ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು 50 ದಶಲಕ್ಷ ಟ್ಯಾಬ್ಲೆಟ್ಗಳು ಮಾರಾಟವಾಗಲಿದ್ದು, ಇದರಲ್ಲಿ `ಯಪಲ್~ ಪಾಲು ಶೇ 70 ರಿಂದ 80ರಷ್ಟಿರುತ್ತದೆ ಎನ್ನುತ್ತದೆ `ಗಾರ್ಟನರ್~ ಸಮೀಕ್ಷೆ.

ಹೊಸ ಗಣಕಯಂತ್ರ ಕೊಳ್ಳಲು ಮುಂದಾಗುತ್ತಿರುವ ಶೇ 85ರಷ್ಟು ಜನರು `ಪಿಸಿ~ಗೆ ಬದಲಾಗಿ ಲ್ಯಾಪ್ಟಾಪ್ ಹಾಗೂ ಶೇ 60ರಷ್ಟು ಜನರು ಟ್ಯಾಬ್ಲೆಟ್ಖರೀದಿಸಿಲು ಮನಸ್ಸು ಮಾಡುತ್ತಿದ್ದಾರೆ...

ಇತ್ತೀಚೆಗೆ ತೈಪೆಯಲ್ಲಿ ಜಗತ್ತಿನ ಎರಡನೆಯ ಅತಿ ದೊಡ್ಡ ಕಂಪ್ಯೂಟರ್ ಮೇಳ `ಕಂಪ್ಯೂಟೆಕ್~ ನಡೆಯಿತು. 5 ದಿನಗಳ ಕಾಲ ನಡೆದ ಈ ಮೇಳದಲ್ಲಿ ಪ್ರಪಂಚದ ಪ್ರಮುಖ ಕಂಪ್ಯೂಟರ್ ತಯಾರಿಕಾ ಕಂಪೆನಿಗಳು ತಮ್ಮ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಿದವು. ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆಹೇಗೆ ಹೊಸ ತಂತ್ರಜ್ಞಾನದೆಡೆಗೆ ಪಲ್ಲಟವಾಗುತ್ತಿದೆ ಎನ್ನುವುದಕ್ಕೆ ಈ ಮೇಳ ಸಾಕ್ಷಿಯಾಯಿತು.

ತಂತ್ರಜ್ಞಾನ ಸಲಹಾ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ ಇತ್ತೀಚೆಗೆ ಹೊಸ ಗಣಕಯಂತ್ರ ಕೊಳ್ಳಲು ಮುಂದಾಗುತ್ತಿರುವ ಶೇ 85ರಷ್ಟು ಜನರು `ಪಿಸಿ~ಗೆ ಬದಲಾಗಿ ಲ್ಯಾಪ್ಟಾಪ್ ಹಾಗೂ ಶೇ 60ರಷ್ಟು ಜನರು `ಟ್ಯಾಬ್ಲೆಟ್~ಗಳನ್ನು ಖರೀದಿಸಿಲು ಮನಸ್ಸು ಮಾಡುತ್ತಿದ್ದಾರೆ. ತೈಪೆಯಲ್ಲಿ ನಡೆದ ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಹೊಸ ತಲೆಮಾರಿನ`ಟ್ಯಾಬ್ಲೆಟ್~ಗಳನ್ನು ಪ್ರದರ್ಶಿಸಲಾಯಿತು.

ಲೆನೊವೊ ಗ್ರೂಪ್ ಲಿಮಿಟೆಡ್ ಮತ್ತು ತೋಷಿಬಾ ಕಾರ್ಪೊರೇಷನ್ ಸೇರಿದಂತೆ ಹಲವು ಕಂಪ್ಯೂಟರ್ ತಯಾರಿಕಾ ಕಂಪೆನಿಗಳನ್ನು ಒಳಗೊಂಡ `ತೈಪೆ ಕಂಪ್ಯೂಟರ್ ಅಸೋಸಿಯೇಷನ್~ (ಟಿಸಿಎ) ಹೊಸ ತಲೆಮಾರಿನ ಗಣಕಯಂತ್ರ ತಂತ್ರಜ್ಞಾನ ಪ್ರಾತ್ಯಕ್ಷಿಕೆಯನ್ನೂ ಆಯೋಜಿಸಿತ್ತು.

