ಶನಿವಾರ, ಮೇ 15, 2021
24 °C
ಅಭಿವೃದ್ಧಿ ಕಾಮಗಾರಿ, ಯೋಜನೆಗಳ ಅನುಷ್ಠಾನ ಕುರಿತು ಚರ್ಚೆ

ಪ್ರಗತಿಪರ ಚಿಂತಕರೊಂದಿಗೆ ಶಾಸಕರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುನಗುಂದ: ಶಾಸಕ ವಿಜಯಾನಂದ ಕಾಶಪ್ಪನವರ ಇಲ್ಲಿನ ಪ್ರಗತಿಪರ ಚಿಂತಕರೊಂದಿಗೆ ಶನಿವಾರ ಸಭೆ ನಡೆಸಿ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿದರು.ಪ್ರಾದೇಶಿಕ ಅಸಮತೋಲನ ನಿವಾರಣಾ ಕುರಿತ ಡಾ. ಡಿ. ಎಂ.ನಂಜುಂಡಪ್ಪ ವರದಿ ಅನ್ವಯ ತಾಲ್ಲೂಕಿನಲ್ಲಿ ಆಗಬೇಕಾದ ಕಾಮಗಾರಿಗಳ ಹೆಚ್ಚು ಲಕ್ಷ್ಯ ವಹಿಸುವುದು. ಆಲಮಟ್ಟಿ ಕುಡಿಯುವ ನೀರಿನ ಯೋಜನೆ ಶೀಘ್ರ ಮುಗಿಸಿ ನಿರಂತರ ನೀರು ಕೊಡುವುದು, ಸುಕ್ಷೇತ್ರ ಕೂಡಲಸಂಗಮ- ಅಡಿಹಾಳ ಸೇತುವೆ ನಿರ್ಮಾಣ, ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಆಯುಕ್ತರ ನೇಮಕ, ಹುನಗುಂದದಲ್ಲಿ ಶಾಸಕರ ಕಚೇರಿ ಸ್ಥಾಪನೆ, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಾರಿಗೆ ಮುಂತಾದ ವಿಷಯಗಳನ್ನು ಶಾಸಕರ ಗಮನಕ್ಕೆ ತರಲಾಯಿತು.ಚಿಂತಕರ ಅಭಿವೃದ್ಧಿ ಸಲಹೆಗಳನ್ನು ಕೇಳಿದ ಶಾಸಕ ವಿಜಯಾನಂದ ಕಾಶಪ್ಪನವರ, `ಪಕ್ಷಭೇದ ಮರೆತು ಅಭಿವೃದ್ಧಿ ಕಾರ್ಯ ಮಾಡುವೆ. ಚಿಂತಕರು ಮತ್ತು ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಯಂತೆ ಸಾಗುವೆ. ಮರೋಳ ಏತ ನೀರಾವರಿ ಮತ್ತು ಹನಿ ನೀರಾವರಿ ವಿಷಯದಲ್ಲಿನ ಗೊಂದಲಕ್ಕೆ ಪರಿಣತರೊಂದಿಗೆ ಚರ್ಚಿಸಿ ಕಾಮಗಾರಿ ಅನುಷ್ಠಾನಕ್ಕೆ ಸರ್ಕಾರವನ್ನು ಒತ್ತಾಯಿಸುವೆ. ಅಭಿವೃದ್ಧಿಗೆ ಸದಾ ಸಿದ್ಧವಿದ್ದು ಹಿರಿಯ ಸಲಹೆಯಂತೆ ಮುಂದಡಿಯಿಡುವೆ' ಎಂದರು.ಚಿಂತಕರ ವೇದಿಕೆ ಗೌರಾವಾಧ್ಯಕ್ಷ ಎಸ್.ಜಿ. ಪರೂತಿ, ಅಧ್ಯಕ್ಷ ಮಹೇಶ ತಿಪ್ಪಶೆಟ್ಟಿ, ಸದಸ್ಯರಾದ ಎಂ.ಎನ್. ತೆನಿಹಳ್ಳಿ, ಎಂ.ಸಿ. ಅಕ್ಕಿ, ಎಂ.ಎಸ್. ವಾಲಿ, ಕೆ.ಎಂ. ಸಾರಂಗಮಠ, ಎನ್. ಎಚ್. ಹಿರೇಮಠ, ಮಲ್ಲಣ್ಣ ಬಮ್ಮಸಾಗರ, ಡಾ.ಮಹಾಂತೇಶ ಕಡಪಟ್ಟಿ, ಕಾರ್ಯದರ್ಶಿ ಎಸ್ಕೆ ಕೊನೆಸಾಗರ, ಸಂಘಟನಾ ಕಾರ್ಯದರ್ಶಿ ಶರಣು ಕೋಟಿ ಮತ್ತು ಜಾಕೀರ್‌ಹುಸೇನ ಗಡೇದ, ನಾಗರಿಕ ಸೇವಾ ಸುಧಾರಣಾ ಸಮಿತಿ ಜಿ.ಬಿ. ಕಂಬಾಳಿಮಠ, ಹಿರಿಯ ವಕೀಲ ಬಿ.ವಿ. ಪಾಟೀಲ, ಸಹಕಾರಿ ಮುಖಂಡ ಬಸವರಾಜ ಗದ್ದಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ದಪ್ಪ ಹೊಸೂರ, ಮುಖಂಡರಾದ ಐ.ಜಿ. ಗಡೇದ ಮತ್ತು ಶೇಖರಪ್ಪ ಬಾದವಾಡಗಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.