬಾರದೆ ವರ್ಷಗಳೇ ಕಳೆದಿವೆ.ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಸಂತೆ ಪ್ರದೇಶ ನಿರ್ಲಕ್ಷ್ಯಕ್ಕೆ ಒಳಗಾಗಿ ಜಾನುವಾರು ಮತ್ತು ನಿರ್ಗಗತಿಕರಿಗೆ ಆಶ್ರಯ ತಾಣಗಳಾಗಿವೆ. ಅಬ್ಬಿಗೇರಿ ಮತ್ತು ಬೆಳವಣಕಿಯ ಗ್ರಾಮೀಣ ಸಂತೆ ಮಾರುಕಟ್ಟೆಗಳನ್ನು ಕಟ್ಟಿಸಿದ್ದಾದರೂ ಏಕೆ ? ಇಲ್ಲೇನು ಅಂಥ ವಹಿವಾಟು ನಡೆಯುತ್ತದೆ ? ಎಂಬ ಪ್ರಶ್ನೆ ಗ್ರಾಮಸ್ಥರದ್ದು.ಸೌಲಭ್ಯಗಳ ಕೊರತೆ

ಇಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಮಳೆ-ಗಾಳಿಯಿಂದ ರಕ್ಷಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಶೌಚಾಲಯ, ಕುಡಿಯುವ ನೀರು ಇಲ್ಲ. ಹಾಗಾಗಿ ಅವುಗಳ ಉಪಯೋಗ ಸರಿಯಾಗಿ ಆಗುತ್ತಿಲ್ಲ.ಸಂತೆಗಳು ನಡೆಯುತ್ತಿಲ್ಲ

ಬೆಳವಣಕಿಯಲ್ಲಿ ಬುಧವಾರ, ಅಬ್ಬಿಗೇರಿಯಲ್ಲಿ ಸೋಮವಾರ, ಮುಶಿಗೇರಿಯಲ್ಲಿ ಮಂಗಳವಾರ ಹೀಗೆ ಸಂತೆಗೆ ದಿನ ನಿಗದಿ ಪಡಿಸಲಾಗಿದೆ. ಆದರೂ ಈ ಸ್ಥಳಗಳಲ್ಲಿ ಸಂತೆ ನಡೆಯುವುದಿಲ್ಲ.ಎಪಿಎಂಸಿ, ಗ್ರಾಮೀಣ ಸಂತೆ ಮಾರು ಕಟ್ಟೆಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ, ಗ್ರಾಮೀಣ ಸಂತೆ ನಡೆಯುವಂತೆ ಅಧಿಕಾರಿಗಳು ಕ್ರಮ ಕೈಕೊಳ್ಳಬೇಕು. ಈ ಕುರಿತು ಗ್ರಾ.ಪಂ.ಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಎಪಿಎಂಸಿ ಅಧ್ಯಕ್ಷರ ಅಭಿಪ್ರಾಯ

ಗ್ರಾಮೀಣ ಸಂತೆಗಳ ಉಪ ಯೋಗವನ್ನು ಜನತೆಗೆ ದೊರಕಿ ಸುವುದು ಸ್ಥಳೀಯ ಗ್ರಾ.ಪಂ.ಗಳ ಜವಾ ಬ್ದಾರಿ ಎಂದು ತಿಳಿಸಿದರು.ಅಲ್ಲದೆ, ಜನತೆ ಮತ್ತು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದವಸ ಧಾನ್ಯ ಸಂರಕ್ಷಿಸಲು ಗೋದಾಮು ನಿರ್ಮಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.                                                                          

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.