ಬೆಂಗಳೂರು: ಕಳ್ಳನೊಬ್ಬನಿಂದ ಖರೀದಿಸಿದ್ದ ಚಿನ್ನಾಭರಣವನ್ನು ಜಪ್ತಿ ಮಾಡಲು ಮುಂದಾದ ಪೊಲೀಸರೊಂದಿಗೆ ಚಿನ್ನಾಭರಣ ವ್ಯಾಪಾರಿಗಳು ವಾಗ್ವಾದ ನಡೆಸಿದ ಘಟನೆ ಕಮರ್ಷಿಯಲ್ಸ್ಟ್ರೀಟ್ನ ಓಪಿಎಚ್ ರಸ್ತೆಯಲ್ಲಿ ಗುರುವಾರ ನಡೆದಿದೆ.ಕಳವುಪ್ರಕರಣದ ಆರೋಪಿ ಯೊಬ್ಬನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದರು. ಕಳವು ಮಾಡಿದ ಆಭರಣಗಳನ್ನು ಓಪಿಎಚ್ ರಸ್ತೆಯಲ್ಲಿರುವ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾಗಿ ಆತ ಮಾಹಿತಿ ನೀಡಿದ್ದ.

ಈ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಅಂಗಡಿಗಳ ಬಾಗಿಲು ಮುಚ್ಚಿದ ವ್ಯಾಪಾರಿಗಳು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಆ ನಂತರ ಮಧ್ಯಪ್ರವೇಶಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದರು. ಕಳ್ಳನಿಂದ ಆಭರಣ ಖರೀದಿಸಿದ್ದ ವ್ಯಕ್ತಿಯ ಹೆಸರು ಅವರು ಬಹಿರಂಗಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.