ಮಂಗಳವಾರ, ಏಪ್ರಿಲ್ 20, 2021
24 °C

ಪಿಎಸಿ ವ್ಯಾಪ್ತಿ ಮೀರುತ್ತಿದೆ: ಚಾಕೊ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಜೆಪಿಸಿ) ತನ್ನ ಅಧಿಕಾರದ ವ್ಯಾಪ್ತಿ ಮೀರುತ್ತಿದೆ ಎಂದು ಜೆಪಿಸಿ ಅಧ್ಯಕ್ಷ ಪಿ.ಸಿ.ಚಾಕೊ ಟೀಕಿಸಿದ್ದಾರೆ. ಆದಷ್ಟೂ ಘರ್ಷಣೆಗಳು ಆಗದಂತೆ ನೋಡಿಕೊಳ್ಳಬೇಕಾಗಿದ್ದು, ಜೆಪಿಸಿಯು ಈ ಬಗ್ಗೆ ಚರ್ಚಿಸುತ್ತದೆ ಎಂದು ಹೇಳಿದ್ದಾರೆ.ಪಿಎಸಿಯ ಅಧಿಕಾರವು ಮಹಾಲೇಖಪಾಲರು ಉಲ್ಲೇಖಿಸಿರುವ ಹಗರಣದ ಅಕ್ರಮಗಳ ಬಗ್ಗೆ ಲೆಕ್ಕಪತ್ರ ನೋಡಿಕೊಳ್ಳುವುದಕ್ಕೆ ಸೀಮಿತವಾಗಿದೆ. ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚನೆಯ ಉದ್ದೇಶವೇ 2ಜಿ ಹಗರಣವನ್ನು ವ್ಯಾಪಕವಾಗಿ ಪರಿಶೀಲನೆಗೆ ಒಳಪಡಿಸುವುದಾಗಿದೆ. ಆದರೆ ಅದು ಜೆಪಿಸಿ ಮಾಡಬೇಕಾದ ತನಿಖೆಗೆ ಪರ್ಯಾಯವಾಗಿ ಮತ್ತೊಂದು ತನಿಖೆ ನಡೆಸುತ್ತಿದೆಯೇನೋ ಎಂಬಂತಹ ಭಾವನೆ ಬರುವಂತೆ ನಡೆದುಕೊಳ್ಳಬಾರದು ಎಂದು ಚಾಕೊ ಹೇಳಿದ್ದಾರೆ.ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ನೇತೃತ್ವದ ಪಿಎಸಿಯು ಹಗರಣದ ಬಗ್ಗೆ ಬರೆದ ಪತ್ರಕರ್ತರು ಮತ್ತು ಕಾರ್ಪೊರೇಟ್ ದಲ್ಲಾಳಿ ನೀರಾ ರಾಡಿಯಾ ಅವರು ಪ್ರಮುಖರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಅಂಶಗಳನ್ನು ಪ್ರಕಟಿಸಿದ ನಿಯತಕಾಲಿಕಗಳ ಸಂಪಾದಕರು ಹೇಳಿಕೆ ನೀಡುವಂತೆ ತಿಳಿಸಿರುವ ಹಿನ್ನೆಲೆಯಲ್ಲಿ ಚಾಕೊ ಈ ಆರೋಪ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.