ದೀಪಾವಳಿ ಬಂತೆಂದರೆ ಸಾಕು, ಎಲ್ಲೆಲ್ಲೂ ಪಟಾಕಿಯದ್ದೇ ಸದ್ದು. ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಅಪೂರ್ಣವೆಂದು ಬಹುತೇಕರು ಭಾವಿಸುತ್ತಾರೆ. ಆದರೆ, ದೀಪಾವಳಿಯ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ಹಾಗೂ ಸರ್ಕಾರ ಹಸಿರು ಪಟಾಕಿಗಳನ್ನು ಬಳಸಿ ಎಂದು ಕರೆ ನೀಡುತ್ತಾರೆ. ಜನರು ಕೂಡ ಹಸಿರು ಪಟಾಕಿ ಬಳಸುವ ಮೂಲಕ ಪರಿಸರ ಹಾನಿ ತಡೆಯಬೇಕೆಂದು ಮಾರುಕಟ್ಟೆಗೆ ಹೋಗಿ ಹಸಿರು ಪಟಾಕಿ ತರಲು ಮುಂದಾಗುತ್ತಾರೆ. ಆದರೆ, ಅನೇಕ ಜನರಿಗೆ ಈ ಹಸಿರು ಪಟಾಕಿ ಹಾಗೂ ಸಾಮಾನ್ಯ ಹಾನಿಕಾರ ಪಟಾಕಿ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಆ ರೀತಿಯ ಗೊಂದಲ ಇರುವವರು ಈ ಸುದ್ದಿಯನ್ನು ಕೊನೆಯವರೆಗೂ ಓದಿ. ನಿಮಗೇ ವ್ಯತ್ಯಾಸ ತಿಳಿಯುತ್ತದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಹಾಗೂ ಎನ್ಇಇಆರ್ಐನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದಿಲ್ಲ.

ಹಸಿರು ಪಟಾಕಿ ಎಂದರೆ, ಅದರ ಹೊರಭಾಗಕ್ಕೆ ಸುತ್ತಿದ ಹಾಳೆ ಹಸಿರಾಗಿರುತ್ತದೆ ಎಂದು ಅರ್ಥವಲ್ಲ. ಸಿಡಿದಾಗ ಅತಿಯಾದ ಹೊಗೆ, ಶಬ್ದ ಬಾರದ ಪಟಾಕಿ, ವಾತಾವರಣದ ಮಾಲಿನ್ಯ ತಡೆಯುವ ಪಟಾಕಿಯನ್ನು ಪರಿಸರಸ್ನೇಹಿ ಹಸಿರು ಪಟಾಕಿ ಎನ್ನುತ್ತೇವೆ. ಇವು ಸಿಡಿದಾಗ ಹೊಗೆಯ ಬದಲಿಗೆ ನೀರಿನ ಆವಿ ಚಿಮ್ಮಿಸುತ್ತವೆ. ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಪ್ರಖರ ಬೆಳಕು ಸೂಸುವ, ಕಡಿಮೆ ಗಂಧಕವುಳ್ಳ ಇವು ದೂಳನ್ನು ಸಂಪೂರ್ಣ ನಿಯಂತ್ರಿಸಿ ಶೇ 40ರಷ್ಟು ಮಾಲಿನ್ಯವನ್ನು ಕಡಿಮೆ ಮಾಡುತ್ತವೆ.

ಹಸಿರು ಪಟಾಕಿಗಳಲ್ಲಿ ನೀರಿನಲ್ಲಿ ಕರಗಬಲ್ಲ ಥರ್ಮೈಟ್ ಮತ್ತು ಅಲ್ಯೂಮಿನಿಯಂ ಹುಡಿಗಳಿರುತ್ತವೆ. ಮಾಮೂಲಿ ಪಟಾಕಿಗಳಲ್ಲಿರುವ ಬೇರಿಯಂ ನೈಟ್ರೇಟ್, ಚಾರ್ಕೋಲ್, ಲೀಥಿಯಂ, ಆರ್ಸೆನಿಕ್ ಮತ್ತು ಸತುವಿನಂಥ ಭಾರದ, ವಿಷಕಾರಿ ಲೋಹಗಳ ಬಳಕೆ ಇರುವುದಿಲ್ಲ. ಜಿಯೋಲೈಟ್ ಸಂಯುಕ್ತ ಬಳಸುವುದರಿಂದ ಏಳುವ ಅಲ್ಪಸ್ವಲ್ಪ ಹೊಗೆಯೂ ನಿಯಂತ್ರಣದಲ್ಲಿ ಇರುತ್ತದೆ.

ಹಸಿರು ಪಟಾಕಿ ಖರೀದಿಸುವುದು ಎಲ್ಲಿ?

ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಪರವಾನಿಗೆ ಅತ್ಯಗತ್ಯ. ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿಗಳನ್ನು ಖರೀದಿಸಬಾರದು. ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು.

ಹಸಿರು ಪಟಾಕಿ ಗುರುತಿಸುವುದು ಹೇಗೆ?

ಹಸಿರು ಪಟಾಕಿಗಳು ಶೆಲ್ ಗಾತ್ರಕ್ಕಿಂತಲೂ ಕಡಿಮೆ ಇರುತ್ತವೆ. ಪಟಾಕಿ ಪ್ಯಾಕ್ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಇರುತ್ತದೆ. ಇದರ ಮೂಲಕ ಗುರುತಿಸಬಹುದು. ಅಲ್ಲದೆ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಇರಲಿದೆ.

ದೆಹಲಿಯಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ದೀಪಾವಳಿ ಹಬ್ಬದ ವೇಳೆ ದೆಹಲಿ-ಎನ್ಸಿಆರ್ ವ್ಯಾಪ್ತಿಯಲ್ಲಿ ಹಸಿರು ಪಟಾಕಿ ಮಾರಾಟ ಮಾಡಲು ಮತ್ತು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಬುಧವಾರ (ಅಕ್ಟೋಬರ್ 15) ಅನುಮತಿ ನೀಡಿದೆ. ಹಬ್ಬಗಳ ಸಮಯದಲ್ಲಿ ಹಸಿರು ಪಟಾಕಿ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಸುಪ್ರೀಂ ಕೊರ್ಟ್ಗೆ ಮನವಿ ಮಾಡಿದ್ದವು.

ಸಿಜೆಐ ಬಿ.ಆರ್. ಗವಾಯಿ ಹಾಗೂ ನ್ಯಾ. ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಹಸಿರು ಪಟಾಕಿ ಮೇಲಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.