ಸೋಮವಾರ, ಜೂನ್ 21, 2021
21 °C

ಪ್ರಚೋದನಕಾರಿ ಭಾಷಣ ನಿಯಂತ್ರಣಕ್ಕೆ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ರಾಜಕೀಯ, ಸಾಮಾ­­­­­ಜಿಕ, ಮತ್ತು ಧಾರ್ಮಿಕ ನಾಯ­ಕರು ಮಾಡುವ ಪ್ರಚೋ­ದನ­ಕಾರಿ ಭಾಷ­ಣದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗ­­­ಸೂಚಿ ರೂಪಿಸುವ ಕುರಿತು ಪರಿ­ಶೀ­ಲಿ­­ಸು­ವಂತೆ ಬುಧವಾರ ಸುಪ್ರೀಂ­ಕೋರ್ಟ್‌ ಕಾನೂನು ಆಯೋಗಕ್ಕೆ ಸೂಚಿಸಿದೆ.ತಾನೇ ಸ್ವತಃ ಮಾರ್ಗಸೂಚಿ ರೂಪಿ­ಸಲು ನಿರಾಕರಿಸಿದ ನ್ಯಾಯ­ಮೂರ್ತಿ ಬಿ.ಎಸ್‌.­ ­ಚವಾಣ್‌ ನೇತೃತ್ವದ ಪೀಠ, ಈ ವಿಷ­ಯದ ಕುರಿತು ಪರಿಶೀಲಿಸಿ ಕೇಂದ್ರಕ್ಕೆ ಶಿಫಾ­ರಸು ಸಲ್ಲಿಸುವಂತೆ ಕಾನೂನು ಆಯೋ­ಗವನ್ನು ಕೇಳಿ­ಕೊಂಡಿದೆ.ಪ್ರಚೋದನಕಾರಿ ಭಾಷಣಗಳು ಪ್ರಜಾ­­­ಪ್ರಭುತ್ವ ವ್ಯವಸ್ಥೆಯನ್ನು ನಾಶಗೊ­ಳಿ­ಸು­ತ್ತವೆ ಮತ್ತು ಕಾನೂನು ನಿಬಂಧನೆ­ಗಳನ್ನು ಉಲ್ಲಂಘಿಸುತ್ತವೆ. ಆದ್ದರಿಂದ ಅಂತಹ ಭಾಷಣಗಳ ನಿಯಂತ್ರಣಕ್ಕೆ ಮಾರ್ಗ­ಸೂಚಿ ರೂಪಿಸುವ ಅವಶ್ಯಕತೆ ಇದೆ ಎಂದು ‘ಪ್ರವಾಸಿ ಭಲಾಯ್‌ ಸಂಘಟನ್‌’ ಎಂಬ ಸರ್ಕಾರೇತರ ಸಂಸ್ಥೆ (ಎನ್‌ಜಿಓ) ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.ಮಹಾರಾಷ್ಟ್ರದಲ್ಲಿ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ ಠಾಕ್ರೆ ಪ್ರಚೋ­ದನ­ಕಾರಿ ಭಾಷಣ ಮಾಡಿದ್ದರು. ಆದರೆ ಅವರ ಮೇಲೆ ರಾಜ್ಯದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಈ ಅರ್ಜಿಯಲ್ಲಿ ಆರೋಪಿಸ­ಲಾಗಿದೆ. ಆಂಧ್ರಪ್ರದೇಶ­ದಲ್ಲಿ ‘ಆಲ್‌ ಇಂಡಿಯಾ ಮಜ್ಲಿಸ್‌–ಎ–ಇತ್ಲೆಹಾ­ದುಲ್‌ ಮುಸ್ಲಿಮೀನ್‌’ನ ಮುಖಂಡ ಅಕ್ಬರುದ್ದೀನ್‌ ಓವೈಸಿ ಕೂಡ ಪ್ರಚೋದನ­ಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಬಂಧನಕ್ಕೊಳ­ಗಾಗಿದ್ದರು. ಆದರೆ ಜಾಮೀನಿನ ಮೇಲೆ ಬಿಡುಗಡೆ­ಯಾದ ಅವರು ನಾಂದೇಡ್‌ನಲ್ಲಿ ಮತ್ತೆ ಅಂತ­ಹದ್ದೇ ಪ್ರಚೋದನಾ­ಕಾರಿ ಭಾಷಣ ಮಾಡಿದ್ದರು’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.