`ಟಿಸಿಎ~ ಪ್ರಕಾರ ಇಡೀ ಸಾಂಪ್ರದಾಯಿಕ ಗಣಕಯಂತ್ರ ಮಾರುಕಟ್ಟೆ ಹೊಸ ತಲೆಮಾರಿನ ತಂತ್ರಜ್ಞಾನದೆಡೆಗೆ ಪಲ್ಲಟವಾಗುತ್ತಿದೆ. ಬಳಕೆದಾರ ಹೊಸ ಉತ್ಪನ್ನಗಳ ಖರೀದಿಯೆಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾನೆ~ ಈ ಹಿನ್ನೆಲೆಯಲ್ಲಿ ಗಣಕಯಂತ್ರ ತಯಾರಿಕೆ ಕಂಪೆನಿಗಳು ಹೊಸ ಉತ್ಪನ್ನ ಮತ್ತು ತಂತ್ರಾಂಶಗಳೆಡೆಗೆ ಗಮನ ಹರಿಸಬೇಕಿದೆ ಎಂದಿದೆ.
ಹಾಗೆ ನೋಡಿದರೆ, ಕಳೆದ ಎರಡು ವರ್ಷಗಳಲ್ಲಿ `ಪಿಸಿ~ ಮಾರುಕಟ್ಟೆ ಗಣನೀಯ ಕುಸಿತ ಕಂಡಿದೆ. ಟ್ಯಾಬ್ಲೆಟ್ಗಳೆಡೆ ಗ್ರಾಹಕರ ಅಭಿರುಚಿ ಹೆಚ್ಚಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಶಂಶೋಧಕರು.

`ಗಾರ್ಟನರ್~ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ 2011ರಲ್ಲಿ ಜಾಗತಿಕ ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆ ಶೇ 15ರಿಂದ ಶೇ 10ಕ್ಕೆ ಇಳಿದಿದೆ. ಜಾಗತಿಕ `ಪಿಸಿ~ ರಫ್ತು ಸಂಸ್ಥೆ `ಐಎಚ್ಎಸ್~ ಪ್ರಕಾರ, ವರ್ಷದಿಂದ ವರ್ಷಕ್ಕೆ ಕಂಪ್ಯೂಟರ್ ರಫ್ತು ಶೇ 0.3ರಷ್ಟು ಇಳಿಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2011ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 8.1 ದಶಲಕ್ಷ ಗಣಕಯಂತ್ರಗಳೂ ರಫ್ತಾಗಿವೆ.

ಇದರಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಮೂರನೆಯ ಸ್ಥಾನದಲ್ಲಿರುವ `ಏಸರ್~ ಕಂಪೆನಿ ಪಾಲು ಶೇ 20ರಷ್ಟು ಕುಸಿತ ಕಂಡಿದೆ.ಇನ್ನೊಂದೆರಡು ವರ್ಷಗಳಲ್ಲಿ `ಗೂಗಲ್~ ಮತ್ತು ಮೈಕ್ರೊಸಾಫ್ಟ್ ಕಂಪೆನಿಗಳು `ಐಪಾಡ್~ ಮಾರುಕಟ್ಟೆಯಲ್ಲಿ ಬೇರೂರುತ್ತಿದ್ದಂತೆ, ಸಾಂಪ್ರದಾಯಿಕ ಗಣಕಯಂತ್ರ ಮಾರುಕಟ್ಟೆ ಸಂಪೂರ್ಣ ಕುಸಿಯಲಿದೆ ಎನ್ನುತ್ತಾರೆ ಗಾರ್ಟ್ನರ್ ವಿಶ್ಲೇಷಕರು.

2010ರ ನಾಲ್ಕನೆಯ ತ್ರೈಮಾಸಿಕ ಅವಧಿಯಲ್ಲಿ `ಆ್ಯಪಲ್~ ಕಂಪೆನಿ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಶೇ 73ರಷ್ಟು ಪಾಲನ್ನು ಹೊಂದಿತ್ತು. ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಶೇ 17ರಷ್ಟು ಪಾಲಿನೊಂದಿಗೆ ಎರಡನೆಯ ಸ್ಥಾನದಲ್ಲಿತ್ತು.

