ಶನಿವಾರ, ಮೇ 8, 2021
18 °C
ಸಂಕ್ಷಿಪ್ತ ಸುದ್ದಿ

ಪೂನಂ ಪಾಂಡೆಗೆ ಸಮನ್ಸ್ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ರೂಪದರ್ಶಿ ಪೂನಂ ಪಾಂಡೆ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅ.31ರಂದು ವಿಚಾರಣೆಗೆ ಹಾಜರಾಗುವಂತೆ ನಗರದ ಆರನೇ ಎಸಿಎಂಎಂ ನ್ಯಾಯಾಲಯವು ಪೂನಂಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.`2011ರ ವಿಶ್ವಕಪ್ ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ತಂಡದ ವಿರುದ್ಧ ಜಯಗಳಿಸಿದ್ದ ಸಂದರ್ಭದಲ್ಲಿ ಪೂನಂ ಪಾಂಡೆ ಅವರು ನಗ್ನರಾಗಿ ವಿಷ್ಣು ದೇವರ ಭಾವಚಿತ್ರ ಹಿಡಿದು ಫೋಟೊ ತೆಗೆಸಿಕೊಂಡಿದ್ದರು. ಆ ಫೋಟೊಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಮತ್ತು ದೇಶದ ಸ್ತ್ರೀ ಸಮುದಾಯಕ್ಕೆ ಅವಮಾನವಾಗಿದೆ' ಎಂದು ಆರೋಪಿಸಿ ವಕೀಲ ಎಸ್.ಉಮೇಶ್ ಎಂಬುವರು ಪೂನಂ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಹಿಂದೆ ಎರಡು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಪೂನಂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕಾರಣಕ್ಕಾಗಿ ನ್ಯಾಯಾಲಯವು ಅ.31ರಂದು ಅವರನ್ನು ವಿಚಾರಣೆಗೆ ಖುದ್ದು ಹಾಜರುಪಡಿಸುವಂತೆ ಸೂಚಿಸಿ ಮುಂಬೈ ನಗರ ಪೊಲೀಸ್ ಕಮಿಷನರ್‌ಗೆ ಆದೇಶಿಸಿದೆ. ಅದೇ ರೀತಿ ಪೂನಂ ಅವರಿಗೆ ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ಸಮನ್ಸ್‌ನಲ್ಲಿ ತಿಳಿಸಿದೆ.ವಧು-ವರರ ಸಮಾವೇಶ

ಲಿಂಗಾಯತ ಕಲ್ಯಾಣ ಟ್ರಸ್ಟ್ ವತಿಯಿಂದ ಜೂನ್ 9ರಂದು ಮಧ್ಯಾಹ್ನ 2ಕ್ಕೆ ವೈದ್ಯರು, ಎಂಜಿನಿಯರ್‌ಗಳು, ಪದವೀಧರು, ಆನಿವಾಸಿ ಭಾರತೀಯ ವೀರಶೈವ ವಧು-ವರರ ಮುಖಾಮುಖಿ ಸಮಾವೇಶವನ್ನು ಆಯೋಜಿಸಲಾಗಿದೆ.

ಆಸಕ್ತರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ವಿಳಾಸ: ಲಿಂಗಾಯತ ಕಲ್ಯಾಣ ಟ್ರಸ್ಟ್, ನಂ.14, ಜಯದೇವ ವಾಣಿಜ್ಯ ಸಂಕೀರ್ಣ, ಐದನೇ ಮುಖ್ಯರಸ್ತೆ, ಗಾಂಧಿನಗರ. ಹೆಚ್ಚಿನ ಮಾಹಿತಿಗೆ : 2226 9237.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.