ಶನಿವಾರ, ಜೂನ್ 19, 2021
28 °C
6 ತಿಂಗಳ ಗಡುವು ಕೇಳಿದ ಸರ್ಕಾರ

ಪೌರ ಕಾರ್ಮಿಕರ ಕಾಯಂ: ಪರಿಶೀಲನೆ ಭರವಸೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ­ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆ­ಯನ್ನು ಕಾಯಂಗೊಳಿಸುವ ಕೋರಿಕೆ­ಯನ್ನು ಆರು ತಿಂಗಳಲ್ಲಿ ಪರಿಶೀಲಿಸು­ವು­ದಾಗಿ ಸರ್ಕಾರ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.‘ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆ­ಯನ್ನು ಕಾಯಂ ಮಾಡಬೇಕು’ ಎಂದು ಕೋರಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ಮತ್ತು ಪುರ­ಸಭೆಗಳ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ 2006­ರಲ್ಲಿ ಅರ್ಜಿ ಸಲ್ಲಿಸಿ­ದ್ದರು. ಇದರ ವಿಚಾರಣೆ­ಯನ್ನು ನ್ಯಾಯ­ಮೂರ್ತಿ ಕೆ.ಎಲ್‌. ಮಂಜು­ನಾಥ್‌ ಮತ್ತು ನ್ಯಾಯ­ಮೂರ್ತಿ ರವಿ ಮಳಿ­ಮಠ ಅವರಿದ್ದ ವಿಭಾಗೀಯ ಪೀಠ ನಡೆಸಿತ್ತು.ಕೋರಿಕೆ ಕುರಿತು ನಿಲುವು ತಿಳಿಸು­ವಂತೆ ವಿಭಾಗೀಯ ಪೀಠ ಈ ಹಿಂದೆ ಸರ್ಕಾರಕ್ಕೆ ಸೂಚಿಸಿತ್ತು. ಸರ್ಕಾ­ರದ ಹೇಳಿಕೆ ದಾಖಲು ಮಾಡಿಕೊಂಡ ಪೀಠ, ಅರ್ಜಿ ಇತ್ಯರ್ಥಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.