ಭುವನೇಶ್ವರ (ಪಿಟಿಐ): ಉದ್ದೇಶಿತ ಪೋಸ್ಕೊ ಉಕ್ಕು ಕಾರ್ಖಾನೆ ಸ್ಥಾಪಿಸುವ ವಿಷಯದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಇಲ್ಲಿ ಹೇಳಿದ್ದಾರೆ.

ದಕ್ಷಿಣ ಕೊರಿಯಾ ಸಹಭಾಗಿತ್ವದ 52 ಸಾವಿರ ಕೋಟಿ ವೆಚ್ಚದ ಈ ಯೋಜನೆಯ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್ಜಿಟಿ) ಅಮಾನತಿನಲ್ಲಿ ಇಟ್ಟಿದೆ. ಇದರ ಹಿಂದೆ `ಸಂಚು~ ಇದೆ ಎಂದು ಒಡಿಶಾದ ಬಿಜೆಡಿ ನಾಯಕರು ಆಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಈ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಎರಡು ದಿನಗಳ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿರುವ ಸಚಿವ ಆನಂದ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡಿ, `ಈ ವಿಚಾರದಲ್ಲಿ ಹೆಚ್ಚಿಗೆ ಏನೂ ಹೇಳಲಾರೆ. ಇದು ಪರಿಸರ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯ, ಮೇಲಾಗಿ ನ್ಯಾಯ ಮಂಡಳಿಯಲ್ಲಿ ವಿಚಾರಣೆ ಬಾಕಿ ಇದೆ~ ಎಂದು ಅವರು ಹೇಳಿದರು.

ಪೋಸ್ಕೊ ಯೋಜನೆಯ ಅನುಮತಿಯನ್ನು ಎನ್ಜಿಟಿ ಮಾರ್ಚ್ 30ರಂದು ಅಮಾನತಿನಲ್ಲಿ ಇರಿಸಿದೆ. ಈ ವಿಷಯವು ಒಡಿಶಾ ವಿಧಾನಸಭೆಯಲ್ಲಿ ಶನಿವಾರ ಚರ್ಚೆಗೆ ಬಂದಿತ್ತು. ಆಡಳಿತರಾಢ ಬಿಜೆಡಿ ಸದಸ್ಯರು ಅನುಮತಿ ಅಮಾನತು ಮಾಡಿರುವ ಹಿಂದೆ `ಸಂಚು~ ಇದೆ ಎಂದು ಆರೋಪಿಸಿ ಈ ಕುರಿತು ಇರುವ ಸಂಶಯವನ್ನು ನಿವಾರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು.

ಜಗತ್ಸಿಂಗ್ಪುರ ಜಿಲ್ಲೆಯ ಪಾರಾದೀಪ್ ಬಳಿ ಈ ಬೃಹತ್ ಯೋಜನೆಗೆ ಸ್ಥಳ ಗುರುತಿಸಲಾಗಿದೆ. ಆದರೆ ಈ ಯೋಜನೆಯನ್ನು ಸ್ಥಳೀಯರು ವಿರೋಧಿಸುತ್ತಿದ್ದಾರೆ.

ಇತ್ತೀಚೆಗೆ ದಕ್ಷಿಣ ಕೊರಿಯಾದ ಸೋಲ್ನಲ್ಲಿ ನಡೆದ ಪರಮಾಣು ಭದ್ರತೆ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ಪೋಸ್ಕೊ ಯೋಜನೆ ವಿಳಂಬದ ಬಗ್ಗೆ ಕಳವಳ ಬೇಡ, ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ಅವರಿಗೆ ಭರವಸೆಯನ್ನು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.