ಪುರವಂಕರ ಲಾಭ ರೂ. 50 ಕೋಟಿ
ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ರಿಯಲ್ ಎಸ್ಟೇಟ್ ಕಂಪೆನಿ `ಪುರವಂಕರ ಪ್ರಾಜೆಕ್ಟ್ಸ್~ ರೂ. 50 ಕೋಟಿ ನಿವ್ವಳ ಲಾಭ ಗಳಿಸಿದೆ.
2011-12ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ( ರೂ. 31 ಕೋಟಿ) ಲಾಭದ ಪ್ರಮಾಣ ಶೇ 61ರಷ್ಟು ಏರಿಕೆಯಾಗಿದೆ.
`ಪ್ರತಿಕೂಲ ಮಾರುಕಟ್ಟೆ ಸನ್ನಿವೇಶದಲ್ಲಿಯೂ ಸಂಸ್ಥೆ ಗಮನಾರ್ಹ ಮಾರಾಟ ಪ್ರಗತಿ ದಾಖಲಿಸಿದೆ~ ಎಂದು ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪುರವಂಕರ ಪ್ರಾಜೆಕ್ಟ್ಸ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ ತಿಳಿಸಿದರು.
ಮೊದಲ ತ್ರೈಮಾಸಿಕದಲ್ಲಿ ಸಂಸ್ಥೆಯ ವರಮಾನ ಶೇ 30ರಷ್ಟು ಹೆಚ್ಚಿದ್ದು, ರೂ. 248 ಕೋಟಿಯಷ್ಟಾಗಿದೆ. ಮುಂದಿನ ತ್ರೈಮಾಸಿಕಗಳಲ್ಲಿ ಬೆಂಗಳೂರು, ಚೆನ್ನೈ, ಮಂಗಳೂರು, ಕೊಯಂಬತ್ತೂರಿನಲ್ಲಿ `ಪುರವಂಕರ~ ಮತ್ತು `ಪ್ರಾವಿಡೆಂಡ್~ ಬ್ರಾಂಡ್ನಡಿ ಹೊಸ ಯೋಜನೆಗಳು ಪ್ರಾರಂಭವಾಗಲಿವೆ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.