2010ರಲ್ಲಿ ಒಟ್ಟು 18 ದಶಲಕ್ಷ ಟ್ಯಾಬ್ಲೆಟ್ಗಳು ಮಾರಾಟವಾಗಿವೆ ಎನ್ನುತ್ತದೆ ಜಾಗತಿಕ ಸಂಶೋಧನಾ ಸಂಸ್ಥೆ `ಐಡಿಸಿ~ ವರದಿ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು 50 ದಶಲಕ್ಷ ಟ್ಯಾಬ್ಲೆಟ್ಗಳು ಮಾರಾಟವಾಗಲಿದ್ದು, ಇದರಲ್ಲಿ `ಆ್ಯಪಲ್~ ಪಾಲು ಶೇ 70 ರಿಂದ 80ರಷ್ಟಿರುತ್ತದೆ ಎನ್ನುತ್ತದೆ ಈ ಸಮೀಕ್ಷೆ.

ಗೂಗಲ್ ಆಂಡ್ರಾಯ್ಡ ಮತ್ತು ಆ್ಯಪಲ್ ಕಾರ್ಯನಿರ್ವಹಣಾ ತಂತ್ರಾಂಶಗಳಿರುವ `ಟ್ಯಾಬ್ಲೆಟ್~ಗಳ ಬೇಡಿಕೆ ಹೆಚ್ಚುತ್ತಿದೆ. ಆ್ಯಪಲ್ `ಐಒಎಸ್~ನ ಪಾಲು ಶೇ 68ರಷ್ಟಿದ್ದರೆ, ಆಂಡ್ರಾಯ್ಡ ಶೇ 19ರಷ್ಟು ಪಾಲು ಹೊಂದಿದೆ.

`ಟ್ಯಾಬ್ಲೆಟ್~ಗಳ ಜತೆಗೆ ಕಂಪ್ಯೂಟೆಕ್ ಮೇಳದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಆಧಾರಿತ ಸೇವೆಗಳನ್ನೂ ಪರಿಚಯಿಸಲಾಯಿತು. ತೈಪೆ ಮೂಲದ `ತೈವೇನ್ಸ್~ ಎನ್ನುವ ಕಂಪೆನಿ ಇತ್ತೀಚೆಗೆ ಗಣಕಯಂತ್ರ ಮಾರುಕಟ್ಟೆ ಕುಸಿತ ಹಿನ್ನೆಲೆಯಲ್ಲಿ `ಕ್ಲೌಡ್ ದತ್ತಾಂಶ ಕೇಂದ್ರಗಳನ್ನು ಪ್ರಾರಂಭಿಸಲು ಮುಂದಾಗಿದೆ.

ಗುತ್ತಿಗೆ ಆಧಾರದಲ್ಲಿ ಲ್ಯಾಪ್ಟಾಪ್ ತಯಾರಿಸುವ ಜಗತ್ತಿನ ಮುಂಚೂಣಿ ಕಂಪೆನಿ `ಕ್ವಾಂಟ ಕಂಪ್ಯೂಟರ್~ ಕಾರ್ಪೊರೇಷನ್ ಕೂಡ ಹೊಸ ಗಣಕ ವ್ಯವಹಾರಗಳತ್ತ ಮುಖ ಮಾಡಿದೆ.

ಗೂಗಲ್ನಂತ ಜಾಗತಿಕ ಕಂಪೆನಿಗಳಿಗೆ ಸರ್ವರ್ಗಳನ್ನು ಕ್ವಾಂಟ್ ನಿರ್ಮಿಸಿಕೊಡುತ್ತದೆ. ವೆಬ್ ಬ್ರೌಸರ್ ಮೂಲಕ ಸಾಮಾನ್ಯ ಗಣಕಯಂತ್ರದಲ್ಲಿ ಪಡೆಯಬಹುದಾದ ಎಲ್ಲ ಸೌಲಭ್ಯಗಳನ್ನು ಪಡೆಯಬಹುದಾದ `ಕ್ಲೌಡ್ ಕಂಪ್ಯೂಟಿಂಗ್~ ಕುರಿತು ಈ ಕಂಪೆನಿಗಳು ಹೆಚ್ಚಿನ ಗಮನ ಹರಿಸುತ್ತಿದೆ.

