ಸೋಮವಾರ, ಮಾರ್ಚ್ 8, 2021
19 °C
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ

ಪ್ರಚಾರಕ್ಕೆ 5 ವಾಹನಗಳಿಗೆ ಮಾತ್ರ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಚಾರಕ್ಕೆ 5 ವಾಹನಗಳಿಗೆ ಮಾತ್ರ ಅನುಮತಿ

ದೇವನಹಳ್ಳಿ : ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ ಐದು ವಾಹನಗಳಿಗೆ ಮಾತ್ರ ಅನುಮತಿ ನೀಡುವಂತೆ ಜಿಲ್ಲಾ ಪಂಚಾಯಿತಿ ಚುನಾವಣಾಧಿಕಾರಿ ರವಿ ಎಂ. ತೀರ್ಲಾಪೂರ್ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಯಾವುದೇ ಪಕ್ಷದ ಸಭೆಯಲ್ಲಿ ಕನಿಷ್ಠ ಐದು ಮಂದಿ ಕಾರ್ಯಕರ್ತರು ಕುಳಿತು ಸಭೆ ನಡೆಸಿದರೂ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದರು.ಬಂಟಿಂಗ್, ಬ್ಯಾನರ್, ಕಟೌಟ್‌ಗೆ ಅವಕಾಶವಿಲ್ಲ. ಅಕಸ್ಮಿಕವಿದ್ದರೆ ಸಾರ್ವಜನಿಕರ ಕಣ್ಣಿಗೆ ಕಾಣುವಂತಿರಬಾರದು ಯಾವುದೇ ಪಕ್ಷದ ಬ್ಯಾನರ್‌ಗೆ ಅವಕಾಶವಿಲ್ಲ, ಕರ ಪತ್ರಗಳು ಮತ್ತು ಮತ ಪತ್ರ ನಮೂನೆ ಮಾದರಿ ಮುದ್ರಣದ ಬಗ್ಗೆ ಹಣ ಸಂದಾಯ ಮಾಡಿರುವ ರಸೀದಿ ಪಡೆದುಕೊಳ್ಳಬೇಕು.ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಧ್ವನಿ ವರ್ಧಕಕ್ಕೆ ಅವಕಾಶವಿದೆ ಇದನ್ನು ಮೀರಿದರೆ ಪೊಲಿಸರು ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನಲಾಗಿದೆ. ತಹಸೀಲ್ದಾರ್ ಕೇಶವಮೂರ್ತಿ ಮಾತನಾಡಿ ಬಹುತೇಕ ಚುನಾವಣಾ ಪ್ರಚಾರ ಸಭೆ, ಸಮಾರಂಭ ತಾಲ್ಲೂಕು ಕೇಂದ್ರ ಅಥವಾ ಪುರಸಭೆ ವ್ಯಾಪ್ತಿಯಲ್ಲಿ ನಡೆಯುವುದರಿಂದ ಪಕ್ಷದ ಯಾವುದೇ ರೀತಿಯ ಜಾಹೀರಾತುಗಳಿಗೆ ಅವಕಾಶವಿಲ್ಲ ಇದ್ದಲ್ಲಿ ಪುರಸಭೆ ತೆರವುಗೊಳಿಸಬೇಕು ಎನ್ನಲಾಗಿದೆ.ಅಮಾನತ್ತಿಗೆ ಒತ್ತಾಯ: ಗ್ರಾಮ ಪಂಚಾಯಿತಿ ಪರಿಶಿಷ್ಟರ ಶೇಕಡ 25 ರ ಅಡಿಯಲ್ಲಿನ ಅನುದಾನದಲ್ಲಿ ಅಡುಗೆ ಅನಿಲ ಪಡೆಯಲು ಫಲಾನುಭವಿಗಳಿಗೆ ಗುಪ್ತವಾಗಿ ಚೀಟಿ ನೀಡುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಪಿ.ಡಿ.ಓ ರನ್ನು ಅಮಾನತ್ತು ಮಾಡಬೇಕೆಂದು  ಮೀಸಗಾನಹಳ್ಳಿ ಕೃಷ್ಣಪ್ಪ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆರೇಳು ಗ್ರಾಮಗಳಲ್ಲಿನ ಅರ್ಹ ಪರಿಶಿಷ್ಟರಿಗೆ ಈಗಾಗಲೆ ಅಡುಗೆ ಅನಿಲ ಮತ್ತು ಹೊಲಿಗೆ ಯಂತ್ರ ವಿತರಿಸಲಾಗಿದೆ , ಅದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ ) ಸ್ಥಳಿಯ ಜೆ.ಡಿ.ಎಸ್ ಮುಖಂಡರ ಒತ್ತಡಕ್ಕೆ ಮಣಿದು ಖಾಸಗಿ ಅಡುಗೆ ಅನಿಲ (ಇಂಡೇನ್ ) ಎಜೆನ್ಸಿ ಮೂಲಕ ವಿತರಣೆಗೆ ಕಾಳಜಿ ವಹಿಸಿರುವುದು ಚುನಾವಣಾ ನೀತಿ ಸಂಹಿತೆ ಸ್ಪಷ್ಠವಾಗಿ  ಉಲ್ಲಂಘಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.