ಭಾನುವಾರ, ಏಪ್ರಿಲ್ 18, 2021
23 °C

ಪೈಗಂಬರ್ ತತ್ವಾದರ್ಶ ಪಾಲಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಗುಂದ: ಮಾನವೀಯ ಮೌಲ್ಯ, ಮಾನವತೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಪಂಚಕ್ಕೆ ಶಾಂತಿ ಸಂದೇಶವನ್ನ ಸಾರಿದ ಮಹಮ್ಮದ್ ಪೈಗಂಬರರ ತತ್ವಾದರ್ಶಗಳು ಸರ್ವಕಾಲಿಕವಾಗಿವೆ. ಪ್ರತಿಯೊಬ್ಬರೂ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕಗೊಳಿಸಬೇಕು ಎಂದು ವಿಜಾಪುರದ ಮೌಲಾನಾ ಸೈಯ್ಯದ್ ಮಹ್ಮದ್ ತನ್ವೀರ್ ಹಾಷೀಮಿ ಸಾಹೇಬ್ ಕರೆ ನೀಡಿದರು.ಇತ್ತೀಚೆಗೆ ಸ್ಥಳೀಯ ಅಂಜುಮನ್-ಎ- ಇಸ್ಲಾಂ ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಮೊಹಮ್ಮದ್ ಪೈಗಂಬರ್ ಅವರ ಕುರಿತು ವಿಶೇಷ ಉಪನ್ಯಾಸ (ವಾಜ್ ಬಯಾನ್) ಕಾರ್ಯಕ್ರಮದಲ್ಲಿ ಮಾತನಾಡಿದರು.ಮೌಲ್ವಿಗಳಾದ ವಿಜಾಪುರದ ಅತೀಫ್ ಅಹ್ಮದ್ ಬರಕಾತಿ, ಹಾನಗಲ್‌ದ ಮಹ್ಮದ್ ಖಲೀಲ್ ಖಾದ್ರಿ, ಶಿಗ್ಗಾಂವ್‌ದ ಮಕ್ಬೂಲ್ ಅಹ್ಮದ್ ಅಶ್ರಫಿ ಖಾದ್ರಿ, ಬಾಗಲಕೋಟೆಯ ಖಾಜಿ ಸೈಯ್ಯದ್ ಬಸೀರ್ ಅಹ್ಮದ್‌ಶಾ, ಶಿರಹಟ್ಟಿಯ ವಜಹೂಲ್ ಕಮರ್‌ಸಾಹೇಬ್ ನೂರಿ ಹಾಗೂ ಮುಂಬಯಿ  ರಿಯಾಜುದ್ದಿನ್ ಸಾಹೇಬ, ಪಟ್ಟಣದ ಖತೀಬ್ ವ ಇಮಾಮ್ ಅಬ್ದುಲ್‌ಗನಿ ಖಾಜಿ, ಬಾಬುಲಾಲ್ ಸಿದ್ದಿ ಮತ್ತಿತರರು ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡು  ಪೈಗಂಬರ್ ಕುರಿತು ಮಾತನಾಡಿದರು.ಧಾರ್ಮಿಕ ಗುರುಗಳು, ಮೌಲ್ವಿಗಳ ಸಮ್ಮುಖದಲ್ಲಿ ಇಲ್ಲಿಯ ಸೈದರ್ ಓಣಿಯಲ್ಲಿ ನಿರ್ಮಿಸಿದ ನೂತನ ಮಸೀದಿ ಕಟ್ಟಡದ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ಮಸೀದಿಯ ಇಮಾಮರು ಹಾಗೂ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಆರ್.ಎಚ್. ದಲೀಲ್, ಇಮಾಮ್‌ಹುಸೇನಸಾಬ್ ಶೇಖ, ಹಾಸೀಮ್‌ಅಲಿ ಖಲೀಫನವರ, ಐ.ಎಚ್. ಮುಶೇಖಾನ, ಬುಡ್ಡೆಸಾಬ್ ಖವಾಸ್, ಇಮಾಮ್ ಜಾಫರ್, ಲಾಲ್‌ಶಾ ಮಕಾನದಾರ, ಮಹಬೂಬ್ ಅಲಿ ಶೇಖ, ಎ.ಡಿ. ಲಾಡಸಾಬನವರ, ಜಹಾಂಗೀರ ಭದ್ರಾಪೂರ, ಯುನೂಸ್ ಮುಶೇಖಾನ, ಮಹಮ್ಮದ್ ಖುರೇಶಿ, ಮನಿಯಾರ ಶಿರಹಟ್ಟಿ ಹಾಗೂ ಮಹ್ಮದ್ ರಫೀಕ್ ಸಿದ್ಧಿಕ್ ಮತ್ತಿತರರು ಹಾಜರಿದ್ದರು. ಆರಂಭದಲ್ಲಿ ಮೌಲ್ವಿಗಳಿಂದ ಕುರಾನ್ ಪಠಣ ಹಾಗೂ ಮಹಮ್ಮದ್ ರಫೀಕ್ ಖತೀಬ್ ಅವರಿಂದ ನಾಥ್ ಷರೀಫ್ ಪಠಣ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.