`ಕಂಪ್ಯೂಟೆಕ್~ ಮೇಳದಲ್ಲಿ ಪ್ರದರ್ಶಿಸಲಾದ ಶೇ 10ರಷ್ಟು ಗಣಕಯಂತ್ರಗಳು `ಇಂಟೆಲ್~ನ ಹೊಸ `ಆಟಂ ಚಿಪ್~ ಅನ್ನು ಒಳಗೊಂಡಿದ್ದವು ಎನ್ನುವುದು ಮತ್ತೊಂದು ವಿಶೇಷ. ಇಂಟೆಲ್ `ಟ್ಯಾಬ್ಲೆಟ್~ಗಳಿಗಾಗಿಯೇ ಜಗತ್ತಿನ ಮೊಟ್ಟ ಮೊದಲ `ಮೈಕ್ರೊ ಪ್ರೊಸೆಸರ್~ ಅನ್ನು ಅಭಿವೃದ್ಧಿಪಡಿಸಿದೆ.

ಸದ್ಯ ಬ್ರಿಟನ್ ಮೂಲದ `ಎಆರ್ಎಂ~ ಹೋಲ್ಡಿಂಗ್ಸ್ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, `ಇಂಟೆಲ್~ ಇದನ್ನು ಹಿಂದಿಕ್ಕುವ ಸ್ಪರ್ಧೆಯಲ್ಲಿದೆ.

ಇಂಟೆಲ್ನ ಹೊಸ ಮೈಕ್ರೊ ಪ್ರೊಸೆಸರ್ ಸುಧಾರಿತ ವಿಡಿಯೊ ಪ್ಲೇಬ್ಯಾಕ್, ತ್ವರಿತ ಇಂಟರ್ನೆಟ್ ಬ್ರೌಸಿಂಗ್ ಮತ್ತು ಸುದೀರ್ಘ ಅವಧಿಯ ಬ್ಯಾಟರಿ ಬಾಳಿಕೆ ಹೊಂದಿದೆ ಎನ್ನುತ್ತಾರೆ ಕಂಪೆನಿಯ ಏಷ್ಯಾ ಫೆಸಿಫಿಕ್ ವಲಯದ ಪ್ರಧಾನ ವ್ಯವಸ್ಥಾಪಕ ನವೀನ್ ಶಣೈ.
`ಟ್ಯಾಬ್ಲೆಟ್~ಗಳು `ಪಿಸಿ~ ಸ್ಥಾನವನ್ನು ಸಂಪೂರ್ಣವಾಗಿ ಬದಲಾಯಿಸುವುದಿಲ್ಲ, ಏಷ್ಯಾ ಫೆಸಿಪಿಕ್ ಮತ್ತು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ಮಾರುಕಟ್ಟೆಗಳಲ್ಲಿ `ಪಿಸಿ~ಗೆ ಬೇಡಿಕೆ ಇದ್ದೇ ಇದೆ ಎನ್ನುತ್ತಾರೆ ಅವರು.

ತೈವಾನಿಕ ಕೆಲವು ಕಂಪೆನಿಗಳು `ಮೊಬೈಲ್ ಕಂಪ್ಯೂಟಿಂಗ್~ ಕ್ಷೇತ್ರಕ್ಕೂ ಕಾಲಿರಿಸಿವೆ. ಸ್ವರ್ಶ ಸಂವೇದಿ ಪರದೆ ಆಧಾರಿತ ಟ್ಯಾಬ್ಲೆಟ್ ಅಭಿವೃದ್ಧಿಗಾಗಿ `ಏಸರ್~ ಮತ್ತು ಆಸುಸ್ ಟೆಕ್ ಈಗಾಗಲೇ ಯೋಜನೆ ರೂಪಿಸಿವೆ.

ಜಾಗತಿಕ ಟ್ಯಾಬ್ಲೆಟ್ ಮಾರುಕಟ್ಟೆ ಪಾಲು
(ಶೇಕಡಾವಾರು)
ಒಎಸ್ 2010 2011 2015

ಆ್ಯಪಲ್ 84 68 47

ಆಂಡ್ರಾಯ್ಡ 14 19 38

ಮೀ-ಗೊ 0.6 1.1 1.0

ವೆಬ್ಒಎಸ್ 0 4 3

ಒಎನ್ಎಕ್ಸ್ 0 5.6 10

ಇತರೆ 1.3 0.5 0.2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.