ಶುಕ್ರವಾರ, ಜನವರಿ 24, 2020
27 °C

ಪೋಸ್ಟಲ್‌ ಅಥ್ಲೆಟಿಕ್ಸ್‌: ಪವಿತ್ರಾಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಪವಿತ್ರಾ ಇಲ್ಲಿ ಬುಧವಾರ ಆರಂಭವಾದ 27ನೇ ಅಖಿಲ ಭಾರತ ಪೋಸ್ಟಲ್‌ ಅಥ್ಲೆಟಿಕ್‌ ಕ್ರೀಡಾಕೂಟದ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಬಂಗಾರದ ಸಾಮರ್ಥ್ಯ ತೋರಿದರು.ಪವಿತ್ರಾ 4.80ಮೀ. ಜಿಗಿದು ಈ ಸಾಧನೆ ಮಾಡಿದರು. ರಾಜಸ್ತಾನದ ಸ್ನೇಹಾ ಬಿನ್‌ (4.29ಮೀ.) ಬೆಳ್ಳಿ ತಮ್ಮ ದಾಗಿಸಿಕೊಂಡರು.  ಪವಿತ್ರಾ 400ಮೀ. ಹರ್ಡಲ್ಸ್‌ನಲ್ಲಿ  ಬೆಳ್ಳಿ ಗೆದ್ದುಕೊಂಡರು.ಆತಿಥೇಯ ರಾಜ್ಯದ ಇಫ್ತಿಕಾರ್‌ ಅಹ್ಮದ್‌ 1500ಮೀ. ಓಟದ ಸ್ಪರ್ಧೆಯಲ್ಲಿ (ಕಾಲ: 4:20.2ಸೆ.) ಕಂಚು ಗೆದ್ದರು.200ಮೀ. ಓಟದ ಸ್ಪರ್ಧೆಯಲ್ಲಿ ಮಿಂಚಿದ ಪವಿತ್ರಾ ನಿಗದಿತ ಗುರಿಯನ್ನು 27.9ಸೆಕೆಂಡ್‌ಗಳಲ್ಲಿ ಮುಟ್ಟಿ ಮೊದಲ ಸ್ಥಾನ ಪಡೆದರು.ಆಂಧ್ರಪ್ರದೇಶದ ಪಲ್ಲವಿ (ಕಾಲ: 28.6) ಎರಡನೇ ಸ್ಥಾನ ಗಳಿಸಿದರು. ಶಾಟ್‌ಪಟ್‌ನಲ್ಲಿ ರಾಜ್ಯದ ಎಚ್‌.ಎಂ. ಸುನಂದಾ ಕಂಚು ಜಯಿಸಿದರು.

ಪ್ರತಿಕ್ರಿಯಿಸಿ (+)