ಮಂಗಳವಾರ, ಏಪ್ರಿಲ್ 13, 2021
25 °C

ಪ್ರಚಾರ ಭರಾಟೆಯಲ್ಲಿ ಕಂಪೆನಿಗಳು

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಎಂದೇ ಪರಿಗಣಿತವಾದ `ಕಡಲೆ~ ಬೆಳೆಗೆ ಕೀಟಬಾಧೆ ವ್ಯಾಪಕವಾಗಿ ಪರಿಣಮಿಸಿದೆ.  ರೈತರು ಕೀಟಬಾಧೆ ನಿಯಂತ್ರಣಕ್ಕಾಗಿ ರಾಸಾಯನಿಕ ಸಿಂಪಡಣೆಗೆ ಮುಂದಾಗಿರುವ ಬೆನ್ನಲ್ಲೇ, ಖಾಸಗಿ ಕಂಪೆನಿಗಳು ತಮ್ಮ ತಮ್ಮ ಉತ್ಪನ್ನಗಳನ್ನು ಸಿಂಪಡಿಸುವಂತೆ ಭರ್ಜರಿ ಪ್ರಚಾರಕ್ಕೆ ಮುಂದಾಗಿವೆ. ವಿವಿಧ ರಾಸಾಯನಿಕ ಕಂಪೆನಿಗಳು ರಾಸಾಯ ನಿಕಗಳ ಸಿಂಪಡಣೆಯಿಂದಾಗಬಹುದಾದ ಪ್ರಯೋಜನಗಳ ಕುರಿತಾದ ಚಿತ್ರಗಳ ವಿವರಗಳಿರುವ ಬೃಹತ್ ಕಟೌಟ್‌ಗಳನ್ನು ಪ್ರಚಾರದ ವಾಹನಗಳ ಹಿಂಭಾಗದಲ್ಲಿ ಕಟ್ಟಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಜೊತೆಗೆ 10 ರಿಂದ 12 ಜನರ ತಂಡ ತಮ್ಮ ಕಂಪೆನಿಯ ರಾಸಾಯನಿಕ ಸಿಂಪಡಣೆಯಿಂದ ಕೀಟಬಾಧೆ, ಕಳೆ ನಿಯಂತ್ರಣ, ಬೆಳೆ ಇಳುವರಿ, ದರ ಸೇರಿದಂತೆ ವಿವಿಧ ವಿಷಯ ಕುರಿತು ಪ್ರಚಾರದಲ್ಲಿ ತೊಡಗಿವೆ.

ಇದರೊಂದಿಗೆ ಇತರ ಕಂಪೆನಿಗಳಿಗಿಂತ ತಮ್ಮ ಕಂಪೆನಿ ರಾಸಾಯನಿಕ ಅತ್ಯಂತ ಶ್ರೇಷ್ಠ ಎಂದು ಬಿಂಬಿಸುತ್ತಿವೆ. ಜೊತೆಗೆ ಇತರ ಕಂಪೆನಿಗಳಿಗೂ ತಮಗಿರುವ ವ್ಯತ್ಯಾಸಗಳ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಲು ಮುಂದಾಗುತ್ತಿವೆ. ಸ್ಯಾಂಪಲ್ ನೀಡುತ್ತಿವೆ:
ವಿವಿಧ ರಾಸಾಯನಿಕ ಕಂಪೆನಿಗಳು ತಾಲ್ಲೂಕಿನ ಪ್ರಮುಖ ಪಟ್ಟಣಗಳಲ್ಲಿನ ಗೊಬ್ಬರದ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಲ್ಲಿಯ ರಾಸಾಯನಿಕ ಕಾರ್ಯವೈಖರಿಯ ಬಗ್ಗೆ ತಿಳಿಸುತ್ತವೆ. ಜೊತೆಗೆ ಅವುಗಳನ್ನೇ ಮಾರಾಟ ಮಾಡುವಂತೆ ಕೇಂದ್ರಗಳ ಮಾಲೀಕರನ್ನು ಒತ್ತಾಯಿಸುತ್ತಿವೆ. 250 ಎಂ.ಎಲ್.ನ ಅನೇಕ ರಾಸಾಯನಿಕ ಬಾಟಲಿಗಳನ್ನು ಸ್ಯಾಂಪಲ್ ರೂಪದಲ್ಲಿ ನೀಡುತ್ತಿವೆ.ಆದರೆ, ಕಂಪೆನಿಗಳಿಂದ ಸ್ಯಾಂಪಲ್ ರೂಪದಲ್ಲಿ ಪಡೆಯುವ ಗೊಬ್ಬರದ ಕೇಂದ್ರಗಳು ರೈತರಿಗೆ ಮಾರಾಟ ಮಾಡುತ್ತಿವೆ. ಇದರಿಂದಾಗಿ ಗೊಬ್ಬರದ ಕೇಂದ್ರಗಳಿಗೆ ಲಾಭದ ಹೊಳೆಯೇ ಹರಿಯುತ್ತಿದೆ ಎಂಬುದು ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ ಅವರ ವಾದ.  ಖಾಸಗಿ ಕಂಪೆನಿಯ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಬೆಳೆಗೆ ಅಡ್ಡ ಪರಿಣಾಮ ಜಾಸ್ತಿಯಾಗುತ್ತದೆ. ಇದರಿಂದ ರೈತರು ಕೂಡ ಆತಂಕಗೊಂಡಿದ್ದರೆ.ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಪ್ರೋಪೋನಾಪಾಸ್, ಎಂಡಾಸ್ಟಿಕ್ ಆರ್ಬ ಉತ್ತಮ ಫಲಿತಾಂಶ ನೀಡಿವೆ. ಹೀಗಾಗಿ ರೈತರು ಇಲಾಖೆ ನೀಡುವ ರಾಸಾಯನಿಕ ಸಿಂಪಡಿಸುವುದು ಸೂಕ್ತ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್ ರೈತರಿಗೆ ಸಲಹೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.