ಗುರುವಾರ , ಜೂನ್ 24, 2021
28 °C

ಪಿಯು: ಬದಲಿ ವಿದ್ಯಾರ್ಥಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ಬೇರೊಬ್ಬರ ಹೆಸರಿ­ನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆಯು­ತ್ತಿದ್ದ ಅಭ್ಯರ್ಥಿಯೊಬ್ಬ ಪರೀಕ್ಷಾ ಜಾಗೃತ ದಳದವರ ಕೈಗೆ ಸಿಕ್ಕಿಬಿದ್ದ ಘಟನೆ ಪಟ್ಟಣದ ಎಸ್‌.ಎಂ. ಲಿಂಗಪ್ಪ ಶಿಕ್ಷಣ ವಿದ್ಯಾಲ­ಯದ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆದಿದೆ. ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಆಸಿಫ್‌ (19) ಸಿಕ್ಕಿಬಿದ್ದ ವ್ಯಕ್ತಿ. ಆಲಂಬಾಡಿ ಗ್ರಾಮದ ಸೋಮ­ಶೇಖರ್‌ ಎಂಬುವವನ ಬದಲಾಗಿ ಆಸಿಫ್‌ ಬುಧವಾರ ರಾಜ್ಯಶಾಸ್ತ್ರ ಪತ್ರಿ­ಕೆಯ ಪರೀಕ್ಷೆ ಬರೆಯುತ್ತಿದ್ದ.

ಜಾಗೃತ ದಳದ ಅಧಿಕಾರಿಗಳ ತಂಡವು ಪ್ರವೇಶ ಪತ್ರ­ದಲ್ಲಿನ ಅಭ್ಯರ್ಥಿಯ ಭಾವ­ಚಿತ್ರ­ವನ್ನು ಪರಿ­ಶೀಲನೆ ಮಾಡುವ ಸಂದರ್ಭ­ದಲ್ಲಿ ನಕಲಿ ಅಭ್ಯರ್ಥಿಯನ್ನು ಪತ್ತೆ ಹಚ್ಚಿ­ದರು. ಆಸಿಫ್‌­ನನ್ನು ಪೋಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.