ಸೋಮವಾರ, ಜೂನ್ 21, 2021
27 °C

ಪೌಷ್ಟಿಕ ಆಹಾರ ಸ್ಥಗಿತ ಖಂಡನೀಯ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಅಂಗನವಾಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಪೂರೈಕೆ ಸ್ಥಗಿತಗೊಳಿಸಿ ರುವ ಸರ್ಕಾರ ಜನರ ಅಭ್ಯುದಯವನ್ನೇ ಮರೆತಿದೆ. ಅಧಿಕಾರಕ್ಕಾಗಿ ಗುದ್ದಾಡುತ್ತಿ ರುವ ಸಚಿವರು, ಶಾಸಕರು ರಾಜ್ಯದ ಬರಪೀಡಿತ ಪ್ರದೇಶದ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಶಾಸಕ ಬಿ.ಶ್ರೀರಾಮುಲು ಆರೋಪಿಸಿದರು.ಸ್ಥಳೀಯ ಗೌತಮ ನಗರದಲ್ಲಿ ಬುಧವಾರ ನೂತನ ಅಂಗನವಾಡಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದ ಅನೇಕ ಕಡೆ ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಚಿಕ್ಕಮಕ್ಕಳ ನೆರವಿಗೆ ಬರಬೇಕಿರುವ ಸರ್ಕಾರ ಅಂಗನವಾಡಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತಿತರ ಪೌಷ್ಟಿಕ ಆಹಾರ ನೀಡಲು ಹಣದ ಕೊರತೆ ಇದೆ ಎಂದು ತಿಳಿಸಿರುವುದು ಖಂಡನೀಯ. ಕೇವಲ ಆಂತರಿಕ ಕಲಹ, ಖುರ್ಚಿಗಾಗಿ ಕಾದಾಟ ನಡೆಸುತ್ತಿರುವ ಸಚಿವರು, ಶಾಸಕರು ರೆಸಾರ್ಟ್ ರಾಜಕೀಯ ಮಾಡುತ್ತಿದ್ದು, ಮುಖ್ಯಮಂತ್ರಿ ಸಹ ಅಧಿಕಾರ ಉಳಿಸಿಕೊಳ್ಳಲು ಹೆಣಗುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಮುಖ್ಯಮಂತ್ರಿಯಾಗಲೀ, ಸಚಿವ ರಾಗಲೀ ಸರ್ಕಾರ ನಡೆಸುತ್ತಿಲ್ಲ. ಬದಲಿಗೆ, ಭ್ರಷ್ಟ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಬರಗಾಲ ಸ್ಥಿತಿ  ತಲೆದೋರಿದ್ದು, ಜಿಲ್ಲಾಧಿ ಕಾರಿಯವರು ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಅವಲೋಕಿಸದೆ ಅಭಿ ವೃದ್ಧಿ ಕಾಮಗಾರಿ ಗಳೂ ನಡೆಯದಂತೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿದರು.ಜಿಲ್ಲೆಯಲ್ಲಿ ಬಡಜನತೆ ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದು, ಸರ್ಕಾರ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಪೂರೈಸಲೂ ಕ್ರಮ ಕೈಗೊಂಡಿಲ್ಲ. ಅಧಿಕಾಶಗಳ ದರ್ಬಾರಿನಲ್ಲಿ ಜನತೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ ಎಂದು ಅವರು ಕಿಡಿಕಾರಿದರು.ವಿಧಾನಸಭೆಯ ಅಧಿವೇಶನವನ್ನು ವರದಿ ಮಾಡಲು ಖಾಸಗಿ ಸುದ್ದಿ ವಾಹಿನಿಗಳಿಗೆ ಅವಕಾಶ ನಿರಾಕರಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಲಿದೆ ಎಂಬುದು ನಿಜಕ್ಕೂ ಖೇದದ ವಿಷಯ. ಪತ್ರಿಕಾ ರಂಗದ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಕಸಿಯುವ ಇಂತಹ ಪ್ರಜಾ ಪ್ರಭುತ್ವ ವಿರೋಧಿ ಚಟುವಟಿಕೆಯನ್ನು ಪ್ರತಿಯೊಬ್ಬರೂ ವಿರೋಧಿಸುವ ಅಗತ್ಯವಿದೆ ಎಂದು ಅವರು ಕೋರಿದರು.ಸ್ವತಂತ್ರ ಪಕ್ಷ: ಸ್ವತಂತ್ರ ಪಕ್ಷ ಸ್ಥಾಪನೆಗಾಗಿ ಈಗಾಗಲೇ ಚುನಾವಣಾ ಆಯೋಗಕ್ಕೆ  ಅರ್ಜಿ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ಅನುಮತಿ ದೊರೆಯುವ ನಿರೀಕ್ಷೆ ಇದೆ. `ಬಡವ- ಶ್ರಮಿಕ- ರೈತರ ಪಕ್ಷ~ ಹಾಗೂ `ಸ್ವಾಭಿಮಾನಿ ಕರ್ನಾಟಕ ಪಕ್ಷ~ ಎಂಬ ಶೀರ್ಷಿಕೆಯಲ್ಲಿ ಒಂದನ್ನು ನೀಡುವಂತೆ ಕೋರಲಾಗಿದೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಕೆಲವೇ ದಿನಗಳಲ್ಲಿ ಪಕ್ಷ ಸಂಘಟಿಸಲಾಗುವುದು ಎಂದು ಅವರು ಹೇಳಿದರು.ರೆಡ್ಡಿ ಸಹೋದರರಲ್ಲಿ ಒಬ್ಬರಾದ ಜಿ.ಕರುಣಾಕರರೆಡ್ಡಿ ಬಿಜೆಪಿಯಲ್ಲೇ ಇದ್ದಾರೆ. ಅವರನ್ನು ಪಕ್ಷಕ್ಕೆ ಸೇರುವಂತೆ ಕೋರಿಲ್ಲ ಎಂದು ಸ್ಪಷ್ಟಪಡಿಸಿದರು.ಬುಡಾ ಮಾಜಿ ಅಧ್ಯಕ್ಷ ಎಸ್. ಗುರುಲಿಂಗನಗೌಡ, ಪಾಲಿಕೆ ಸದಸ್ಯ ಗೋವಿಂದರಾಜುಲು ಉಪಸ್ಥಿತರಿದ್ದರು.

ಮನರಂಜಿಸಿದ ಬಯಲಾಟಬಳ್ಳಾರಿ: ನಗರದ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕನಕ ದುರ್ಗಮ್ಮ ಆಡಳಿತ ಮಂಡಳಿ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಶರಣಪ್ಪ ವಡಿಗೇರಿ ಅವರು ಮೂಲ ಜಾನಪದ ತತ್ವಪದ ಗಳು ಹಾಗೂ ಜಾನಪದ ಗೀತೆಗಳನ್ನು ಹಾಡಿ ಮನರಂಜಿಸಿದರು.

ನಂತರ ಕುರುಗೋಡಿನ ನಾರಾಯಣಪ್ಪ ಮತ್ತು ತಂಡದವರು `ಸುಂದೋಪ ಸುಂದ~ ಬಯಲಾಟವನ್ನು ಹಾಗೂ ಬಳ್ಳಾರಿಯ ಕೆ. ಸುಂಕಣ್ಣ ಮತ್ತು ತಂಡದವರು `ಮೋಹಿನಿ ಭಸ್ಮಾಸುರ~ ಬಯಲಾಟವನ್ನು ಪ್ರದರ್ಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.