ಪೂರ್ಣಿಮ

7

ಪೂರ್ಣಿಮ

Published:
Updated:

ಎಲ್ಲಿದ್ದಳು ಇಲ್ಲೆ ತನಕ

ನನ್ನ ಪುಟ್ಟ ಕಿನ್ನರಿ?

ಬಂದಳೇಕೆ ಈಗ ನನ್ನ

ಮಡಿಲಿಗೆ ಈ ಕುವರಿ?

 

ಮಗಳಿಲ್ಲದ ನನ್ನ ಕೊರತೆ

ಇವಳಿಗೆ ಅರಿವಾಯಿತೆ?

ಆ ಕೊರತೆಯ ನೀಗಲೆಂದೇ

ಬಂದಳೆ ಈ ದೇವತೆ?

 

ಹೆಸರಿಗೆ ತಕ್ಕಂತೆ ಇವಳು

ತುಂಬು ಚಂದಿರ:

ಬೆಳದಿಂಗಳ ತಂಪು ಇವಳು

ಇರುವ ಪರಿಸರ.

 

ಮಾತಿನಮಲ್ಲೆ ಇವಳು

ಚೈತನ್ಯದ ಚಿಲುಮೆ.

ಅಮೃತ ಕಲಶ ಇವಳ ಹೃದಯ,

ಧಾರೆ ಧಾರೆ ಒಲುಮೆ.

 

ಏನೇ ಸುಖವಿದ್ದರೇನು

ಆ ಅಮೆರಿಕದಲ್ಲಿ?

ಮರುಗುತ್ತಿತ್ತು ಇವಳ ಮನಸು

ನೆನೆದು ಕರುಳಬಳ್ಳಿ.

 

ಪರದೇಶದ ಹಂಗು ತೊರೆದು

ಬಂದಿದ್ದಾಳೆ ತೌರಿಗೆ:

ಮತ್ತೆ ಸೀರೆಯುಟ್ಟು, ಮುಡಿದು

ತುರುಬಿನಲ್ಲಿ ಮಲ್ಲಿಗೆ.

 

ತಡವಾದರೂ ಏನು, ಮಗಳೇ,

ಬಂದಿರು ಬಿಡುವಾಗಿ:

ನಾವೆಲ್ಲರೂ ಮುಳುಗೇಳಲು

ಪ್ರೀತಿಯ ಮಡುವಾಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry