ಭಾನುವಾರ, ಜೂನ್ 20, 2021
20 °C

ಪೂಜಾರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕಗೆ ಭಾನುವಾರ ನಡೆದ ಆಂತರಿಕ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಮತ್ತೊಬ್ಬ ಸ್ಪರ್ಧಿ ಯು.ಕೆ.ಮೋನು ಅವರನ್ನು ಪರಾಭವಗೊಳಿಸಿದರು.598 ಮಂದಿಗೆ ಮತದಾನದ ಅವಕಾಶ ಇತ್ತು. 547 ಮಂದಿ ಮತ ಚಲಾಯಿ­ಸಿ­ದರು. 7 ಮತಗಳು ತಿರಸ್ಕೃತಗೊಂಡವು. ಜನಾರ್ದನ ಪೂಜಾರಿ ಅವರು 478 ಮತ­­ಗಳನ್ನು ಗಳಿಸಿದ್ದು, ಯು.ಕೆ.ಮೋನು 62 ಮತಗಳನ್ನು ಪಡೆಯಲಷ್ಟೇ ಶಕ್ತರಾದರು.ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ನಾಮ­ಪತ್ರ ಸಲ್ಲಿಸುವ ಮೂಲಕ ಆಂತರಿಕ ಚುನಾವಣೆಯಲ್ಲೇ ತ್ರಿಕೋನ ಸ್ಪರ್ಧೆ ಉಂಟಾ­ಗಿತ್ತು. ಹರ್ಷ ಮೊಯಿಲಿ ಅವರ ನಾಮಪತ್ರ ತಿರಸ್ಕೃತಗೊಂಡು ಜನಾರ್ದನ ಪೂಜಾರಿ ಮತ್ತು ಯು.ಕೆ.ಮೋನು ನಡುವೆ ನೇರ ಸ್ಪರ್ಧೆ ಉಂಟಾಗಿತ್ತು.ನಗರದ ರೊಜಾರಿಯೊ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೆಳಿಗ್ಗೆ 10ರಿಂದ ಚುನಾ­ವಣಾ ಪ್ರಕ್ರಿಯೆ ಆರಂಭ­ಗೊಂಡಿತು. 11 ಗಂಟೆಗೆ ನಡೆದ ಸಭೆಯಲ್ಲಿ ಮತ ಯಾಚಿ­ಸಲು ಇಬ್ಬರೂ ಅಭ್ಯರ್ಥಿಗಳಿಗೆ 7 ನಿಮಿಷ ಅವಕಾಶ ನೀಡಲಾಯಿತು. 11.35ಕ್ಕೆ ಆರಂ­ಭ­­ವಾದ ವಿಧಾನಸಭಾ ಕ್ಷೇತ್ರವಾರು ಮತದಾನ ಪ್ರಕ್ರಿಯೆ 12.30ರ ಸುಮಾ­ರಿಗೆ ಮುಕ್ತಾಯವಾಯಿತು. ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಹೊರಬಿದ್ದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.