ಸೋಮವಾರ, ಜೂನ್ 14, 2021
22 °C
ಚಂದಪದ್ಯ

ಪುಟ್ಟನ ಕೋಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಟ್ಟನ ಕೋಣೆಯ ಒಳಗೂ ಹೊರಗೂ

ಪುಸ್ತಕ ಚೆಲ್ಲಾಪಿಲ್ಲಿದೊಡ್ಡಿಲಿ ಸಣ್ಣಿಲಿ ಪುಟ್ಟಿಲಿ ಮರಿಯಿಲಿ

ಸುತ್ತಾಡುತ್ತಿವೆ ಅಲ್ಲಲ್ಲಿಯಾತಕ್ಕೆಂದರೆ ಪುಸ್ತಕದೊಳಗಡೆ

ತಿಂಡಿ ತಿನಿಸುಗಳ ಅವಶೇಷಚಿಪ್ಸಿನ ಚೂರು ಲಡ್ಡಿನ ಬೂಂದು

ಕಳ್ಳೇಪುರಿಗಳ ಆವೇಶಕೆಲ ಪುಟಗಳು ತೆರೆದಿವೆ

ಹಲ ಪುಟಗಳು ಹರಿದಿವೆಬೋರಲು ಕೆಲವು

ಅಂಗಾತ ಹಲವುಮೂಷಿಕ ಸಭೆಯಲಿ

ದೊಡ್ಡಿಲಿ ಹೇಳಿತು: ಅಹ!ಎಂಥಾ ಊಟ

ತೆಂಕಣಗಾಳಿಯಾಟ!ಸಣ್ಣಿಲಿಯೆಂದಿತು: ಅಗೋಳಿ ಮಂಜಣ

ಅವ ನಮ್ಮವನೇ ಕಣತಿಂದು ಮುಗಿಸಿದೆನು

ಕಂಡ ತಕ್ಷಣ!

ಪುಟ್ಟಿಲಿಯೆಂದಿತು: ಹೆಜ್ಜೆಯ ಹಾಕುತ

ಬನ್ನಿರಿ ಮುಂದಕೆನೋಡಲು ದಸರೆಯ ಹಬ್ಬವನು

ಜಗಿದೇ ಬಿಟ್ಟೆನು ಕಬ್ಬಿಗಿಂತಲು ಸಿಹಿ ಈ ಕಬ್ಬವನು!

ಮರಿಯಿಲಿಯೆಂದಿತು: ಜಗಿಯಿರಿ ತಿನ್ನಿರಿ ಮೆಲ್ಲಿರಿ ಮಂಚಿರಿ

ಮಾಡಿರಿ ಏನು ಬೇಕಾದ್ರೂ – ಆದರೆಬಿಟ್ಬಿಡಿ ನಂಗೆ

ಸೊಗಸಾದ ಮಕ್ಕಳ ಪದ್ಯವನು!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.