ಸೋಮವಾರ, ಜನವರಿ 20, 2020
29 °C

ಪ್ಯಾರಾಲಿಂಪಿಕ್ಸ್‌ಗೆ ಗಿರೀಶ್ ಅರ್ಹತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ        ಎಚ್.ಎನ್.ಗಿರೀಶ್ ಲಂಡನ್ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಷಯವನ್ನು ಭಾರತ ಪ್ಯಾರಾಲಿಂಪಿಕ್ ಸಮಿತಿ ತಿಳಿಸಿದೆ.ಕುವೈಟ್‌ನಲ್ಲಿ ನಡೆದ ಕುವೈಟ್ ಅಂತರರಾಷ್ಟ್ರೀಯ ಅಂಗವಿಕಲರ ಓಪನ್ ಅಥ್ಲೆಟಿಕ್ ಕೂಟದಲ್ಲಿ ಗಿರೀಶ್ ಹೈಜಂಪ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 1.65 ಮೀ. ಎತ್ತರ ಜಿಗಿದ ಅವರು ಪ್ಯಾರಾಲಿಂಪಿಕ್ಸ್‌ನ `ಎ~ ಅರ್ಹತಾ ಮಟ್ಟವನ್ನು ಮುಟ್ಟುವಂಥ ಪ್ರದರ್ಶನ ತೋರಿದರು. ಪ್ಯಾರಾಲಿಂಪಿಕ್ಸ್ ಆಗಸ್ಟ್ 29ರಂದು ಶುರುವಾಗಲಿದೆ.

ಪ್ರತಿಕ್ರಿಯಿಸಿ (+)